/newsfirstlive-kannada/media/post_attachments/wp-content/uploads/2024/11/NF_AROGYA_HABBA.jpg)
ಜಗತ್ತು ಬೆಳೆಯುತ್ತಿದ್ದಂತೆ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಹಳೆ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತಿವೆ. ಈ ಎಲ್ಲಾ ಗಂಭೀರತೆಯನ್ನ ಅರಿತಿರುವ ನಿಮ್ಮ ನ್ಯೂಸ್‌ಫಸ್ಟ್, ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿನೂತನ ಹಬ್ಬ ಆಯೋಜಿಸಿದೆ. ಅದೇ ಆರೋಗ್ಯ ಹಬ್ಬ.
/newsfirstlive-kannada/media/post_attachments/wp-content/uploads/2024/11/News-first-Arogya-Habba.jpg)
ಇಂದಿನಿಂದ ನ್ಯೂಸ್‌ಫಸ್ಟ್‌ನ ಅತಿದೊಡ್ಡ ಆರೋಗ್ಯ ಹಬ್ಬ!
ಆರೋಗ್ಯ ಹಬ್ಬ.. ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಬ್ಬ. ಜನರನ್ನ ಆರೋಗ್ಯಯುತಗೊಳಿಸುವ ಹಬ್ಬ. ಆರೋಗ್ಯವಾಗಿರುವವರನ್ನ ಮತ್ತಷ್ಟು ಆರೋಗ್ಯವಾಗಿಸಿ, ಜಾಗೃತಿಗೊಳಿಸುವ ವಿನೂತನ ಹಬ್ಬ. ನ್ಯೂಸ್‌ಫಸ್ಟ್ ಆಯೋಜನೆ ಮಾಡುತ್ತಿರುವ ಈ ಆರೋಗ್ಯ ಹಬ್ಬದಲ್ಲಿ ಯೋಗ, ಆಯುರ್ವೇದ, ನ್ಯಾಚುರೋಪತಿ ತಜ್ಞರು ಆರೋಗ್ಯವಾಗಿರಲು ಅನುಸರಿಸಬೇಕಾದ ಟಿಪ್ಸ್ ನಿಮಗೆ ನೀಡಲಿದ್ದಾರೆ. ರಾಜ್ಯದ ಖ್ಯಾತ ಆಯುರ್ವೇದ ತಜ್ಞರು ಈ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆರೋಗ್ಯ ಹಬ್ಬ ಇಂದು (ನವೆಂಬರ್ 30) ಮತ್ತು ನಾಳೆ (ಡಿಸೆಂಬರ್ 01) ಬೆಂಗಳೂರಿನ ಅರಮನೆ ಮೈದಾನ ಗೇಟ್ ನಂಬರ್ 6, ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಈ ವಿನೂತನ ಹಬ್ಬವನ್ನ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮಗೆ ಇರುವ ಅನಾರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
ತಪ್ಪದೇ ಆರೋಗ್ಯ ಹಬ್ಬಕ್ಕೆ ಬನ್ನಿ
- ಆರೋಗ್ಯವಾಗಿರೋದಕ್ಕೆ ನೀಡಲಿದ್ದಾರೆ ಸರಳ ಜೀವನ ಸೂತ್ರ
- ಸಣ್ಣ, ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವ ಮದ್ದು ಏನು?
- ಸಣ್ಣ ಶಿಸ್ತು, ಸಣ್ಣ ಬದಲಾವಣೆಯಿಂದ ಹೆಲ್ದಿ ಲೈಫ್ ನಡೆಸೋದು
- ಸೌಂದರ್ಯ ಕಾಪಾಡಲು ಆಯುರ್ವೇದದ ಮಾರ್ಗೋಪಾಯ
- ಆಯುರ್ವೇದ, ವೆಲ್‌ನೆಸ್ ಸೆಂಟರ್ಸ್, ಮಿಲೆಟ್ಸ್ ಸೇರಿ ಸ್ಟಾಲ್ಸ್
- ಕರ್ನಾಟಕದ ಎಲ್ಲಾ ಭಾಗದ ಆಹಾರವನ್ನ ಸವಿಯಬಹುದು
ಇದನ್ನೂ ಓದಿ: ಆಹಾರ ಪ್ರಿಯರೇ ಮರೆಯದಿರಿ.. ನ್ಯೂಸ್ ಫಸ್ಟ್ ‘ಆರೋಗ್ಯ ಹಬ್ಬ’ಕ್ಕೆ ಬಂದ್ರೆ ನಿಮಗೆ 10 ಲಾಭ!
/newsfirstlive-kannada/media/post_attachments/wp-content/uploads/2024/11/Newsfirst-aarogya-Habba.jpg)
ಆರೋಗ್ಯ ಸೂತ್ರಗಳನ್ನ ತಿಳಿದುಕೊಳ್ಳೋಕೆ ಇದು ನಿಮಗಿರುವ ಸುವರ್ಣಾವಕಾಶ. ಇಂದು ಬೆಳಗ್ಗೆ 10 ಗಂಟೆಗೆ ಆರೋಗ್ಯ ಮೇಳ ಉದ್ಘಾಟನೆಯಾಗುತ್ತಿದೆ. ಇದರಲ್ಲಿ ನೀವೆಲ್ಲಾ ಭಾಗಿಯಾಗಬೇಕು. ಎಲ್ಲರೂ ತಪ್ಪದೇ ಬನ್ನಿ. ನಮ್ಮ ಆರೋಗ್ಯ ಹಬ್ಬಕ್ಕೆ ನಿಮಗಾಗಿ ಪ್ರವೇಶವೂ ಸಂಪೂರ್ಣವಾಗಿ ಉಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us