ದಿನ ಕಳೆದಂತೆ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಈ ಸೀರಿಯಲ್
ಈ ಬಾರಿ ಜನ ಮೆಚ್ಚಿದ ನಾಯಕಿ ಲಕ್ಷ್ಮಿಗೆ ಬರಬೇಕು ಎಂದ ಫ್ಯಾನ್ಸ್
ಕಾವೇರಿಯ ಸತ್ಯ ಬಯಲು ಮಾಡಲು ಮುಂದಾದ ಮುದ್ದಿನ ಸೊಸೆ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೆಯಾದ ಅಭಿಮಾನಿಗಳನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಟಾಪ್ ಸ್ಥಾನ ಪಡೆದುಕೊಂಡಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಇದನ್ನೂ ಓದಿ: ಕೀರ್ತಿ, ಲಕ್ಷ್ಮೀ ಇಬ್ಬರು ಬೇಡ.. ಕಾವೇರಿಗೆ ಬೇಕಾಗಿರೋ ಸೊಸೆ ಯಾರು; ಫ್ಯಾನ್ಸ್ ಸಖತ್ ಕ್ಲಾಸ್
ಅಬ್ಬಬ್ಬಾ..! ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟಕ್ಕೆ ಕರೆಸಿಕೊಂಡಿದ್ದ ಕೀರ್ತಿ ಸಾವನ್ನಪ್ಪಿದ್ದಾಳೆ. ಕೀರ್ತಿಯನ್ನು ಕಳೆದುಕೊಂಡ ದುಃಖ ವೈಷ್ಣವ್ ಕುಟುಂಬ ಮುಳುಗಿದೆ. ಆದರೆ ಸ್ವಲ್ಪವೂ ಪಶ್ಚಾತಾಪ ಇಲ್ಲದೆ ಇರೋ ಕಾವೇರಿ ಖುಷಿಯಲ್ಲಿ ತೇಲಾಡುತ್ತಿದ್ದಾಳೆ. ಒಳಗೊಂದು ಹೊರಗೊಂದು ಮನಸ್ಥಿತಿಯಲ್ಲಿ ಇರುವ ಕಾವೇರಿ ಕಣ್ಣೀರು ಹಾಕುತ್ತಿದ್ದಾಳೆ.
ಒಂದು ಕಡೆ ವೈಷ್ಣವ್ ಹಾಗೂ ಲಕ್ಷ್ಮೀ ಕಣ್ಣೀರು ಹಾಕುತ್ತಿದ್ದರೆ ಮತ್ತೊಂದು ಕಡೆ ಕೀರ್ತಿ ಸಾವನ್ನು ಕಾವೇರಿ ಸಂಭ್ರಮಿಸುತ್ತಿದ್ದಾಳೆ. ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದಿದ್ದ ಕಾವೇರಿಗೆ ಲಕ್ಷ್ಮೀಯ ದೇಹದಲ್ಲಿ ಕೀರ್ತಿಯನ್ನು ನೋಡಿ ಅಕ್ಷರಶಃ ಬೆಚ್ಚಿ ಬಿದ್ದಿದ್ದಾಳೆ. ಕಾವೇರಿ ಮೋಸದ ಆಟಕ್ಕೆ ಬಲಿಯಾದ ಕೀರ್ತಿಗೆ ಶ್ರದ್ದಾಂಜಲಿ ಸಲ್ಲಿಸೋಕೆ ಮುಂದಾಗಿದ್ದ ಕುಟುಂಬಸ್ಥರಿಗೆ ಶಾಕ್ ಆಗಿದೆ. ಸತ್ತ ಕೀರ್ತಿಗೆ ಶ್ರದ್ದಾಂಜಲಿ ಸಲಿಸುತ್ತಿದ್ದಾಗ ವೈಷ್ಣವ್ ಹಾಡಿದ್ದ ಹಾಡನ್ನೇ ಹಾಕಿಕೊಂಡು ಲಕ್ಷ್ಮೀ ಡ್ಯಾನ್ಸ್ ಮಾಡಿದ್ದಾಳೆ. ಇದನ್ನೇ ನೋಡಿದ ಕುಟುಂಬಸ್ಥರು ಫುಲ್ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: ಫೋಟೋ ರಿಲೀಸ್‌ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!
ಕೀರ್ತಿಯ ಆತ್ಮ ಲಕ್ಷ್ಮೀ ಮೇಲೆ ಬಂದು ಬಿಡ್ತಾ ಅಂತ ಕಾವೇರಿಯ ಎದೆಯಲ್ಲಿ ನಡುಕ ಶುರುವಾಗಿದೆ. ಇತ್ತ ಮನೆಯವರೆಲ್ಲಾ ಲಕ್ಷ್ಮೀ ದೇಹದಲ್ಲಿ ಕೀರ್ತಿಯ ಆತ್ಮ ಆಹ್ವಾನ ಮಾಡಿದೆ ಅಂತ ಅಂದುಕೊಳ್ಳುತ್ತಿದ್ದಾರೆ. ಇದು ನಿಜವಾಗಲೂ ಲಕ್ಷ್ಮೀಯೋ ಅಥವಾ ಕೀರ್ತಿಯೋ ಇಲ್ಲ, ಕಾವೇರಿಗೆ ಬುದ್ದಿ ಕಲಿಸಲು ಲಕ್ಷ್ಮೀ ಆಡುತ್ತಿರುವ ನಾಟಕವೋ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇದೇ ಸೀನ್ ನೋಡಿದ ವೀಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಜನ ಮೆಚ್ಚಿದ ಸ್ಟೈಲ್ ಐಕಾನ್ ಫೀಮೇಲ್ ಕೀರ್ತಿಗೆ ನೀವು ಏನ್ ಅಂತೀರಾ? ಏನೇ ಹೇಳಿ ಇವಾಗ ಒಂದು ಕಳೆ ಬಂತು ಸೀರಿಯಲ್ಗೆ ಲಕ್ಷ್ಮಿ ಡ್ಯಾನ್ಸ್ ಮಾತ್ರ ಬೆಂಕಿ, ಜನ ಮೆಚ್ಚಿದ ನಾಯಕಿ ಲಕ್ಷ್ಮಿಗೆ ಬರಬೇಕು, ಕಾವೇರಿಗೆ ತಕ್ಕ ಪಾಠ ಆಗಬೇಕು ಲಕ್ಷ್ಮಿ ಹಾಗೇ ಪಾಠ ಕಲಿಸು, ಇವಳೇ ಅವಳು ಅವಳೇ ಇವಳು ಆದ್ರೆ ಇವಳು ಅವಳಲ್ಲ ಅವಳು ಇವಳಲ್ಲ, ಕಥೆ ಚೆನ್ನಾಗಿದೆ ಅಂತ ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ