
ಇದನ್ನು ಓದಿ: ಸ್ಯಾಂಡಲ್ವುಡ್ ಸಿನಿ ಪ್ರೇಮಿಗಳಿಗೆ ಸರ್ಪ್ರೈಸ್; ಭಾರೀ ಸುದ್ದಿ ಆಗ್ತಿರುವ ‘ಕೇರಳ ಸ್ಟೋರಿ’ ಚಿತ್ರದಲ್ಲಿ ಕನ್ನಡಿಗ..!
ಉತ್ತರ ಐರ್ಲೆಂಡ್ನಲ್ಲಿ ವ್ಯಕ್ತಿಯೊಬ್ಬರು ತನ್ನ ಪ್ರೀತಿಯ ನಾಯಿಗೆ ಕೂಪರ್ ಎಂದು ಹೆಸರನ್ನು ಇಟ್ಟಿದ್ದರು. ಈ ಕೂಪರ್ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಗೆ ಸೇರಿದೆ. ಈ ಕೂಪರ್ ಶ್ವಾನವು 64 ಕಿಲೋ ಮೀಟರ್ ದೂರದಿಂದ ತನ್ನ ಪ್ರೀತಿಯ ಮಾಲೀಕನ ಮನೆಗೆ ವಾಪಸ್ ಬಂದಿರೋ ಅಪರೂಪದ ಘಟನೆ ನಡೆದಿದೆ. ನಾಯಿಯ ಮಾಲೀಕ ಕೆಲ ದಿನಗಳ ಹಿಂದೆ ತನ್ನ ಕೂಪರ್ ನಾಯಿಯನ್ನು ಉತ್ತರ ಐರ್ಲೆಂಡ್ನ ಕೌಂಟಿ ಟೈರೋನ್ನಲ್ಲಿರುವ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದ. ಆತನ ಪ್ಲಾನ್ನಂತೆಶ್ವಾನವನ್ನು ಕರೆದುಕೊಂಡು ಹೋಗಲು ಐರ್ಲೆಂಡ್ನ ಕೌಂಟಿ ಟೈರೋನ್ನ ವ್ಯಕ್ತಿ ಬಂದಿದ್ದ. ಆ ವ್ಯಕ್ತಿಯು ಕೂಪರ್ನನ್ನು ತನ್ನ ಕಾರ್ನಲ್ಲಿ ಕೂರಿಸಿಕೊಂಡು ಮನೆಗೆ ಹೊರಟಿದ್ದಾರೆ. ಇತ್ತ ತನ್ನ ನೆಚ್ಚಿನ ಶ್ವಾನವನ್ನು ಬೇಡವಾದ ಮನಸ್ಸಿನಿಂದ ಕಣ್ಣೀರು ಹಾಕುತ್ತಲೇ ಮನೆಯೊಳಗೆ ಕಳುಹಿಸಿ ಕೊಟ್ಟಿದ್ದಾರೆ. ಇತ್ತ ಶ್ವಾನ ಕೂಪರ್ನನ್ನು ಕೂರಿಸಿಕೊಂಡು ವ್ಯಕ್ತಿಯು ಕೌಂಟಿ ಟೈರೋನ್ನತ್ತ ಹೊರಟು ಹೋದರು.
ಸುಮಾರು 64 ಕಿಲೋ ಮೀಟರ್ ದೂರದಿಂದ ಶ್ವಾನ ಕೂಪರ್ನನ್ನು ವ್ಯಕ್ತಿ ಮನೆಗೆ ಕರೆದುಕೊಂಡು ಬಂದಿದ್ದ. ಇನ್ನೇನು ಕಾರಿನಿಂದ ಶ್ವಾನವನ್ನು ಇಳಿಸಬೇಕು ಅನ್ನೋವಷ್ಟರಲ್ಲಿ ದಿಢೀರನೇ ಕಾರ್ನಿಂದ ಜಿಗಿದ ಓಡಿ ಹೋಗಿದೆ. ಕೂಡಲೇ ಶ್ವಾನದ ಮಾಲೀಕನಿಗೆ ಕರೆ ಮಾಡಿದ ನಿಮ್ಮ ನಾಯಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಹೊಸ ಮಾಲೀಕ ನಾಯಿಗಾಗಿ ಕೆಲ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಶ್ವಾನವು ಎಲ್ಲೂ ಪತ್ತೆಯಾಗದ ಕಾರಣ ಸುಮ್ಮನಾಗಿದ್ದಾರೆ.ಎರಡು 2 ವಾರ ಕಳೆದರೂ ಕೂಪರ್ ಪತ್ತೆಯಾಗಿರಲಿಲ್ಲ. ಬರೋಬ್ಬರಿ 27 ದಿನದ ನಂತರ ಕೂಪರ್ ತನ್ನ ಹಳೆಯ ಮಾಲೀಕನ ಮನೆಗೆ ಬಂದಿದೆ. 27 ದಿನಗಳ ಬಳಿಕ 64 ಕಿಮೀ ಓಡಿಕೊಂಡು ಬಂದ ಕೂಪರ್ನನ್ನು ಕಂಡ ಮನೆಯವರಿಗೆ ಅಚ್ಚರಿಯಾಗುವುದರ ಜತೆಗೆ ಖುಷಿಯಾಗಿದ್ದಾರೆ. ಸದ್ಯ ಪ್ರೀತಿಯ ಶ್ವಾನವನ್ನು ಮೊದಲ ಮಾಲೀಕ ಆರೈಕೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ