newsfirstkannada.com

×

ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು -ಸಿದ್ದರಾಮಯ್ಯಗೆ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ..!

Share :

Published July 22, 2023 at 10:46am

Update July 23, 2023 at 1:24pm

    ಈಡಿಗ, ಬಿಲ್ಲವ ಸಭೆಯಲ್ಲಿ ಬಿ.ಕೆ.ಹರಿಪ್ರಸಾದ್ ಆಕ್ರೋಶ

    ಸಿಎಂ ಸಿದ್ದರಾಮಯ್ಯ ವಿರುದ್ದ ಬಿ.ಕೆ ಹರಿಪ್ರಸಾದ್ ಗರಂ

    5 ಸಿಎಂಗಳ ಆಯ್ಕೆಯಲ್ಲಿ ನಾನೂ ಪ್ರಮುಖ ಪಾತ್ರ ವಹಿಸಿದ್ದೇನೆ

ಬೆಂಗಳೂರು: ನನಗೆ ಒಬ್ಬರನ್ನು ಮುಖ್ಯಮಂತ್ರಿ ಮಾಡುವುದೂ ಗೊತ್ತು, ಕೆಳಗೆ ಇಳಿಸುವುದು ಗೊತ್ತು ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಂಗಳೂರಲ್ಲಿ ನಡೆದ ಈಡಿಗ, ಬಿಲ್ಲವ ಸಭೆಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್, ಬೇರೆ, ಬೇರೆ ರಾಜ್ಯಗಳ 5 ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ಯಾರನ್ನೇ ಆಗಲಿ ಸಿಎಂ ಮಾಡುವುದು ಚೆನ್ನಾಗಿ ಗೊತ್ತಿದೆ. ಆ ಮೇಲೆ ಅವರನ್ನು ಕೆಳಗೆ ಇಳಿಸುವುದು ಗೊತ್ತಿದೆ. ಮಂತ್ರಿ ಸ್ಥಾನ ಕೊಡಿಯೆಂದು ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಲ್ಲ, ಇದರ ಬಗ್ಗೆ ಅವಶ್ಯಕತೆನೂ ಇಲ್ಲ. ಎಲ್ಲಿಯೇ ಹೋದರಊ ಎದೆ ಕೊಟ್ಟು ನಿಲ್ಲುವ ಶಕ್ತಿ ನನಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮನ್ನ ಬಹಳ ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ ಎಂದು ಆಡಳಿತ ಸರ್ಕಾರದ ವಿರುದ್ಧ ಆರೋಪಿಸಿದರು. ನಾನು ಮಂತ್ರಿ ಆಗುವುದು, ಬಿಡುವುದು ಬೇರೆ ಪ್ರಶ್ನೆ. ರಾಜಕೀಯವಾಗಿ ಈಡಿಗ ಸಮುದಾಯದವರು ಹಿಂದೆ ಉಳಿದಿದ್ದಾರೆ. ಅವರು ರಾಜಕಾರಣದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಈ ಸಮುದಾಯದವರು ರಾಜಕೀಯದ ಮುನ್ನೆಲೆಗೆ ಬರಬೇಕು ಎಂದು ಬೆಂಗಳೂರಲ್ಲಿ ನಡೆದ ಈಡಿಗ, ಬಿಲ್ಲವ, ದೀವರ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು -ಸಿದ್ದರಾಮಯ್ಯಗೆ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ..!

https://newsfirstlive.com/wp-content/uploads/2023/07/BK_HARIPRASAD_SIDDARAMAIAH.jpg

Load More