ಗೀತಾ-ವಿಜಿ ಮದುವೆ.. ವೀಕ್ಷಕರು ಫುಲ್ ಖುಷ್..!
ತಾಳಿ ಕೊಟ್ಟೋ ಕೊನೇ ಕ್ಷಣದವರೆಗೂ ಗೆದ್ದು-ಸೋತ ಭಾನುಮತಿ
ಭಾನುಮತಿ ಅಂಡ್ ಗ್ಯಾಂಗ್ ಮುಂದಿನ ಪ್ಲಾನ್ ಏನು..?
ಕೊನೆಗೂ ಸೀರಿಯಲ್ನಲ್ಲಿ ‘ಗೀತಾ-ವಿಜಿ ಮದ್ವೆ ಆಗಿದ್ದಾರೆ’ ಅಂದರೆ ‘ಏನು ತೋಳ ಬಂತು ತೋಳ’ ಕಥೆ ಹೇಳ್ತಿದ್ಯಾ ಅಂತಾ ‘ಗೀತಾ’ ಅಭಿಮಾನಿಗಳು ಕೇಳಬಹುದು. ಯಾಕಂದರೆ ಅಷ್ಟರ ಮಟ್ಟಿಗೆ ವಿಜಿ ಮತ್ತು ಗೀತಾಳ ಕಥೆ ನಡುವೆ ತಿರುವು ಪಡೆದುಕೊಂಡಿದೆ. ನಾವೀಗ ನಿಜ ಹೇಳ್ತಿದ್ದೀವಿ, ಕೊನೆಗೂ ಗೀತಾ ಮತ್ತು ವಿಜಯ್ ಮದುವೆ ಆಗಿದ್ದಾರೆ, ಸೂರ್ಯಪ್ರಕಾಶ್ ಮನೆಯಲ್ಲಿ ಹೊಸ ಗಾಳಿ ಬೀಸಿದೆ.
ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಸೀರಿಯಲ್ ವೀಕ್ಷಕರು ನಿನ್ನೆ ಫುಲ್ ಖುಷ್ ಆಗಿದ್ದಾರೆ. ಕಾರಣ ಇಷ್ಟೇ, ಅದೆಷ್ಟೋ ಬಾರಿ ಪಾತ್ರದಲ್ಲಿ ಬರುವ ವಿಜಯ್ ಮತ್ತು ಗೀತಾಳ ಮದುವೆಯನ್ನು ಕಣ್ತುಂಬಿಕೊಳ್ಳಬೇಕು ಅಂತಾ ಕಾದಿದ್ದರು. ಮದುವೆ, ನಿಶ್ಚಿತಾರ್ಥ ಅಂತಾ ಬಂದಾಗಲೆಲ್ಲಾ, ಟ್ವಿಸ್ಟ್ಗಳು ಪಡೆದುಕೊಂಡು ಮದುವೆ ಮುರಿದು ಹೋಗಿದ್ದೇ ಹೆಚ್ಚು.
ನಿನ್ನೆಯ ಎಪಿಸೋಡ್ನಲ್ಲೂ ಹೀಗೆ ಆಗಬಹುದು ಅಂತಾ ವೀಕ್ಷಕರು ನಿರೀಕ್ಷೆ ಮಾಡಿದ್ದರು. ಆದರೆ ವೀಕ್ಷಕರ ನೆಗೆಟೀವ್ ಯೋಚನೆ ಸತ್ಯವಾಗಲಿಲ್ಲ. ತಾಳಿಕಟ್ಟುವ ಕೊನೆ ಗಳಿಗೆವರೆಗೂ ಭಾನುಮತಿ ಕಿತಾಪತಿಯಿಂದ ಕುತೂಹಲವಾಗಿಯೇ ಇತ್ತು. ಗೀತಾಳಿಗೆ ಮದುವೆ ಮಾಡಿಸಲೇಬೇಕು ಅಂತಾ ಬಂದಿದ್ದ ರಾಮಾಚಾರಿ, ಪ್ರೀತಿಸಿದ ಹುಡುಗ ವಿಜಯ್ನಿಂದ ಗೀತಾಳಿಗೆ ತಾಳಿ ಕಟ್ಟಿಸಿ ಹೆಣ್ಣು ಒಪ್ಪಿಸಿದ್ದಾರೆ.
ಗೀತಾ ಗೃಹ ಪ್ರವೇಶ ಮಾಡುತ್ತಿದ್ದಂತೆಯೇ, ದಿವಂಗತ ಸೂರ್ಯಪ್ರಕಾಶ ನಿವಾಸದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಭಾನುಮತಿ ಅಂಡ್ ಗ್ಯಾಂಗ್ ಮದುವೆ ವಿಚಾರದಲ್ಲಿ ಸೋತಿದ್ದು, ಕಂಗೆಟ್ಟು ಕೂತಿದ್ದಾರೆ. ಆದರೆ ಮೊದಲಿನಿಂದಲೂ ಸೀರಿಯಲ್ನಲ್ಲಿ ದೈತ್ಯ ಕ್ಯಾರೆಕ್ಟರ್ ಭಾನುಮತಿ ಟ್ವಿಸ್ಟ್ ಕೊಡುತ್ತಲೇ ಬಂದಿದ್ದಾಳೆ. ಹೀಗಾಗಿ ‘ಗೀತಾ’ ವೀಕ್ಷಕರು ನಾಳೆಯಿಂದ ಕಥೆಯಲ್ಲಿ ಏನು ತಿರುವುಪಡೆದುಕೊಳ್ಳಬಹುದು ಅನ್ನೋ ಮಾತುಕತೆಯಲ್ಲಿ ಮುಳುಗಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್