newsfirstkannada.com

ಕಿರುತೆರೆ ವೀಕ್ಷಕರ ಮನರಂಜಿಸಲು ಬರ್ತಿದೆ ಹೊಚ್ಚ ಹೊಸ ಪೌರಾಣಿಕ ಧಾರಾವಾಹಿ; ಆರಂಭ ಯಾವಾಗ?

Share :

Published June 27, 2024 at 6:12am

    ನೂತನ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಅರ್ಜುನ್ ರಮೇಶ್

    ವೀಕ್ಷಕರಲ್ಲಿ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಸಜ್ಜಾದ ಸ್ಟಾರ್‌ ಸುವರ್ಣ​

    ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಶುರುವಾಗುತ್ತಿದೆ ನೂತನ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ವೀಕ್ಷಕರಲ್ಲಿ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ ‘ಪಾರ್ವತಿ’ಯ ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ ‘ಶ್ರೀ ದೇವೀ ಮಹಾತ್ಮೆ’.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ ? ಹಾಗೂ ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ ‘ಶ್ರೀ ದೇವೀ ಮಹಾತ್ಮೆ’ಯ ಮುಖ್ಯ ಉದ್ದೇಶ. ಇನ್ನು, ಈ ಧಾರಾವಾಹಿಯು ಅದ್ಧೂರಿಯಾಗಿ, ಅಮೋಘ ಸೆಟ್​ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’; ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ಅಭಿಮಾನಿಗಳು

ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಜುಲೈ 1ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ” ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ದೇವಿಯ ಮಹಿಮೆಯನ್ನು‌ ಕಣ್ತುಂಬಿಕೊಳ್ಳುತ್ತಾ ಪುನೀತರಾಗಿ. “ಗೌರಿ ಶಂಕರ” ಧಾರಾವಾಹಿಯೂ ಬದಲಾದ ಸಮಯದಲ್ಲಿ ಸಂಜೆ 6.30 ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರುತೆರೆ ವೀಕ್ಷಕರ ಮನರಂಜಿಸಲು ಬರ್ತಿದೆ ಹೊಚ್ಚ ಹೊಸ ಪೌರಾಣಿಕ ಧಾರಾವಾಹಿ; ಆರಂಭ ಯಾವಾಗ?

https://newsfirstlive.com/wp-content/uploads/2024/06/new-aerial.jpg

Load More