newsfirstkannada.com

ನಾಯಿ ಕಣ್ಣು, ನರಿ ಕಣ್ಣು.. ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?

Share :

10-11-2023

    ಪ್ರೀತಿಯ ಮೊಮ್ಮಗನನ್ನು ನೋಡಿ ದೃಷ್ಟಿ ತೆಗೆದ ಸುಂದರ ವಿಡಿಯೋ ಇದು

    ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ರಚಿನ್ ರವೀಂದ್ರ ಅವರ ತಂದೆ-ತಾಯಿ

    ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿರುವ ರಚಿನ್

ನ್ಯೂಜಿಲೆಂಡ್‌ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಬೆಂಗಳೂರು ಮೂಲದವರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೀಗ ರಚಿನ್ ರವೀಂದ್ರ ಅವರು ಬೆಂಗಳೂರಿನ ತಮ್ಮ ಅಜ್ಜ-ಅಜ್ಜಿ ಮನೆಗೆ ಭೇಟಿ ಕೊಟ್ಟು ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅಷ್ಟೇ ಅಲ್ಲ ರಚಿನ್‌ಗೆ ಅವರ ಅಜ್ಜಿ ದೃಷ್ಟಿ ತೆಗೆದ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.

ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಚಿನ್‌ ರವೀಂದ್ರ ಅವರು ಸದ್ಯ ಬೆಂಗಳೂರಿನಲ್ಲಿದ್ದಾರೆ. ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ಎದುರಿನ ಪಂದ್ಯದ ಬಳಿಕ ಬೆಂಗಳೂರಿನಲ್ಲೇ ಇರುವ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಪ್ರೀತಿಯ ಮೊಮ್ಮಗನನ್ನು ನೋಡಿದ ಅಜ್ಜಿ, ನಿನಗೆ ಯಾರು ಕಣ್ಣು ಬೀಳದಿರಲಿ ಅಂತ ದೃಷ್ಟಿ ತೆಗೆದಿದ್ದಾರೆ.

Rachin Ravindra at his grandparents home in Bengaluru.

– This is a beautiful video.pic.twitter.com/o7wgZ1mPiN

— Johns. (@CricCrazyJohns) November 10, 2023

ರಚಿನ್ ರವೀಂದ್ರಗೆ ದೃಷ್ಟಿ ತೆಗೆದಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮನಗೆದ್ದಿದೆ. ಈ ವೈರಲ್ ವಿಡಿಯೋ ನೋಡಿದ ಹಲವರು, ಇದು ಸುಂದರವಾದ ವಿಡಿಯೋ. ನಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೇಳಿದರು ನಮ್ಮ ಮೂಲ ಮರೆಯಬಾರದು ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಬಣ್ಣಿಸುತ್ತಿದ್ದಾರೆ.

ರಚಿನ್ ರವೀಂದ್ರ ಅವರ ತಂದೆ-ತಾಯಿ ನ್ಯೂಜಿಲೆಂಡ್‌ನಲ್ಲಿ ವಾಸವಾಗಿದ್ದಾರೆ. ನ್ಯೂಜಿಲೆಂಡ್‌ನಲ್ಲೇ ಹುಟ್ಟಿ ಬೆಳೆದ ರಚಿನ್‌ ರವೀಂದ್ರ ಅವರು ಈಗ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದ ಅಲ್‌ರೌಂಡರ್ ಆಗಿ ಮಿಂಚುತ್ತಿದ್ದಾರೆ. ಚೊಚ್ಚಲ ವಿಶ್ವಕಪ್‌ ಟೂರ್ನಿ ಆಡುತ್ತಿರುವ ರಚಿನ್ ಅವರು ಅಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ. 2023ರ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಮೂರು ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿ ಕಣ್ಣು, ನರಿ ಕಣ್ಣು.. ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?

https://newsfirstlive.com/wp-content/uploads/2023/11/ravindra.jpg

Load More