Advertisment

ಮುಡಾ ಕೇಸ್​ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಮತ್ತೊಂದು ಕೇಸ್​..!

author-image
Ganesh
Updated On
ಮುಡಾ ಕೇಸ್​ಗೆ ಹೊಸ ಟ್ವಿಸ್ಟ್; ಸಿಎಂ ಕುಟುಂಬದ ವಿರುದ್ಧ ಮತ್ತೊಂದು ಕೇಸ್​..!
Advertisment
  • ಮೈಲಾರಯ್ಯ ಮಗಳು ಜಮುನಾರಿಂದ ಕೋರ್ಟ್​ನಲ್ಲಿ ದಾವೆ
  • ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಎಂದು ಕೇಸ್
  • ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಫೈಲ್

ಮೈಸೂರು: ಮುಡಾ ಸೈಟ್​ಗಳ ಹಗರಣ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಅಣ್ಣನ ಮಗಳು ಜಮುನಾ ಅವರು ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ.

Advertisment

ಕೆಸರೆ ಗ್ರಾಮದ ಸರ್ವೆ ನಂ.464ರ 3.16 ಎಕರೆ ಜಾಗ ಸಂಬಂಧ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜಮುನಾ ಅವರು, ತನಗೆ ಪಾಲು ಬರಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ನಿ ಸೇರಿ 12 ಜನರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಸಿಎಂ ಕುಟುಂಬಕ್ಕೆ ಮಾರಾಟವಾಗಿರುವ ಜಮೀನು ಸಂಬಂಧ ದಾಖಲಾದ ಕೇಸ್ ಇದಾಗಿದೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧವೂ ದಾವೆ ಹೂಡಿದ್ದಾರೆ. ಜೊತೆಗೆ ಸ್ವಂತ ದೊಡ್ಡಪ್ಪ ದೇವರಾಜು ಮತ್ತು ಕುಟುಂಬದವರನ್ನೂ ಎದುರಾಳಿಯನ್ನಾಗಿ ಮಾಡಿದ್ದಾರೆ. ಸಿ.ಎನ್.ಆರ್. ನಂಬರ್ KAMS020031832024ರ ಅಡಿಯಲ್ಲಿ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯಾರು ಈ ಜಮುನಾ..?

ಮುಡಾ ಹಗರಣದಲ್ಲಿ ಆಸ್ತಿಯನ್ನು ಮಾರಿರುವ ದೇವರಾಜ್ ಅವರ ಸಹೋದರ (ಮೈಲಾರಯ್ಯ) ಪುತ್ರಿ ಜಮುನಾ. ನಾವು ನಾಲ್ಕು ತಿಂಗಳ ಹಿಂದೆ ಕೋರ್ಟ್​ನಲ್ಲಿ ಕೇಸ್​ ದಾಖಲಿಸಿದ್ದೇವೆ. ನಮಗೆ ದೇವರಾಜ್ ಅವರು ದೊಡ್ಡಪ್ಪ ಆಗಬೇಕು. ನಮಗೆ ಅಜ್ಜನ ಜಮೀನು ಇತ್ತು ಅನ್ನೋದು ನಮಗೆ ಗೊತ್ತಿರಲಿಲ್ಲ. ನಮ್ಮ ತಂದೆ ತೀರಿ ಸುಮಾರು 35 ವರ್ಷವಾಗಿದೆ. ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ನಮಗೆ ಜಮೀನು ಇರೋದು ಗೊತ್ತಾಗಿದೆ. ನಮ್ಮ ದೊಡ್ಡಪ್ಪ ಜಮೀನು ಮಾರಾಟ ಮಾಡುವಾಗ ನಮಗೆ ಯಾವ ವಿಷಯವನ್ನೂ ತಿಳಿಸಿಲ್ಲ. ನನ್ನ ತಮ್ಮನಿಗೆ ಸಮಪಾಲು ನೀಡ್ತೀನಿ ಎಂದು ಹೇಳಿಕೊಂಡು, ನನ್ನ ಹೆಸರನ್ನು ಬಿಟ್ಟು ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೋರ್ಟ್​ಗೆ ಹೋಗಿದ್ದೇವೆ. ನಮಗೆ ನಮ್ಮ ಪಾಲು ನೀಡಿದರೆ ಸಾಕು ಎಂದು ಜಮುನಾ ಆಗ್ರಹಿಸಿದ್ದಾರೆ.

ಯಾಱರ ಮೇಲೆ ದಾವೆ?

01. ಮಂಜುನಾಥ್ ಸ್ವಾಮಿ
02. ಜೆ.ದೇವರಾಜು
03. ಸರೋಜಮ್ಮ
04. ಡಿ.ಶೋಭಾ
05. ಡಿ.ದಿನಕರ್
06. ಡಿ.ಪ್ರಭಾ
07. ಡಿ.ಪ್ರತಿಭಾ
08. ಡಿ.ಶಶಿಧರ್
09. ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ
10. ಡಿ.ಎನ್‌.ಪಾರ್ವತಿ
11. ಮುಡಾದ ಮಾಜಿ ಆಯುಕ್ತ
12. ಮಾಜಿ ಜಿಲ್ಲಾಧಿಕಾರಿ

Advertisment

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​ಗೆ ಮಹಾ ಸೋಲು.. ರಾಹುಲ್​ ಗಾಂಧಿ ಕಡೆ ಬೊಟ್ಟು; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment