ಚಂದ್ರಯಾನ-3 ಎಷ್ಟು ಲಕ್ಷ ಕಿಲೋ ಮೀಟರ್ ದೂರ ಪ್ರಯಾಣಿಸಲಿದೆ?
LVM-3 ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಬಲಶಾಲಿ ವಾಹನ
LVM-3 ಒಮ್ಮೆ ಆಕಾಶದತ್ತ ಉಡಾವಣೆ ಮಾಡಿದೆ ಎಷ್ಟು ಖರ್ಚು ಆಗುತ್ತದೆ?
ಚಂದ್ರಯಾನ- 3 ರಾಕೆಟ್ ಲಾಂಚಿಂಗ್ ವೆಹಿಕಲ್ LVM-3 (Launch Vehicle Mark-III) ಇದುವೇ ನಮ್ಮ ಬಾಹ್ಯಾಕಾಶ ಸಂಸ್ಥೆಯ ಬಾಹುಬಲಿ. ಈ ಮೊದಲು ಇದನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿತ್ತು. ಆದರೆ ಈ ಚಂದ್ರಯಾನ- 3ಕ್ಕೆ ಇದರ ಹೆಸರನ್ನು LVM-3 ಎಂದು ಮೂಲ ಹೆಸರಿನಿಂದಲೇ ಕರೆಯಲಾಗುತ್ತಿದೆ. ISRO ಚಂದ್ರಯಾನ- 3 ಉಪಗ್ರಹ ಉಡಾವಣೆಗೆ ತಯಾರಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಚಂದ್ರಯಾನ- 3 ಉಪಗ್ರಹ ಭೂಮಿ ಬಿಟ್ಟು ಹೋಗಬೇಕಾಂದರೆ LVM-3 ವಾಹನದ ಕಾರ್ಯವೇ ಅತೀ ಮುಖ್ಯವಾಗಿದೆ. LVM-3 ರಾಕೆಟ್ ಲಾಂಚಿಂಗ್ ವಾಹನದ ಸಾಮರ್ಥ್ಯ ಏನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಶಕ್ತಿಶಾಲಿ ರಾಕೆಟ್ ಲಾಂಚಿಂಗ್ ವಾಹನ.. ಎಲ್ಲವೂ ಸಕ್ಸಸ್
ಇಲ್ಲಿಯವರೆಗೆ ಇಸ್ರೋ ಲಾಂಚ್ ಮಾಡಿದ ಎಲ್ಲಾ ವಾಹನಗಳಿಗಿಂತ LVM-3 ಅತೀ ಹೆಚ್ಚು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಅತ್ಯಂತ ಶಕ್ತಿಶಾಲಿ ರಾಕೆಟ್ ಲಾಂಚಿಂಗ್ ವಾಹನವಾಗಿದ್ದು 3 ಹಂತದ ಸಾಮರ್ಥ್ಯವನ್ನು ಹೊಂದಿದೆ. ಇದು 2 ಘನ -ಇಂಧನ ಬೂಸ್ಟರ್ಗಳನ್ನು ಒಳಗೊಂಡಿದೆ. ದ್ರವ-ಇಂಧನ ಕೋರ್ ಹಂತವು ರಾಕೆಟ್ ಅನ್ನು ಕಕ್ಷೆಗೆ ಮುಂದೂಡುವಲ್ಲಿ ಒತ್ತಡ ಹಾಕುತ್ತದೆ. ಈ ಮೂಲಕ ಇಲ್ಲಿಯವರೆಗೆ 6 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು ಆ 6 ಕೂಡ ಯಶಸ್ವಿಯಾಗಿವೆ. ಹೀಗಾಗಿ ಇದರ ಮೇಲೆ ಇಸ್ರೋ ಅಧಿಕಾರಿಗಳಿಗೆ ತುಂಬಾ ನಂಬಿಕೆ ಇದ್ದು ಚಂದ್ರಯಾನ- 3 ಯಶಸ್ಸು ಸಿಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಈ ರಾಕೆಟ್ ಘನ ಸ್ಟ್ರಾಪ್-ಆನ್ ಮೋಟಾರ್ಗಳು (S200) ಮತ್ತೊಂದು ಲಿಕ್ವಿಡ್ ಕೋರ್ ಸ್ಟೇಜ್ (L110) 28 ಟನ್ಗಳ ಲೋಡಿಂಗ್ನೊಂದಿಗೆ ಚಾಲನೆ ಆಗಲಿದೆ. LVM-3 ವಾಹನ 640 ಟನ್ಗಳ ಲಿಫ್ಟ್-ಆಫ್ ದ್ರವ್ಯರಾಶಿ ಹೊಂದಿದೆ. ಇದು 4,000 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್ (GTO) ಅನ್ನು ನಭಕ್ಕೆ ಜಿಗಿಸುವ ಸಾಮರ್ಥ್ಯ ಹೊಂದಿದೆ. ಈ ಮೊದಲು GSAT-19, ಖಗೋಳ ಉಪಗ್ರಹ ಮತ್ತು ಚಂದ್ರಯಾನ ಕಾರ್ಯಾಚರಣೆಯಲ್ಲಿ LVM-3 ಅನ್ನು ಬಳಕೆ ಮಾಡಲಾಗಿತ್ತು. ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇದೇ ವಾಹನವನ್ನು ಬಳಸಲು ನಿರ್ಧರಿಸಲಾಗಿದೆ.
LVM-3 ರಾಕೆಟ್ ಲಾಂಚಿಂಗ್ನ ಸಾಮರ್ಥ್ಯ ಏನೇನು..?
ಚಂದ್ರಯಾನ-3 ಚಂದ್ರನತ್ತ ಸಾಗುತ್ತಿರುವ ಭಾರತದ 3ನೇ ಮಿಷನ್ ಆಗಿದೆ. ಇದು 3,921 ಕೆ.ಜಿ ತೂಕದ ಉಪಗ್ರಹವಾಗಿದೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರದ ಪ್ರಯಾಣ ಮಾಡಲಿದೆ. ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೇಜೇಶನ್ (ISRO) ಬಾಹ್ಯಾಕಾಶದ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆ. ಇದು 1969 ಆಗಸ್ಟ್ 15 ರಂದು ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ಹಾಗೇ ತಿರುವನಂತಪುರ, ಅಹಮದಾಬಾದ್, ಮಹೇಂದ್ರಗಿರಿ, ಹಾಸನ ಮತ್ತು ಶ್ರೀಹರಿಕೋಟದಲ್ಲಿ ಇತರೆ ಕಚೇರಿಗಳನ್ನು ಹೊಂದಿದೆ.
ವಿಶೇಷ ವರದಿ: ಭೀಮಣ್ಣ, ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ