newsfirstkannada.com

ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಟ್ಟ ಶ್ರೀರಸ್ತು ಶುಭಮಸ್ತು ಸೀರಿಯಲ್​​ ತಂಡ; ಏನದು..?

Share :

16-07-2023

    ಹೊಸ ರೂಪದಲ್ಲಿ ಮನರಂಜನೆ ನೀಡಲು ಶ್ರೀರಸ್ತು ಶುಭಮಸ್ತು ರೆಡಿ

    ದೀಪಾ ಭಾಸ್ಕರ್​ ಮಾಧವನ ಲೈಫ್​ಗೆ ಹೊಸ ಟ್ವಿಸ್ಟ್​​ ಌಂಡ್​ ಟರ್ನ್​

    ಸುಬ್ಬಲಕ್ಷ್ಮಿ ಸಂಸಾರದ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ದೀಪಾ

ಸುಬ್ಬಲಕ್ಷ್ಮಿ ಸಂಸಾರದ ಸುಬ್ಬಿ ಈಗ ಸಮನ್ವಿತಾ. ಸುಬ್ಬಲಕ್ಷ್ಮಿಯನ್ನು ತೆರೆ ಮೇಲೆ ಮಿಸ್​ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಸಂತೋಷದ ಸುದ್ದಿ ಇದಾಗಿದೆ. ಹೊಸ ರೂಪದಲ್ಲಿ ಮನರಂಜನೆ ನೀಡಲು ಬಂದಿರೋ ಸುಬ್ಬಿ, ದೀಪಾ ಭಾಸ್ಕರ್​ ಮಾಧವನ ಲೈಫ್​ಗೆ ಹೊಸ ತಿರುವು ನೀಡಲಿದ್ದಾರೆ. ಹೌದು, ಸುಬ್ಬಲಕ್ಷ್ಮಿ ಸಂಸಾರದ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ದೀಪಾ, ಈಗಲೂ ಅದೇ ಸುಬ್ಬಿಯಾಗಿ ಉಳಿದುಕೊಂಡಿದ್ದಾರೆ.

ಸೀರಿಯಲ್ ಮುಕ್ತಾಯುದ ಬಳಿಕ ಹಲವು ವರ್ಷಗಳ ಗ್ಯಾಪ್​ ತೆಗೆದುಕೊಂಡಿದ್ದ ನಟಿ ಮತ್ತೆ ಕಿರುತೆರೆಗೆ ಮರಳಿದ್ದು, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅತಿಥಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು, ಫೇಮಸ್​ ಪತ್ರಕರ್ತೆ ಸಮನ್ವಿತಾ ಎಂಬ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಅಂದ್ಹಾಗೆ, ಮಾಧವ-ತುಳಿಸಿ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದ್ದು, ಇದಕ್ಕೆ ಸ್ಪಷ್ಟನೆ ನೀಡುವ ದೃಶ್ಯವನ್ನ ಶೂಟ್​ ಮಾಡಲಾಗುತ್ತಿದೆ.

ಇನ್ನು, ಈ ಸೀನ್​ನಲ್ಲಿ ಸಂದರ್ಶಕಿಯಾಗಿದ್ದಾರೆ ಸುಬ್ಬಿ. ತುಳಸಿ-ಮಾಧವ ಜೀವನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ದೀಪಾ ಎಂಟ್ರಿಯಿಂದ ಕತೆಗೆ ಮತ್ತೊಂದು ತಿರುವು ನೀಡಲಿದ್ದಾರೆ ನಿರ್ದೇಶಕರು ಎಂಬುವುದು ಸದ್ಯದ ಸಾರಂಶ. ಒಟ್ಟಿನಲ್ಲಿ ಆಗೊಮ್ಮೆ ಈಗೊಮ್ಮೆ ಕಿರುತೆರೆಗೆ ಇಣುಕುತ್ತಿರುವ ದೀಪಾ ಫುಲ್​ ಪ್ಲೆಜ್ಡ್​ ಆಗಿ ಅಭಿನಯಿಸಬೇಕು ಎಂಬುವುದು ವೀಕ್ಷಕರ ಆಶಯ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಟ್ಟ ಶ್ರೀರಸ್ತು ಶುಭಮಸ್ತು ಸೀರಿಯಲ್​​ ತಂಡ; ಏನದು..?

https://newsfirstlive.com/wp-content/uploads/2023/07/zee-kannada-2.jpg

Load More