ರಚಿನ್ ರವೀಂದ್ರನ ಹಾರ್ಡ್ವರ್ಕ್ನಿಂದ ಇವತ್ತು ಆ ಸ್ಥಾನದಲ್ಲಿ ಇದ್ದಾನೆ
ರಚಿನ್ಗೆ ಅಜ್ಜಿ ಮಾಡೋ ದೋಸೆ, ಬೋಂಡಾ ಎಂದರೆ ತುಂಬಾ ಇಷ್ಟವಂತೆ
ಕರ್ನಾಟಕ, ಬೆಂಗಳೂರು ಎಂದರೆ ರಚಿನ್ ರವೀಂದ್ರಗೆ ತುಂಬಾ ಅಭಿಮಾನ
ದೀಪಾವಳಿ ಹಬ್ಬದ ಜೊತೆಗೆ ಪಟಾಕಿಗಳ ಸೌಂಡ್ ಕೂಡ ಜೋರಾಗಿದೆ. ಟೀಮ್ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದು ಭಾರತೀಯರಿಗೆ ದೀಪಗಳ ಹಬ್ಬದ ಗಿಫ್ಟ್ ಕೊಟ್ಟಿತ್ತು. ಸದ್ಯ 2023ರ ವಿಶ್ವಕಪ್ ಸೆಮಿಸ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಪಡೆ ವಾಂಖೆಡೆಯಲ್ಲಿ ಕಣಕ್ಕೆ ಇಳಿಯುತ್ತಿದೆ. ಎದುರಾಳಿ ಕಿವೀಸ್ ಪಡೆಯಲ್ಲಿ ಭಾರತೀಯ ಹಾಗೂ ಬೆಂಗಳೂರು ಹುಡುಗ ರಚಿನ್ ರವೀಂದ್ರ ಆಲ್ ರೌಂಡರ್ ಪ್ರದರ್ಶನ ನೀಡಲಿದ್ದಾರೆ. ಈ ಬಗ್ಗೆ ರಚಿನ್ ಅವರ ಅಜ್ಜ-ಅಜ್ಜಿ ನ್ಯೂಸ್ಫಸ್ಟ್ ಜೊತೆ ಮಾತನಾಡಿ, ಯಾವ ಟೀಮ್ಗೆ ಸಪೋರ್ಟ್ ಮಾಡುವುದಾಗಿ ಹೇಳಿದ್ದಾರೆ ಗೊತ್ತಾ?.
ವರ್ಲ್ಡ್ಕಪ್ನಲ್ಲಿ 3 ಬಾರಿ ಸೆಮಿಸ್ಗೆ ಬಂದು ಕಿವೀಸ್ ಯಾವುದೋ ಕಾರಣದಿಂದ ಮುಗ್ಗರಿಸುತ್ತಿದ್ದಾರೆ. ಈ ಬಾರಿ ಭಾರತ ಸೆಮಿಸ್ ಗೆಲ್ಲಬೇಕು ಎನ್ನುವುದು ನಮ್ಮ ಆಸೆ. ಇದರ ಜೊತೆಗೆ ಎಲ್ಲೋ ಒಂದು ಕಡೆ ನ್ಯೂಜಿಲೆಂಡ್ ಕೂಡ ಗೆಲ್ಲುತ್ತದೆ ಎಂಬ ಆಶಾಭಾವನೆ ಇದೆ. ನ್ಯೂಜಿಲೆಂಡ್ನಲ್ಲಿ ಆಡುತ್ತಿರುವ ರಚಿನ್ ರವೀಂದ್ರನ ಪ್ರದರ್ಶನ ಚೆನ್ನಾಗಿರಬೇಕು. ಭಾರತ ಗೆದ್ದರೂ ಮೊಮ್ಮಗನ ಆಟ ಅದ್ಭುತವಾಗಿರಬೇಕು ಎಂದು ಅವರ ಅಜ್ಜ ಹೇಳಿದ್ದಾರೆ.
ತಂದೆಯ ಎಲ್ಲ ಪಾಯಿಂಟ್ಸ್ ಕರೆಕ್ಟ್ ಆಗಿ ಕ್ಯಾಚ್ ಮಾಡಿದ್ದಾನೆ
ರಾಷ್ಟ್ರೀಯವಾಗಿ ನಾನು ಭಾರತಕ್ಕೆ ಸಪೋರ್ಟ್ ಮಾಡುತ್ತಿದ್ದೇನೆ. ಆದರೆ ವೈಯಕ್ತಿಕವಾಗಿ ನನ್ನ ಮೊಮ್ಮಗ ಚೆನ್ನಾಗಿ ಆಡಬೇಕು. ಹಾಗಂತ ಕಿವೀಸ್ ಸೋಲಬೇಕು ಅಂತೇನಿಲ್ಲ. ಆ ಟೀಮ್ ಕೂಡ ಗೆಲ್ಲಬಹುದು. ಅವನ ತಂದೆಯ ಪರಿಶ್ರಮ ಹಾಗೂ ರಚಿನ್ನ ಹಾರ್ಡ್ವರ್ಕ್ ಸೇರಿ ಇವತ್ತು ಆ ಸ್ಥಾನದಲ್ಲಿ ಮೊಮ್ಮಗ ಇದ್ದಾನೆ. ತಂದೆಯ ಎಲ್ಲ ಪಾಯಿಂಟ್ಸ್ ಕರೆಕ್ಟ್ ಆಗಿ ಕ್ಯಾಚ್ ಮಾಡಿ ಕ್ರಿಕೆಟ್ ಆಡಿ ಪಳಗಿದ್ದಾನೆ. 6 ವರ್ಷದವನಿದ್ದಾಗಿಂದ ಕ್ರಿಕೆಟ್ ಅನ್ನೇ ಆಡುತ್ತಿದ್ದಾನೆ. ವರ್ಷಕ್ಕೆ ಒಮ್ಮೆ ಮಾತ್ರ ಬೆಂಗಳೂರಿಗೆ ಬಂದು ಸ್ಟೇಡಿಯಂಗೆ ಭೇಟಿ ಕೊಡುತ್ತಿದ್ದ ಎಂದು ಅಜ್ಜಿ ಹೇಳಿದ್ದಾರೆ.
ಅವರ ತಂದೆಗೆ ರಾಹುಲ್ ದ್ರಾವಿಡ್, ಸಚಿನ್ ಎಂದರೆ ತುಂಬಾ ಪ್ರೀತಿ ಇತ್ತು. ಹೀಗಾಗಿ ರಚಿನ್ ಎಂದು ಹೆಸರಿಟ್ಟಿದ್ದಾರೆ. ರಚಿನ್ಗೆ ಕನ್ನಡ ಫ್ಲೂಯೆಂಟ್ ಆಗಿ ಮಾತನಾಡಲು ಆಗಲ್ಲ. ಆದ್ರೆ ನಾವು ಕನ್ನಡ ಮಾತನಾಡಿದ್ರೆ ಜೊತೆಯಾಗಿ ಮಾತನಾಡುತ್ತಾನೆ. ರಚಿನ್ಗೆ ಅಜ್ಜಿ ಮಾಡೋ ದೋಸೆ, ಬೋಂಡಾ ಎಂದರೆ ತುಂಬಾ ಇಷ್ಟ. ರಚಿನ್ದು ಸಾಫ್ಟ್ ನೇಚರ್. ಕರ್ನಾಟಕ, ಬೆಂಗಳೂರು ಎಂದರೆ ರಚಿನ್ಗೆ ತುಂಬಾ ಅಭಿಮಾನ ಇದೆ. ಈಗಿನ ಜನರೇಷನ್ಗೆ ಫುಲ್ ಫ್ರಿಡಂ ಬಿಟ್ಟಿದ್ದೇವೆ. ಎಲ್ಲಿಯಾದರೂ ಚೆನ್ನಾಗಿರೋ ಹುಡುಗಿನ ಮದುವೆ ಆಗಲಿ. ಈ ಸೆಮಿಸ್ನಲ್ಲಿ ಭಾರತ-ನ್ಯೂಜಿಲೆಂಡ್ ಎರಡರಲ್ಲಿ ಒಂದು ಗೆದ್ದು ಫೈನಲ್ಗೆ ಬಂದ್ರೆ ನಮಗೆ ಸಮಸ್ಯೆ ಇಲ್ಲ. ಒಂದು ವೇಳೆ ಕಿವೀಸ್ ಗೆದ್ದರೇ ಅದಕ್ಕೆ ಸಪೋರ್ಟ್ ಮಾಡುತ್ತೇವೆ ಎಂದು ರಚಿನ್ ಅವರ ಅಜ್ಜ, ಅಜ್ಜಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ