newsfirstkannada.com

ಸಿಎಂ ಸಿದ್ದರಾಮಯ್ಯ ಆಪ್ತ ‘ಸಚಿವ ಮಹಾದೇವಪ್ಪಗೆ ಕೆಲಸ ಮಾಡೋ ಬದಲು ಬೇರೆಯದೇ ಆಸಕ್ತಿ ಇದೆ’- ಸಂಸದ ಡಿ.ಕೆ ಸುರೇಶ್

Share :

18-06-2023

  ಸಿಎಂ ಅಧಿಕಾರ ಹಂಚಿಕೆಯ ಕುರಿತು ಮತ್ತೊಬ್ಬ ಸಚಿವರ ಹೇಳಿಕೆ

  ಮಹಾದೇವಪ್ಪ ಪ್ರಬುದ್ಧ ನಾಯಕರು ಎಂದು ಟಾಂಗ್ ಕೊಟ್ಟ DKS

  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಹಕರಿಸಿದ್ದು ಯಾರು?

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುತ್ತಾ ಬಂದ್ರೂ ಕಾಂಗ್ರೆಸ್ ನಾಯಕರ ಆಂತರಿಕ ಕಿತ್ತಾಟ ನಿಂತಿಲ್ಲ. ಸಿಎಂ ಅಧಿಕಾರ ಹಂಚಿಕೆಯ ಕುರಿತು ಸಚಿವ ಎಂ.ಬಿ ಪಾಟೀಲ್ ನೀಡಿದ್ದ ಹೇಳಿಕೆ ಅಲ್ಲೋಲ, ಕಲ್ಲೋಲ ಸೃಷ್ಟಿಸಿತ್ತು. ಇದೀಗ ಸಮಾಜ ಕಲ್ಯಾಣ ಸಚಿವ H.C ಮಹಾದೇವಪ್ಪ ಅವರ ಮಾತಿನ ಮೇಲೆ ಸ್ವಪಕ್ಷದ ಸಂಸದ ಡಿ.ಕೆ ಸುರೇಶ್ ಅವರು ಕೆಂಡಾಮಂಡಲರಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ ಸುರೇಶ್ ಅವರು, ಮುಖ್ಯಮಂತ್ರಿಯ ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯರನ್ನೇ ಕೇಳಿ. ಸಿದ್ದರಾಮಯ್ಯ ಅವರ ಆಪ್ತ ಸಚಿವ ಮಹದೇವಪ್ಪ ಹಿರಿಯರಿದ್ದಾರೆ. ಮಹಾದೇವಪ್ಪ ಪ್ರಬುದ್ಧ ನಾಯಕರು. ಕೆಲಸ ಮಾಡುವ ಬದಲಿಗೆ ಬೇರೆಯದೇ ಆಸಕ್ತಿ ಮಹದೇವಪ್ಪರಿಗೆ ಇದೆ. ಹಾಗಾಗಿ ಹೀಗೆ ಮಾತಾಡ್ತಿದ್ದಾರೆ ಎಂದು ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕರ ಸಹಕಾರ ಇದೆ. ನನಗೆ ರಾಜಕೀಯ ರೆಸ್ಟ್ ಬೇಕಿದೆ. ನನ್ನಂತವರಿಗೆ ರಾಜಕೀಯ ಸರಿ ಬರಲ್ಲ. ರಾಜಕೀಯ ಹೊರಗೆ, ಒಳಗೆ ಸರಿ ಇಲ್ಲ. ಜನರ ಸೇವೆ ಮಾಡಲು ಸಾಕಷ್ಟು ದಾರಿ ಇದೆ. ನಾನು ನನ್ನ ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಪಕ್ಷದಲ್ಲಿ ನನ್ನ ಸೇವೆ ಬಗ್ಗೆ ನೀವು ಹೇಳುವ ನಾಯಕರನ್ನ ಕೇಳಿಕೊಳ್ಳಿ ಎಂದು ಹೇಳಿ ಡಿ.ಕೆ ಸುರೇಶ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಿಎಂ ಸಿದ್ದರಾಮಯ್ಯ ಆಪ್ತ ‘ಸಚಿವ ಮಹಾದೇವಪ್ಪಗೆ ಕೆಲಸ ಮಾಡೋ ಬದಲು ಬೇರೆಯದೇ ಆಸಕ್ತಿ ಇದೆ’- ಸಂಸದ ಡಿ.ಕೆ ಸುರೇಶ್

https://newsfirstlive.com/wp-content/uploads/2023/06/Dk-Suresh-2.jpg

Load More