ಇಷ್ಟೆಲ್ಲಾ ಆದಮೇಲೂ ತಾಂಡವ್ ಶ್ರೇಷ್ಠಾಳನ್ನು ಮದವೆ ಆಗ್ತಾನಾ?
ಶ್ರೇಷ್ಠಾಳ ಹೊಸ ಅವತಾರಕ್ಕೆ ಕಕ್ಕಾಬಿಕ್ಕಿಯಾದ ಭಾಗ್ಯ ಪತಿ ತಾಂಡವ್
ಎಲ್ಲೆಲ್ಲಿಯೂ ಶ್ರೇಷ್ಠಾ ಹಾಗೂ ತಾಂಡವ್ ಬಗ್ಗೆಯೇ ಜೋರು ಚರ್ಚೆ
ದಿನದಿಂದ ದಿನಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್ ಹೊಸ ಟ್ವಿಸ್ಟ್ ಅಂಡ್ ಟರ್ನ್ ಪಡೆದುಕೊಳ್ಳುತ್ತಿದೆ. ಅತ್ತೆ-ಸೊಸೆಯರ ಸೀರಿಯಲ್ ಕತೆಗಳಲ್ಲಿ ಪ್ರತಿ ಭಾರೀ ಜಗಳ, ಮುನಿಸು ಸರ್ವೇ ಸಾಮಾನ್ಯ. ಮೊಟ್ಟ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅತ್ತೆ ಸೊಸೆಯ ಕಾಂಬಿನೇಷನ್ನ ಮೈನ್ ಆಗಿ ಫೋಕಸ್ ಮಾಡಲಾಗಿದೆ. ಈ ಸೀರಿಯಲ್ನಲ್ಲಿ ಅತ್ತೆ ಸೊಸೆಯನ್ನ ತುಂಬಾ ಪಾಸಿಟಿವ್ ಆಗಿ ತೋರಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸೀರಿಯಲ್ಗೆ ಒಂದು ತೂಕ ಬಂದಿದೆ.
ಇದನ್ನೂ ಓದಿ: ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್ಗೆ ಭಾರೀ ಮೆಚ್ಚುಗೆ
ಇದರ ಮಧ್ಯೆ ಕಳೆದ ಎರಡು ವಾರಗಳಿಂದ ಶ್ರೇಷ್ಠಾ ಹಾಗೂ ತಾಂಡವ್ ಬಗ್ಗೆಯೇ ಸದ್ದು ಗದ್ದಲ. ಏಕೆಂದರೆ ಶ್ರೇಷ್ಠಾ, ತಾಂಡವ್ನನ್ನೇ ಮದುವೆ ಆಗಬೇಕು ಅಂತ ತುದಿಗಾಲಿನಲ್ಲಿ ನಿಂತಿದ್ದಾಳೆ. ಜೊತೆಗೆ ಭಾಗ್ಯಳ ಮೇಲೆ ಕೆಂಡ ಕಾರುತ್ತಿದ್ದಾಳೆ. ಆದರೆ ಮುದ್ದು ಮನಸ್ಸಿನ ಭಾಗ್ಯಗೆ ಗೊತ್ತಿಲ್ಲ ಕಿಲಾಡಿ ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಗಂಡ ತಾಂಡವ್ನನ್ನೇ ಅಂತ. ಇದರ ಬಗ್ಗೆ ಯಾವುದೇ ಅರಿವೆ ಇಲ್ಲದೇ ಶ್ರೇಷ್ಠಾಗೆ ಬುದ್ಧಿ ಮಾತು ಹೇಳುತ್ತಿದ್ದಾಳೆ. ಆದರೆ ಶ್ರೇಷ್ಠಾ ಮಾತ್ರ ಹೇಗಾದರೂ ಮಾಡಿ ನಾನು ತಾಂಡವ್ನನ್ನೇ ಮದುವೆ ಆಗೇ ಆಗ್ತೀನಿ ಅಂತ ಪಣ ತೊಟ್ಟಿದ್ದಾಳೆ.
ಇದೇ ಕೋಪದಲ್ಲಿರೋ ಶ್ರೇಷ್ಠಾ ತಾಂಡವ್ ಮುಂದೆ ನಾಳೆನೇ ನಮ್ಮಿಬ್ಬರ ಮದುವೆ ಅಂತ ಶಾಕ್ ಕೊಟ್ಟಿದ್ದಾಳೆ. ಇದೇ ಶಾಕ್ನಲ್ಲಿ ತಾಂಡವ್ ಶ್ರೇಷ್ಠಾ ಮೇಲೆ ಕೆಂಡಕಾರಿದ್ದಾನೆ. ಕೆಲವೊಂದು ಬದಲಾವಣೆ ಆಗಬೇಕು. ಈ ಮದುವೆ ಮೂಲಕವೇ ಆಗಬೇಕು. ಈ ಮದುವೆ ಮಾಡಿಕೊಂಡು ಭಾಗ್ಯಳ ಜಾಗಕ್ಕೆ ಬರಬೇಕು. ಅವಳಿಂದ ಎಲ್ಲ ಪಟ್ಟ ಕಿತ್ತುಕೊಳ್ಳಬೇಕು ಅದಕ್ಕಾಗಿಯೇ ನಾವು ನಾಳೆ ಮದುವೆ ಆಗಬೇಕು ಅಷ್ಟೇ ಅಂತ ಹೇಳಿದ್ದಾಳೆ.
View this post on Instagram
ಇದೇ ಪ್ರೋಮೋ ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಈಗ ನೋಡಿ ಮಾಜಾ ಬರುತ್ತೆ, ನೋಡಿ ನೋಡಿ ಶ್ರೇಷ್ಠಾ ನಾಗವಲ್ಲಿಯಾಗಿ ಬದಲಾಗ್ತಾ ಇರೋದನ್ನ, ಏನಪ್ಪಾ ಇದು ಟ್ವಿಸ್ಟ್ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯ ಮುಂದಿನ ಎಪಿಸೋಡ್ಗಳಲ್ಲಿ ಶ್ರೇಷ್ಠಾ ತಾಂಡವ್ ಮದುವೆ ಆಗುತ್ತಾ ಅಥವಾ ಭಾಗ್ಯ ಇದನ್ನು ತಡೆಯುತ್ತಾಳಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ