newsfirstkannada.com

2ನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಡೈರೆಕ್ಟರ್​​ ಪವನ್ ಒಡೆಯರ್ ದಂಪತಿ

Share :

26-06-2023

    ಬೇಬಿ ಬಂಪ್​​​​ ಫೋಟೋಗಳಲ್ಲಿ ಮಿಂಚಿದ ನಟಿ ಅಪೇಕ್ಷಾ ಪುರೋಹಿತ್

    ಬ್ಲಾಕ್​​ ಕಲರ್​​ ಡ್ರೆಸ್​, ನಗು ಮುಖದಲ್ಲಿ ಫೋಟೋಗೆ ಪೋಸ್ ನಟಿ ಅಪೇಕ್ಷಾ

    2018ರಲ್ಲಿ ಪವನ್ ಒಡೆಯರ್ ಜತೆ ಅಪೇಕ್ಷಾ ಪುರೋಹಿತ್ ಸಪ್ತಪದಿ ತುಳಿದಿದ್ದರು

ಸ್ಟಾರ್ ನಿರ್ದೇಶಕ ಪವನ್​ ಒಡೆಯರ್​, ಮಡದಿ ನಟಿ ಅಪೇಕ್ಷಾ ಪುರೋಹಿತ್​ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಅಪೇಕ್ಷಾ ಸದ್ಯ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಬ್ಲಾಕ್​​ ಕಲರ್​​ ಡ್ರೆಸ್​ನಲ್ಲಿ, ನಗು ಮುಖದಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ನಟಿ ಅಪೇಕ್ಷಾ ಪುರೋಹಿತ್ ಅವರ ಬೇಬಿ ಬಂಪ್​​​​ ಫೋಟೋಗಳನ್ನು ಪವನ್ ಒಡೆಯರ್ ಅವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಉತ್ತಮ ವಿಷಯಗಳು ಮೂರರಲ್ಲಿ ಬರುತ್ತವೆ. ಎರಡು ಬಾರಿ ಪ್ರೀತಿ, ಎರಡು ಬಾರಿ ಸಂತೋಷ. ಶೀಘ್ರದಲ್ಲೇ ನಮ್ಮ 2ನೇ ಜಗತ್ತಿಗೆ ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಹೃದಯಗಳು ಪ್ರೀತಿಯಿಂದ ತುಂಬಿವೆ ಎಂದು ಬರೆದುಕೊಂಡಿದ್ದಾರೆ.

2018ರಲ್ಲಿ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಅವರು ಬಾಗಲಕೋಟೆಯಲ್ಲಿ ವಿವಾಹವಾದರು. ಪವನ್ ಪತ್ನಿ ಅಪೇಕ್ಷಾ ಕೂಡ ನಟಿಯಾಗಿದ್ದು, ಈಗ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ಟಾರ್​ ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿಗೆ ಈಗಾಗಲೇ ಶೌರ್ಯ ಎಂಬ ಮಗನಿದ್ದಾನೆ. ಇದೀಗ ಪವನ್ ಒಡೆಯರ್ ದಂಪತಿ 2ನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಇನ್ನು ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​​​ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

2ನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಡೈರೆಕ್ಟರ್​​ ಪವನ್ ಒಡೆಯರ್ ದಂಪತಿ

https://newsfirstlive.com/wp-content/uploads/2023/06/pavan.jpg

Load More