newsfirstkannada.com

×

Chandrayaan 3 ಸಕ್ಸಸ್​.. ಮಹೋನ್ನತ ಘಳಿಗೆಯನ್ನ ಸ್ಮರಿಸಲು ಶಿಶುಗಳಿಗೆ ‘ಚಂದ್ರಯಾನ’ ಎಂದು ಹೆಸರಿಟ್ಟ ಪೋಷಕರು!

Share :

Published August 24, 2023 at 3:45pm

Update August 24, 2023 at 3:47pm

    ಚಂದ್ರಯಾನ ಸಕಸ್ಸ್​​ ಸಮಯದಲ್ಲಿ ಹುಟ್ಟಿದ ಮಕ್ಕಳಿವರು

    ನಿನ್ನೆ ಹುಟ್ಟಿದ ಶಿಶುಗಳಿಗೆ ಚಂದ್ರಯಾನ ಎಂದು ನಾಮಕರಣ

    ಯಶಸ್ವಿಯಾದ ಭಾರತದ ಕನಸಿನ ನೌಕೆ ಚಂದ್ರಯಾನ 3

ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ಸಿಯಾಗಿದೆ. ನಿನ್ನೆ ಸಂಜೆ 6.04 ನಿಮಿಷಕ್ಕೆ ವಿಕ್ರಂ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದೆ. ಆ ಮೂಲಕ ವಿಶ್ವವೇ ಭಾರತದ ಸಾಧನೆ ಕಂಡು ಬೆಕ್ಕಸಬೆರಗಾಗಿದೆ. ಇಂತಹ ಮಹೋನ್ನತ ಘಳಿಗೆಯಲ್ಲಿ ಜನಿಸಿದ ಶಿಶುಗಳಿಗೆ ಹಲವು ಪೋಷಕರು ಚಂದ್ರಯಾನ ಎಂದು ನಾಮಕರಣ ಮಾಡಿರುವುದು ಬೆಳಕಿಗೆ ಬಂದಿದೆ.

ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಜನಿಸಿದ ಶಿಶುಗಳಿಗೆ ಅದರ ಪೋಷಕರು ಚಂದ್ರಯಾನ ಎಂದು ನಾಮಕರಣ ಮಾಡಿದ್ದಾರೆ.

ಅಂದಹಾಗೆಯೇ, ಸಂಜೆ ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದೆ. ಈ 5 ಮಕ್ಕಳಿಗೆ ಚಂದ್ರಯಾನ ಎಂದು ಹೆಸರನ್ನಿಟ್ಟಿದ್ದಾರೆ.

ಚಂದ್ರಯಾನ-3 ಸಕ್ಸಸ್​​ ಕಂಡ ಮೇಲೆ ಮಾತನಾಡಿದ ಮಗುವಿನ ತಂದೆ ಪ್ರವತ್​ ಮಲ್ಲಿಕ್​, ‘ಇದು ಡಬಲ್​​ ಸಂತೋಷ, ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಕೆಲವೇ ನಿಮಿಷಗಳಲ್ಲಿ ನಮ್ಮ ಮಗು ಜನಿಸಿತು, ಬಳಿಕ ನಾವು ಅದೇ ಹೆಸರನ್ನು ಇಡಲು ಬಯಸಿದೆವು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan 3 ಸಕ್ಸಸ್​.. ಮಹೋನ್ನತ ಘಳಿಗೆಯನ್ನ ಸ್ಮರಿಸಲು ಶಿಶುಗಳಿಗೆ ‘ಚಂದ್ರಯಾನ’ ಎಂದು ಹೆಸರಿಟ್ಟ ಪೋಷಕರು!

https://newsfirstlive.com/wp-content/uploads/2023/08/Baby-2.jpg

Load More