newsfirstkannada.com

ಮರಳು ದಂಧೆಕೋರರ ಅಟ್ಟಹಾಸಕ್ಕೆ ಹೆಡ್ ಕಾನ್ಸ್‌ಟೇಬಲ್‌ ಬಲಿ; ಟ್ರ್ಯಾಕ್ಟರ್​ ಹತ್ತಿಸಿ ಎಸ್ಕೇಪ್ ಆದ ದುಷ್ಕರ್ಮಿಗಳು

Share :

16-06-2023

    ಅಕ್ರಮ ಮರಳುಗಾರಿಕೆ ತಡೆಯಲು ಹೋದ ಹೆಡ್​ ಕಾನ್ಸ್‌ಟೇಬಲ್‌ ಸಾವು

    ಹೆಡ್ ಕಾನ್ಸ್‌ಟೇಬಲ್‌ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೈದ ಕಿರಾತಕರು

    ಅನ್ಯಾಯವಾಗಿ ಅಕ್ರಮ ಮರಳು ಮಾಫಿಯಾಗೆ ಸಾವನ್ನಪ್ಪಿದ್ರು ಮಯೂರ್ ಚವ್ಹಾಣ್

ಕಲಬುರಗಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೈದ ಘಟನೆ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. 51 ವರ್ಷದ ಮಯೂರ್ ಚವ್ಹಾಣ್ ಮರಳು ದಂಧೆಕೋರರಿಂದ ಸಾವನ್ನಪ್ಪಿದ್ದಾರೆ.

ಹೆಡ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಸಾವು

ರಾತ್ರಿ ಸುಮಾರು 11 ಗಂಟೆ ವೇಳೆ ಈ ಘಟನೆ ನಡೆದಿದ್ದು, ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಮಯೂರ್ ಚವ್ಹಾಣ್ ರಾತ್ರಿ ಟ್ರ್ಯಾಕ್ಟರ್ ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದವರನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಕಿರಾತಕರು ಟ್ರ್ಯಾಕ್ಟರ್ ನಿಲ್ಲಿಸದೆ ಹೆಡ್ ಕಾನ್ಸ್ಟೇಬಲ್ ಮೇಲೆಯೇ ಟ್ರ್ಯಾಕ್ಟರ್ ಹತ್ತಿಸಿ ಎಸ್ಕೇಪ್ ಆಗಿದ್ದಾರೆ. ಪರಿಣಾಮ ಹೆಡ್ ಕಾನ್ಸ್‌ಟೇಬಲ್‌ ಮಯೂರ್ ಚವ್ಹಾಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನೆಲೋಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ

ಮಯೂರ್ ಚವ್ಹಾಣ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರ ತಾಂಡಾ ನಿವಾಸಿಯಾಗಿದ್ದು, ನೆಲೋಗಿ ಪೊಲೀಸ್ ಠಾಣೆಯ HC-33 ಮತ್ತು 07/05/1997 ನೇ ಬ್ಯಾಚ್ ​ನವರಾಗಿದ್ದರು. ನೆಲೋಗಿ ಪೊಲೀಸ್ ಠಾಣೆಗೆ 29/09/2022 ರಿಂದು ಕರ್ತವ್ಯಕ್ಕೆ ವರದಿ ಹಾಜರಾಗಿದ್ದರು.

ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಭೀಮಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಇತ್ತೀಚೆಗೆ ನ್ಯೂಸ್ ಫಸ್ಟ್ ವರದಿ ಪ್ರಸಾರ ಮಾಡಿತ್ತು. ಆದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳದೆ ಎಗ್ಗಿಲ್ಲದೆ ನಡೆಯುತ್ತಿದೆ. ಇದೀಗ ಅಕ್ರಮ ಮರಳು ದಂಧೆಗೆ ತಡೆಯಲು ಹೋದ ಪೋಲಿಸ್ ಹೆಡ್ ಕಾನ್ಸ್‌ಟೇಬಲ್‌​ನನ್ನೇ ಕೊಲೆಗೈದಿದ್ದಾರೆ. ಇನ್ನು ಸ್ಥಳಕ್ಕೆ  ನೆಲೋಗಿ ಪೊಲೀಸ್ ಠಾಣಾ ಅಧಿಕಾರಿಗಳು ಆಗಮಿಸಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರಳು ದಂಧೆಕೋರರ ಅಟ್ಟಹಾಸಕ್ಕೆ ಹೆಡ್ ಕಾನ್ಸ್‌ಟೇಬಲ್‌ ಬಲಿ; ಟ್ರ್ಯಾಕ್ಟರ್​ ಹತ್ತಿಸಿ ಎಸ್ಕೇಪ್ ಆದ ದುಷ್ಕರ್ಮಿಗಳು

https://newsfirstlive.com/wp-content/uploads/2023/06/Mysura-Chawan.jpg

Load More