newsfirstkannada.com

500 ಕಟ್ಟಡ, 2,000 ವಾಹನ, 3,800ಕ್ಕೂ ಹೆಚ್ಚು ಪ್ರದೇಶ ಧಗಧಗ; ಹಿಂಸಾಚಾರ, ಹೊತ್ತಿ ಉರಿದ ಫ್ರಾನ್ಸ್‌ನಲ್ಲಿ ಏನೇನಾಗ್ತಿದೆ?

Share :

01-07-2023

    17 ವರ್ಷ ಅಸುಪಾಸಿನ ಬಾಲಕರಿಂದಲೇ ಅತಿ ಹೆಚ್ಚು ಹಿಂಸಾಚಾರ

    ಫ್ರಾನ್ಸ್ ಹಿಂಸಾಚಾರ ನಿಯಂತ್ರಿಸಲು 1 ಲಕ್ಷ ಸಶಸ್ತ್ರ ಪಡೆ ಹರಸಾಹಸ

    ಪ್ಯಾರಿಸ್‌ನ ಅತಿ ದೊಡ್ಡ ಲೈಬ್ರರಿಗೂ ಬೆಂಕಿ ಹಚ್ಚಿದ ಉದ್ರಿಕ್ತರ ಪಡೆ

ಪ್ಯಾರಿಸ್: ಆಕ್ರೋಶ, ಪ್ರತಿಭಟನೆ, ಹೋರಾಟ, ಹಿಂಸಾಚಾರ, ದೊಡ್ಡ, ದೊಡ್ಡ ಮಾಲ್‌ಗಳ ಲೂಟಿ, ಸಾವಿರಾರು ವಾಹನಗಳಿಗೆ ಬೆಂಕಿ. ಹಿಂಸಾಚಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಫ್ರಾನ್ಸ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಕಳೆದ ನಾಲ್ಕು ದಿನಗಳಿಂದ ಪ್ಯಾರಿಸ್ ಸೇರಿದಂತೆ ಫ್ರಾನ್ಸ್‌ನ ಹಲವು ನಗರಗಳು ಅಕ್ಷರಶಃ ಹೊತ್ತಿ ಉರಿಯುತ್ತಿದ್ದು, ಕೆಂಡದಂತ ವಾತಾವರಣ ಕಣ್ಣಿಗೆ ಬೀಳುತ್ತಿವೆ. ಅಪ್ರಾಪ್ತ ಬಾಲಕರೇ ಅತಿ ಹೆಚ್ಚು ಹಿಂಸಾಚಾರಕ್ಕೆ ಇಳಿದಿದ್ದು, ಕ್ಷಣ, ಕ್ಷಣಕ್ಕೂ ಫ್ರಾನ್ಸ್‌ನಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಳೆದ ಮಂಗಳವಾರದಿಂದ ಇಲ್ಲಿಯವರೆಗೂ ಪ್ಯಾರಿಸ್‌ನಲ್ಲಿ ಯುವಕರು ಫ್ರಾನ್ಸ್‌ ಪೊಲೀಸ್ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 4 ದಿನಗಳಿಂದ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ ಸೇರಿದಂತೆ ಹಲವು ನಗರಗಳು ಹೊತ್ತಿ ಉರಿಯುತ್ತಿದೆ. ಉದ್ರಿಕ್ತಗೊಂಡಿರುವ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಲೂಟಿಗೂ ಇಳಿದಿದ್ದಾರೆ.

ಶಾಪಿಂಗ್‌ ಮಾಲ್ ಲೂಟಿ, ಲೈಬ್ರರಿಗೂ ಬೆಂಕಿ
ಜೂನ್ 27ರ ರಾತ್ರಿಯಿಂದಲೇ ಯುವಕರ ಗುಂಪು ಪ್ರತಿಭಟನೆ, ತೀವ್ರ ಹಿಂಸಾಚಾರಕ್ಕೆ ಧುಮುಕಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಹಲವು ಬಸ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ರೆ, ಶಾಪಿಂಗ್ ಮಾಲ್‌ಗಳಿಗೆ ನುಗ್ಗಿ ಲೂಟಿ ಹೊಡೆಯಲಾಗ್ತಿದೆ. ಪ್ಯಾರಿಸ್‌ನ ಅತಿ ದೊಡ್ಡ ಲೈಬ್ರರಿಗೂ ಬೆಂಕಿ ಹಚ್ಚಿ ಜ್ಞಾನ ಭಂಡಾರವನ್ನೇ ನಾಶ ಮಾಡಲಾಗಿದೆ. ಪ್ಯಾರಿಸ್‌ನಲ್ಲಿ ಉದ್ರಿಕ್ತಗೊಂಡ ಹೋರಾಟಗಾರರು ವಾಹನಗಳು, ರೈಲುಗಳಿಗೆ ಬೆಂಕಿ ಹಚ್ಚಿ ಅಪಾರ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶಮಾಡಿದ್ದಾರೆ. 500 ಕಟ್ಟಡಗಳು, 2 ಸಾವಿರ ವಾಹನಗಳನ್ನು ಲೂಟಿಕೋರರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. 3,800ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಹಚ್ಚಿ ಅಟ್ಟಹಾಸ ಮೆರೆಯಲಾಗಿದೆ.

ಫ್ಯಾನ್ಸ್‌ನಲ್ಲಿ ಇದುವರೆಗೂ ಒಂದು ಸಾವಿರ ಜನರನ್ನ ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು 1 ಲಕ್ಷಕ್ಕೂ ಹೆಚ್ಚು ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗಿದೆ. ಹಿಂಸಾಚಾರ ಸಂಭವಿಸಿ ಮೂರು ನಾಲ್ಕು ದಿನ ಕಳೆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಅಪ್ರಾಪ್ತ ಮಕ್ಕಳು ಹಿಂಸಾಚಾರ ನಡೆಸದಂತೆ ಪೋಷಕರು ಜವಾಬ್ದಾರಿ ತೆಗೆದುಕೊಳ್ಳಿ ಎಂದು ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಕರೆ ನೀಡಿದ್ದಾರೆ. ಫ್ರಾನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಇದನ್ನೂ ಓದಿ: ಫ್ರಾನ್ಸ್​​ನಲ್ಲಿ ನಿಲ್ಲದ ಹಿಂಸಾಚಾರ.. 875 ಮಂದಿ ಅರೆಸ್ಟ್.. 200 ಪೊಲೀಸರಿಗೆ ಗಾಯ.. ಪ್ಯಾರೀಸ್​ನಲ್ಲಿ 40,000 ಭದ್ರತಾ ಪಡೆ ನಿಯೋಜನೆ

ಪ್ಯಾರಿಸ್‌ನಲ್ಲಿ 17 ವರ್ಷದ ಬಾಲಕನಿಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಲು ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದರು. ಆದರೆ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸದೇ ಚಾಲಕ ಹೋಗಿದ್ದಾರೆ. ತಕ್ಷಣ ಟ್ರಾಫಿಕ್ ಪೊಲೀಸರು ಕಾರು ಚಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಸ್ಥಳದಲ್ಲೇ 17 ವರ್ಷದ ಬಾಲಕ ನಾಹೇಲ್ ಸಾವನ್ನಪ್ಪಿದ. ನಾಹೇಲ್, ಅಲ್ಜಿರಿಯನ್ ಮೂಲದ ವಲಸಿಗ. ಈ ಸಾವಿನ ಬಳಿಕ ಯುವಕರು ಫ್ರಾನ್ಸ್ ಪೊಲೀಸ್, ಸರ್ಕಾರದ ವಿರುದ್ಧ ಆಕ್ರೋಶಗೊಂಡು ದಾಂಧಲೆ ನಡೆಸಿದ್ದಾರೆ. ಕಳೆದ 4 ದಿನಗಳಿಂದ ಫ್ರಾನ್ಸ್‌ ಅಕ್ಷರಶಃ ಹೊತ್ತಿ ಉರಿಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

500 ಕಟ್ಟಡ, 2,000 ವಾಹನ, 3,800ಕ್ಕೂ ಹೆಚ್ಚು ಪ್ರದೇಶ ಧಗಧಗ; ಹಿಂಸಾಚಾರ, ಹೊತ್ತಿ ಉರಿದ ಫ್ರಾನ್ಸ್‌ನಲ್ಲಿ ಏನೇನಾಗ್ತಿದೆ?

https://newsfirstlive.com/wp-content/uploads/2023/07/France-Fire.jpg

Load More