newsfirstkannada.com

ಹೊಸ ಅಪ್​​ಡೇಟ್​ ಕೊಟ್ಟ ಇಸ್ರೋ.. ಕೇವಲ 177 ಕಿಲೋ ಮೀಟರ್ ದೂರದಲ್ಲಿ ಚಂದ್ರಯಾನ-3 ನೌಕೆ

Share :

14-08-2023

    ಆಗಸ್ಟ್​ 23 ರಂದು ಚಂದ್ರನ ಅಂಗಳಕ್ಕೆ ಲ್ಯಾಂಡ್

    ಜುಲೈ 14 ರಂದು ಚಂದ್ರಯಾನ ಪ್ರಾಜೆಕ್ಟ್ ಉಡಾವಣೆ

    ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ ಲ್ಯಾಂಡರ್

ಚಂದ್ರಯಾನ-3ಗೆ ಸಂಬಂಧಿಸಿದಂತೆ ಇಸ್ರೋ (ಇಂಡಿಯನ್ ಸ್ಪೇಸ್​ ರಿಸರ್ಚ್​ ಆರ್ಗನೈಜೇಷನ್) ಹೊಸ ಅಪ್​​ಡೇಟ್ ನೀಡಿದೆ. ನೌಕೆಯು ಚಂದ್ರನಿಂದ ಕೇವಲ 177 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದೆ ಎಂದು ಇಸ್ರೋ ಹೇಳಿದೆ.

ಚಂದ್ರನ ಅಂಗಳದಲ್ಲಿ ಸುಲಭವಾಗಿ ಇಳಿಯುವ ಗುರಿಯತ್ತ ಚಂದ್ರಯಾನ ನೌಕೆ ದಿಟ್ಟ ಹೆಜ್ಜೆ ಇಟ್ಟಿದೆ. ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಯಲ್ಲಿರುವ ಸರ್ಕ್ಯೂಲರಿ ಸ್ಟೇಷನ್​ ಫೇಸ್​​ಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ. ಮುಂದಿನ ಅಪ್​ಡೇಟ್​ ಅನ್ನು ಆಗಸ್ಟ್ 16 ರಂದು ನೀಡೋದಾಗಿ ಇಸ್ರೋ ಹೇಳಿದೆ.

ಜುಲೈ 14, 2023 ರಂದು ಇಸ್ರೋ ಆಂಧ್ರದ ಶ್ರೀಹರಿಕೋಟಾದಿಂದ ಚಂದ್ರಯಾನ-3 ನೌಕೆಯನ್ನು ಉಡಾಯಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್​ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಒಂದು ವೇಳೆ ಸಾಫ್ಟ್​ ಲ್ಯಾಂಡಿಂಗ್ ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗೃಹ ಇಳಿಸಿದ ಏಕೈಕ ರಾಷ್ಟ್ರ ಭಾರತ ಆಗಲಿದೆ.

ಈ ಮಧ್ಯೆ ರಷ್ಯಾ ಕೂಡ ಚಂದ್ರನ ದಕ್ಷಿಣ ಅಂಗಳಕ್ಕೆ ಲೂನಾ-25 ಅನ್ನು ಕಳುಹಿಸಿದೆ. ಇದು ಚಂದ್ರಯಾನ-3 ನೌಕೆ ಇಳಿಯುವ ಮೊದಲು ಇಳಿಯಲಿದೆ ಎಂದು ರಷ್ಯಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಅಪ್​​ಡೇಟ್​ ಕೊಟ್ಟ ಇಸ್ರೋ.. ಕೇವಲ 177 ಕಿಲೋ ಮೀಟರ್ ದೂರದಲ್ಲಿ ಚಂದ್ರಯಾನ-3 ನೌಕೆ

https://newsfirstlive.com/wp-content/uploads/2023/08/CHANDRAYAANA14082023.jpg

Load More