newsfirstkannada.com

ಮಣಿಪುರ: ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಬಿಡಿದ ಪಾಪಿಗಳು.. ಬೆಂಕಿ ಹಚ್ಚಿ ಕೊಂದೇ ಬಿಟ್ಟರು

Share :

23-07-2023

    ಮಣಿಪುರದಲ್ಲಿ ಮತ್ತೊಂದು ತಲೆ ತಗ್ಗಿಸುವ ಘಟನೆ

    80 ವರ್ಷದ ಅಜ್ಜಿಯನ್ನು ಬಿಡದ ರಕ್ತಪಿಪಾಸುಗಳು

    ಗಲಭೆಯಲ್ಲಿ ಅಸುನೀಗಿದ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ

ಮಣಿಪುರದಲ್ಲಿನ ಜನಾಂಗೀಯ ನಿಂದನೆ ಮತ್ತು ಹಿಂಸಾಚಾರಗಳು ದೇಶದ ಜನರನ್ನೇ ಬೆಚ್ಚಿಬೀಳಿಸಿದೆ. ಅದರಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯವು ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ಆದರೆ ಗಲಭೆಯ ಬಳಿಕ ಒಂದಲ್ಲಾ ಒಂದು ಕೆಟ್ಟ ಘಟನೆಗಳು ಮುನ್ನಲೆಗೆ ಬರುತ್ತಲೇ ಇವೆ. ಅದರಂತೆಯೇ ಇದೀಗ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಗುಂಪೊಂದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದ್ದು, ಎಲ್ಲರ ಕಣ್ಣಲ್ಲಿ ಕಣ್ಣೀರು ಬರಿಸುವಂತೆ ಮಾಡಿದೆ.

ಕಾಕ್ಟಿಂಗ್​​ ಜಿಲ್ಲೆಯ ಎರೋ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಗುಂಪೊಂದು ಚುರಚಂದ್​ ಸಿಂಗ್ ಎಂಬ ಸ್ವಾತಂತ್ರ್ಯ ಹೋರಾಟಗಾನ 80 ವರ್ಷ ವಯಸ್ಸಿನ ಹೆಂಡತಿ ಇಬೆತೊಂಬಿಯನ್ನು ಮನೆಯೊಳಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸೆರೊ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗಾಗಿ ಹಿಂತಿರುಗಿ ಬನ್ನಿ ಎಂದ ಅಜ್ಜಿ

ಇಬೆತೊಂಬಿ ಕಣ್ಣೆದುರೆ ಸಾವಿಗೀಡಾದ ದೃಶ್ಯವನ್ನು ಕಂಡ 22 ವರ್ಷದ ಮೊಮ್ಮಗ ಪ್ರೇಮಕಾಂತ ಖಾಸಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ. ಉದ್ರಿಕ್ತರ ಗುಂಪು ದಾಳಿ ಮಾಡಿದಾಗ ನನ್ನ ಅಜ್ಜಿ  ನಮ್ಮನ್ನು ಅಲ್ಲಿಂದ ಓಡಿ ಹೋಗಿ ಬಳಿಕ ನನಗಾಗಿ ಹಿಂತಿರುಗಿ ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾನೆ.

ಸಜೀವ ದಹನವಾಗಿದ್ದಳು ಇವೆತೊಂಬಿ

ಆದರೆ ಬಂದು ನೋಡಿದಾಗ ಅಜ್ಜಿ ಇದ್ದ ರೂಮಿಗೆ ಬೀಗ ಹಾಕಿ ಬಳಿಕ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಅಜ್ಜಿ ಅರೆಬೆಂದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆ ದೇಶದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ.

ಇನ್ನು ಸ್ವಾತಂತ್ರ್ಯ ಹೋರಾಟಗಾರ ಚುರಚಂದ್​ ಸಿಂಗ್ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅವರಿಂದ ಗೌರವ ಪಡೆದುಕೊಂಡಿದ್ದರು.

ಮಣಿಪುರ: ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಬಿಡಿದ ಪಾಪಿಗಳು.. ಬೆಂಕಿ ಹಚ್ಚಿ ಕೊಂದೇ ಬಿಟ್ಟರು

https://newsfirstlive.com/wp-content/uploads/2023/07/Manipur-3-1.jpg

Load More