ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಸೈಕ್ಲೋನ್ ಅಬ್ಬರ
ಸೈಕ್ಲೋನ್ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ಸಭೆ
ಗಂಟೆಗೆ ಎಷ್ಟು ಕಿ.ಮೀ ವೇಗದಲ್ಲಿ ಬರ್ತಿದೆ ಗೊತ್ತಾ?
ಬಿಪರ್ಜಾಯ್ ಸೈಕ್ಲೋನ್ ಅಬ್ಬರ ಹೆಚ್ಚಾಗಿದೆ. ಅರಬ್ಬಿ ಸಮುದ್ರದಲ್ಲಿ ಈ ಸೈಕ್ಲೋನ್ನಿಂದಾಗಿ ಕಡಲ ಅಲೆಗಳು ರಭಸ ಜೋರಾಗಿದೆ. ಹೀಗಾಗಿ ಮುಂಜಾಗೃತ ಕ್ರಮವನ್ನು ಆಧರಿಸಿ ಗುಜರಾತ್ ರಾಜ್ಯ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಸಂಕಷ್ಟದಲ್ಲಿದ್ದ 37,794 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೂಚನೆ
ಬಿಪರ್ಜಾಯ್ ಸೈಕ್ಲೋನ್ ಕುರಿತಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೈಕ್ಲೋನ್ ಅಬ್ಬರದಿಂದ ಹಾನಿಯನ್ನು ತಡೆಯಲು ಮತ್ತು ಸೋಮನಾಥ, ದ್ವಾರಕಾ ದೇವಾಲಯಗಳ ರಕ್ಷಿಸಲು ಸಿಎಂ ಭೂಪೇಂದ್ರ ಪಟೇಲ್ ಸೂಚಿಸಿದ್ದಾರೆ. ಇದರೊಂದಿಗೆ ಗಿರ್ ಅರಣ್ಯದ ವನ್ಯಜೀವಿಗಳು, ಮರಗಳನ್ನು ರಕ್ಷಿಸಲು ಸೂಚನೆ ನೀಡಿದ್ದಾರೆ.
ಅಮಿತ್ ಶಾ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೈಕ್ಲೋನ್ ಹಾನಿ ತಡೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಸೈಕ್ಲೋನ್ನಿಂದ ಯಾರೊಬ್ಬರು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುಜರಾತ್ ರಾಜ್ಯದ ದ್ವಾರಕಾ, ಗಿರ್ ಸೋಮನಾಥ, ಕಛ್ ಜಿಲ್ಲೆಗಳಲ್ಲಿ ಸೈಕ್ಲೋನ್ ನಿಂದ ಹೆಚ್ಚು ಹಾನಿಯ ಮುನ್ಸೂಚನೆ ಇದ್ದು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ನಾಳೆ ಸಂಜೆ ಗುಜರಾತ್ ಜಾಕವೋ ಬಂದರು- ಕರಾಚಿ ಕರಾವಳಿ ಮಧ್ಯೆ ಸೈಕ್ಲೋನ್ ಲ್ಯಾಂಡ್ ಫಾಲ್ ಆಗುವ ಮುನ್ಸೂಚನೆ ಬಂದಿದೆ.
ನಾಳೆ ರೆಡ್ ಅಲರ್ಟ್
ಹವಾಮಾನ ಇಲಾಖೆ ಇಂದು ಗುಜರಾತ್ ರಾಜ್ಯಕ್ಕೆ ಆರೇಂಜ್ ಆಲರ್ಟ್ ನೀಡಿದ್ದು, ನಾಳೆ ರೆಡ್ ಆಲರ್ಟ್ ನೀಡುವುದಾಗಿ ಘೋಷಿಸಿದೆ. ಗಂಟೆಗೆ 135-155 km ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಕೊಟ್ಟಿದೆ. ಕಳೆದ 60 ವರ್ಷದಲ್ಲಿ ಜೂನ್ ತಿಂಗಳಲ್ಲಿ ಗುಜರಾತ್ ರಾಜ್ಯಕ್ಕೆ ಅಪ್ಪಳಿಸುತ್ತಿರುವ ಮೂರನೇ ಸೈಕ್ಲೋನ್ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ