newsfirstkannada.com

ಭೀಕರ ಅಪಘಾತ; ಧಗಧಗನೆ ಹೊತ್ತಿ ಉರಿದ ಕಾರು; ನವ ದಂಪತಿ ಸೇರಿ ನಾಲ್ವರು ಸಜೀವ ದಹನ

Share :

31-05-2023

    ಭೀಕರ ಅಪಘಾತ; ಧಗಧಗನೆ ಹೊತ್ತಿ ಉರಿದ ಕಾರು

    ದಂಪತಿ ಸೇರಿ ಕುಟುಂಬದ ನಾಲ್ವರು ಸಜೀವ ದಹನ

    ಕಳೆದ 6 ತಿಂಗಳ ಹಿಂದೆ ಮದುವೆ ಆಗಿದ್ದ ದಂಪತಿ ಸಾವು

ಭೂಪಾಲ್​​: ಮಧ್ಯಪ್ರದೇಶದಲ್ಲಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ದಿಢೀರ್​ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಬೆಂಕಿಯಲ್ಲಿ ಸಜೀವ ದಹನ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕೂಡ ಇತ್ತು.

ಈ ಸಂಬಂಧ ಮಾಹಿತಿ ನೀಡಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿ, ಇಂದು ಬೆಳಿಗ್ಗೆ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ದಿಢೀರ್​​​ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿದೆ. ಈ ಬೆಂಕಿ ಅವಘಡದಲ್ಲಿ ಮೂವರು ಪುರುಷರು, ಒಂದು ಮಹಿಳೆ ಜೀವ ಕಳೆದುಕೊಂಡಿದ್ದಾರೆ ಎಂದರು.

ನಮಗೆ ಮಾಹಿತಿ ಸಿಕ್ಕ ಕೂಡಲೇ ದಿಢೀರ್​​ ಘಟನಾ ಸ್ಥಳಕ್ಕೆ ಫೈಯರ್ ಇಂಜಿನ್ ಜತೆಗೆ ಬಂದೆವು. ಅಷ್ಟೊತ್ತಿಗಾಗಲೇ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಇತ್ತೀಚೆಗೆ ಮದುವೆಯಾದ ನವ ದಂಪತಿ ಸೇರಿ ನಾಲ್ವರು ಈ ಬೆಂಕಿ ಅವಘಡಕ್ಕೆ ಬಲಿಯಾದರು. ಇದು ಹೋರ್ಡಾ ಎಂ ಜಿಲ್ಲೆಯಲ್ಲಿ ನಡೆದಿದ್ದು, ಕಳೆದ ಆರು ತಿಂಗಳ ಹಿಂದೆಯಾದ ನವ ದಂಪತಿ ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮದುವೆಗೆ ಹೋಗಿ ಬರುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಭೀಕರ ಅಪಘಾತ; ಧಗಧಗನೆ ಹೊತ್ತಿ ಉರಿದ ಕಾರು; ನವ ದಂಪತಿ ಸೇರಿ ನಾಲ್ವರು ಸಜೀವ ದಹನ

https://newsfirstlive.com/wp-content/uploads/2023/05/Car_Accident.jpg

Load More