Advertisment

VIDEO: ‘ದಿ ಲೀಡರ್’ ಬೆಸ್ಟ್ ಪ್ರೋಗ್ರಾಂ ಆಫ್ ದಿ ಇಯರ್.. ನ್ಯೂಸ್ ​ಫಸ್ಟ್​ ಚಾನೆಲ್‌ಗೆ ಪ್ರಶಸ್ತಿಗಳ ಸುರಿಮಳೆ

author-image
admin
Updated On
VIDEO: ‘ದಿ ಲೀಡರ್’ ಬೆಸ್ಟ್ ಪ್ರೋಗ್ರಾಂ ಆಫ್ ದಿ ಇಯರ್.. ನ್ಯೂಸ್ ​ಫಸ್ಟ್​ ಚಾನೆಲ್‌ಗೆ ಪ್ರಶಸ್ತಿಗಳ ಸುರಿಮಳೆ
Advertisment
  • ಪ್ರತಿಷ್ಠಿತ TNIT ಪ್ರಶಸ್ತಿಗಳು ಈ ಬಾರಿ ನ್ಯೂಸ್‌ ಫಸ್ಟ್ ಚಾನೆಲ್ ಮಡಿಲಿಗೆ
  • ನ್ಯೂಸ್ ಫಸ್ಟ್‌ ಚಾನೆಲ್‌ ಕ್ರೈಂ ಕವರೇಜ್​ಗೂ ಸೈ, ಪೊಲಿಟಿಕಲ್​ ಸುದ್ದಿಗೂ ಜೈ
  • ಬೆಸ್ಟ್ ಕ್ರೈಂ ಜರ್ನಲಿಸ್ಟ್, ಬೆಸ್ಟ್‌ ಸ್ಪೋರ್ಟ್ಸ್, ಬೆಸ್ಟ್ ರೆಸ್ಟ್ ಆಫ್‌ ಕರ್ನಾಟಕ ಪ್ರಶಸ್ತಿ

ಕಳೆದ ನಾಲ್ಕು ವರ್ಷಗಳಲ್ಲಿ ಕರುನಾಡಿನ ಮನೆ ಮಾತಾಗಿ, ಸುದ್ದಿ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿರೋ ನ್ಯೂಸ್‌ಫಸ್ಟ್‌ಗೆ ಇವತ್ತು ಮತ್ತೆ ಸಂಭ್ರಮಿಸೋ ಕ್ಷಣ. ನಿರ್ಭೀತಿಯಿಂದ ನಿಮ್ಮ ಪರವಾಗಿ ಕೆಲಸ ಮಾಡುವ ನಿಮ್ಮ ನ್ಯೂಸ್​ಫಸ್ಟ್​ಗೆ ಮತ್ತೆ ಪ್ರಶಸ್ತಿಗಳ ಗುಚ್ಛ ಅರಸಿ ಬಂದಿದೆ. ಪ್ರತಿಷ್ಠಿತ TNITಯ 5 ಪ್ರಶಸ್ತಿಗಳನ್ನ ಈ ಬಾರಿ ನ್ಯೂಸ್‌ ಫಸ್ಟ್ ಬಾಚಿಕೊಂಡಿದೆ.

Advertisment

ನ್ಯೂಸ್​ಫಸ್ಟ್​.. ರಾಜ್ಯದ ಸುದ್ದಿ ಲೋಕದ ನವತಾರೆ. ಕನ್ನಡಿಗರ ನಿರ್ಭೀತಿಯ ಧ್ವನಿ.. ರಾಜ್ಯದ ಮನೆ ಮನಗಳಲ್ಲಿ ಗಾಢವಾಗಿ ಬೇರೂರಿದ ವಾಹಿನಿ. ನಿಮ್ಮ ನಂಬಿಕೆ, ವಿಶ್ವಾಸಾರ್ಹತೆಗೆ ಪಾತ್ರವಾದ ನ್ಯೂಸ್​ಫಸ್ಟ್‌ಗೆ TNIT ಸೌಥ್‌​ ಇಂಡಿಯಾ ಅವಾರ್ಡ್​ನಲ್ಲಿ ಪ್ರಶಸ್ತಿಗಳ ಸುರಿಮಳೆ ಆಗಿದೆ.

ಕರ್ನಾಟಕ ನಂ.1 ಪ್ರೋಗ್ರಾಂ 'ದಿ ಲೀಡರ್'ಗೆ ಈ ಬಾರಿಯ TNIT ಬೆಸ್ಟ್​ ಪ್ರೋಗ್ರಾಂ ಆಫ್​ ದಿ ಇಯರ್​ ಅವಾರ್ಡ್​ ಬಂದಿದೆ. ಈ ಕಾರ್ಯಕ್ರಮದ ನಿರೂಪಕ ಹಾಗೂ ನ್ಯೂಸ್​​ ಫಸ್ಟ್ ಎಂಡಿ & ಸಿಇಒ ಎಸ್.ರವಿಕುಮಾರ್, ಡಿವೈನ್ ಸ್ಟಾರ್ ರಿಷಬ್​ ಶೆಟ್ಟಿ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು.

ಇದರ ಜೊತೆಗೆ ಬೆಸ್ಟ್ ಕ್ರೈಂ ಜರ್ನಲಿಸ್ಟ್ ಪ್ರಶಸ್ತಿಯೂ ಕೂಡ ನ್ಯೂಸ್ ಫಸ್ಟ್ ಪಾಲಾಗಿದ್ದು, ನಮ್ಮ ವಾಹಿನಿಯ ಕ್ರೈಂ ಬ್ಯೂರೋ ಹೆಡ್ ವಿಷ್ಣು ಪ್ರಸಾದ್‌ಗೆ ಪ್ರಶಸ್ತಿ ಒಲಿದು ಬಂದಿದೆ.

Advertisment

publive-image

TNIT ಬೆಸ್ಟ್ ರೆಸ್ಟ್ ಆಫ್‌ ಕರ್ನಾಟಕ ಪ್ರಶಸ್ತಿಯನ್ನ ನಮ್ಮ ಹುಬ್ಬಳ್ಳಿಯ ಹಿರಿಯ ವರದಿಗಾರ ಪ್ರಕಾಶ್ ನೂಲ್ವಿ ಅವರು ಪಡೆದುಕೊಂಡಿದ್ದಾರೆ.

publive-image

ನ್ಯೂಸ್‌ಫಸ್ಟ್‌ನ ಸ್ಪೋರ್ಟ್ಸ್ ಬ್ಯೂರೋ ಹೆಡ್ ಗಂಗಾಧರ್ ಅವರಿಗೆ ಬೆಸ್ಟ್‌ ಸ್ಪೋರ್ಟ್ಸ್ ಜರ್ನಲಿಸ್ಟ್‌ ಪ್ರಶಸ್ತಿ ಲಭಿಸಿದೆ. ಇದ್ರೊಂದಿಗೆ ನ್ಯೂಸ್ ಫಸ್ಟ್ ರಾಜಕೀಯ ವಿಭಾಗದ ವರದಿಗಾರ ಮಂಜುನಾಥ್ ಜಿ TNIT ಬೆಸ್ಟ್ ಪೊಲಿಟಿಕಲ್ ಜರ್ನಲಿಸ್ಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

publive-image

TNIT 7 ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮತ್ತೆ ನ್ಯೂಸ್‌ಫಸ್ಟ್‌ಗೆ ಪ್ರಶಸ್ತಿಗಳ ಸುರಿಮಳೆಯಾಗಿದ್ದು ಈ ಪ್ರಶಸ್ತಿಗಳ ಮಹಾಪೂರ ನಮ್ಮ ತಂಡದ ಖುಷಿಯನ್ನ ಹೆಚ್ಚು ಮಾಡೋದ್ರ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment