newsfirstkannada.com

ಸ್ವಾಮೀಜಿಗೆ 35 ಲಕ್ಷ ದೋಖಾ ಮಾಡಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​.. ಅಸಲಿ ಆಟ ಆಡಿದ್ಯಾರು..?

Share :

Published June 8, 2023 at 3:44pm

    ಸ್ವಾಮೀಜಿಗೆ 35 ಲಕ್ಷ ದೋಖಾ ಮಾಡಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​

    ಬಗೆದಷ್ಟೂ ಬಯಲಾಗ್ತಿದೆ ಸ್ವಾಮೀಜಿಗೆ ದೋಖಾ ಮಾಡಿದ್ದ ಕೇಸ್​​

    ಅಸಲಿ ಆಟ ಪೊಲೀಸರದ್ದೋ..? ‘ಆಕೆ’ಯದ್ದೋ..? ಯಾರದ್ದು..?

ಬೆಂಗಳೂರು: ವದನ ತೋರಿಸದ ಮದನಾರಿಗೆ 35 ಲಕ್ಷ ಸುರಿದಿದ್ದ ಸ್ವಾಮೀಜಿ ಪ್ರಕರಣಕ್ಕೆ ಆಡಿಯೋ ಸಂಭಾಷಣೆ ಬಿಗ್ ಟ್ವಿಸ್ಟ್ ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಮಹಿಳೆಯರು ಮಾತನಾಡಿರುವ ಸಂಭಾಷಣೆ ಹೊಸ ತಿರುವು ನೀಡಿದೆ.

ಬಗೆದಷ್ಟೂ ಬಯಲಾಗ್ತಿದೆ ಸ್ವಾಮೀಜಿಗೆ ದೋಖಾ ಪ್ರಕರಣ!

ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಪ್ರಸಿದ್ಧ ಶ್ರೀಕ್ಷೇತ್ರ ಸೂರ್ಯಸಿಂಹಾಸನ ಮಹಾಸಂಸ್ಥಾನಮಠ ಕಂಬಾಳು ಮಠದ ಸ್ವಾಮೀಜಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಾಯಾಂಗನೆಯೊಬ್ಬಳು ಜಮೀನು ಕೊಡುವುದಾಗಿ ನಂಬಿಸಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿಯಿಂದ 35 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ವರ್ಷಾ ಅಂತ ಫೇಸ್​​ಬುಕ್​​ ಮೂಲಕ ಪರಿಚಯ ಮಾಡಿಕೊಂಡಿದ್ದ ಸುಂದರಿ ತನ್ನ ಸ್ನೇಹಿತೆ ಮಂಜುಳಾ ಖಾತೆ ದುಡ್ಡು ಹಾಕಿಸಿಕೊಂಡಿದ್ದಳು ಅಂತ ಸ್ವಾಮೀಜಿ ದೂರು ನೀಡಿದ್ದರು. ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಆಡಿಯೋ ಸಾಕ್ಷ್ಯವೊಂದು ಲಭ್ಯವಾಗಿದೆ. ಆರೋಪಿ ಸ್ಥಾನದಲ್ಲಿರುವ ಅವನಿಕಾ ಹಾಗೂ ಮಂಜುಳಾ ಮಾತನಾಡಿರುವ ಆಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ.

ಇನ್ನು ಪ್ರಕರಣದ ತನಿಖೆ ಶುರುವಾದಾಗಿನಿಂದ ಹಣ ಪಡೆದು ವಂಚಿಸಿದ್ದಳು ಎನ್ನಲಾಗಿದ್ದ ವರ್ಷಾ ಎಂಬಾಕೆ ಬೆಳದಿಂಗಳ ಬಾಲೆಯಂತಾಗಿದ್ದಾಳೆ. ಆಕೆ ಯಾರೂ ಅನ್ನೋದು ಇದುವರೆಗೂ ಪೊಲೀಸರಿಗೆ ತಿಳಿದಿಲ್ಲ ಪೊಲೀಸರು ಆರೋಪಿ ಮಂಜುಳಾನೇ ವರ್ಷಾ ಆಗಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

ವರ್ಷಾನೇ ಮಂಜುಳಾನಾ..?

ವರ್ಷಾ ಅನ್ನೋ ಮಹಿಳೆ ನನಗೆ ಮೋಸ ಮಾಡಿದ್ರು ಅಂತ ಸ್ವಾಮೀಜಿ ಹೇಳ್ತಿದ್ದಾರೆ. ಆದ್ರೆ ಪೊಲೀಸರು ವರ್ಷಾ ಅನ್ನೋ ಕ್ಯಾರೆಕ್ಟರೇ ಇಲ್ಲ ಅಂತಿದ್ದಾರೆ. ಮಂಜುಳಾನೇ ತನ್ನನ್ನ ವರ್ಷಾ ಅಂತ ಪರಿಚಯ ಮಾಡಿಕೊಂಡು ಸ್ವಾಮೀಜಿಗೆ ಮೋಸ ಮಾಡಿರಬಹುದು ಅಂತ ಪೊಲೀಸರು ಹೇಳಿದ್ದಾರೆ. ಈ ಮೂಲಕ ಸ್ವಾಮೀಜಿಯನ್ನು ಬಚಾವ್ ಮಾಡಲು ಪೊಲೀಸರು ಯತ್ನಿಸಿದ್ರಾ ಅನ್ನೋ ಅನುಮಾನ ದಟ್ಟವಾಗಿದೆ. ಕಾರಣ ಏನು ಅಂದ್ರೆ ಕೇಸ್​​ ಅನ್ನು ದೊಡ್ಡದು ಮಾಡಬೇಡಿ, ಚಿಕ್ಕದ್ರಲ್ಲೇ ಮುಗಿಸಿ ಅಂತ ಸ್ವಾಮೀಜಿ ಹೇಳಿದ್ದರಂತೆ.. ಹೀಗಾಗಿ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪೊಲೀಸರ ಪ್ಲಾನ್ ಏನು?

ಪ್ರಕರಣ ಮುಂದುವರೆಯಲು ವರ್ಷಾ ಬೇಕೇ ಬೇಕು ಅಂತ ಪೊಲೀಸರು ನಿರ್ಧರಿಸಿದ್ರಾ.. A2 ಆರೋಪಿ ಮಂಜುಳಾಳನ್ನೆ ವರ್ಷಾ ಆಗಿ ಬದಲಿಸಿದ್ರಾ? ಮಂಜುಳಾನೇ ಸ್ವಾಮೀಜಿಗೆ ವರ್ಷಾ ಪರಿಚಯಿಸಿರುವ ಅನುಮಾನ ದಟ್ಟವಾಗಿದೆ. ಶ್ರೀಗಳ ಖಾತೆಯಿಂದ ಹಣ ಹೋಗಿದ್ದು ಮಂಜುಳಾ ಅಕೌಂಟಿಗೆ.. ಪೊಲೀಸರು ಹೇಗೆ ಪ್ಲಾನ್ ಮಾಡಿದ್ರು ಅನ್ನೋದು ಬಹಿರಂಗ ಆಗಿದೆ. ಆಡಿಯೋ ಸಂಭಾಷಣೆಯಿಂದ ಅಸಲಿಯತ್ತು ಬಹಿರಂಗ ಆಗಿದೆ. 3 ಲಕ್ಷ ಕೊಟ್ರೆ ಬಿರಿಪೋರ್ಟ್ ಹಾಕ್ತೀವಿ ಅಂತ ಪೊಲೀಸರು ಹೇಳಿದ್ದಾರೆ. ನೀನು ಬೇಲ್ ತೆಗೆದುಕೊಳ್ಳೋದು ಬೇಡ ಎಂದ್ರಾ ಪೊಲೀಸರು, ಆದರೆ ನೀನೇ ವರ್ಷಾ ಅನ್ನೋ ಥರಾ ಹೇಳಿಕೆ ಕೊಟ್ರೆ ಸಾಕು, ಅಡ್ವೋಕೇಟ್ ಮೂಲಕ ಮಂಜುಳಾಗೆ ಪೊಲೀಸರು ಹೇಳಿಸಿದ್ದಾರಾ ಅನುಮಾನುಗಳು ಮೂಡಿವೆ.

ಇನ್ನು ಆಡಿಯೋದಲ್ಲಿ ಆರೋಪಿ ಮಂಜುಳಾಳಿಂದ ನನ್ನ ಮಗ ಮಠದಲ್ಲಿ ಓದುತ್ತಿದ್ದ..ಆಗ ಸ್ವಾಮೀಜಿ ನನಗೆ ಪರಿಚಯ ಆಯ್ತು..ಫೇಸ್ಬುಕ್ ಮತ್ತು ವಾಟ್ಸಪ್ ನಲ್ಲಿ ಪರಿಚಯ ಮಾಡಿಕೊಂಡ್ವಿ..ನಾನು ಭಕ್ತೆ..ನಾನು ಸ್ವಾಮೀಜಿಗೆ 10 ಎಕರೆ ಜಮೀನು ಕೊಡ್ತಿನಿ ಅಂದಿದ್ದೆ.ಹಾಗಾಗಿ ಸ್ವಾಮೀಜಿ ನನಗೆ ದುಡ್ಡು ಕೊಟ್ರು..ಈ ಪ್ರಕರಣಕ್ಕೂ ಸಂಘಟನೆಯ ಅವನಿಕಾ..ಕಾವೇರಿ ಯಾರಿಗೂ ಸಂಬಂಧ ಇಲ್ಲ ಅಂತ ಪೊಲೀಸರೇ ನನ್ನ ಬಳಿ ಹೇಳಿಸಿದ್ದಾರೆ ಅಂತ ಸ್ವತಃ ಮಂಜುಳಾ ಮಾತನಾಡಿರುವುದು ಬಯಲಾಗಿದೆ.

ಒಟ್ಟಿನಲ್ಲಿ ವರ್ಷಾ ಅನ್ನೋ ಪಾತ್ರವೇ ಇಲ್ಲ ಅಂತ ಪೊಲೀಸರು ಹೇಳ್ತಿದ್ದಾರೆ. ಆದ್ರೆ ವರ್ಷಾ ಮುಖ ನೋಡದೆ ಸ್ವಾಮೀಜಿ ಹಣ ಹಾಕೋಕು ಸಾಧ್ಯವಿಲ್ಲ, ಸ್ವಾಮೀಜಿಯೇ ವರ್ಷಾ ಯಾರು ಅನ್ನೋದನ್ನ ಮುಚ್ಚಿಟ್ರಾ.. ಇನ್ನು ಸ್ವಾಮೀಜಿ ದುಡ್ಡು ಕೊಟ್ಟಿದ್ದು ಅಂತ ಪೊಲೀಸರು ಮಂಜುಳಾಳಿಂದ ಹೇಳಿಸಿದ್ದಾರೆ. ಇದನ್ನೆಲ್ಲಾ ನೋಡ್ತಿದ್ರೆ ಪೊಲೀಸರು-ಸ್ವಾಮೀಜಿ ಜೊತೆ ಡೀಲ್ ಆದ್ರಾ, ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ರಾ ಅನ್ನೋ ಅನುಮಾನ ಕಾಡ್ತಿದೆ. ಹಾಗಿದ್ರೆ ಸ್ವಾಮೀಜಿ ದುಡ್ಡು ಹಾಕಿದ್ದು ಯಾರಿಗೆ, ಮುಸುಕು ತೆಗೆಯದ ಆ ಮಾಯಾಂಗನೆ ಯಾರು.. ಸ್ವಾಮೀಜಿಯೇ ಹಣವನ್ನು ದುರುಪಯೋಗಪಡಿಸಿಕೊಂಡ್ರಾ ಎಂಬ ಹತ್ತಾರು ಪ್ರಶ್ನೆಗಳು ಇನ್ನೂ ನಿಗೂಢ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸ್ವಾಮೀಜಿಗೆ 35 ಲಕ್ಷ ದೋಖಾ ಮಾಡಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​.. ಅಸಲಿ ಆಟ ಆಡಿದ್ಯಾರು..?

https://newsfirstlive.com/wp-content/uploads/2023/06/Swamiji-1.jpg

Load More