newsfirstkannada.com

WATCH: 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್‌ ಭಾಗ್ಯ; ಈ ಉಚಿತ ಪ್ರಯಾಣ ಕೊಟ್ಟಿದ್ದೇಕೆ?

Share :

10-06-2023

    SSLC, PU ಪಾಸ್‌ ವಿದ್ಯಾರ್ಥಿಗಳಿಗೆ ಅದ್ಭುತ ಅವಕಾಶ

    ಆಕಾಶದಲ್ಲಿ ಜಾಲಿ ರೈಡ್ ಹೋದವರು ಫುಲ್ ಖುಷಿ

    ಉಚಿತ ಹೆಲಿಕಾಪ್ಟರ್ ರೈಡಿಂಗ್ ಸೌಲಭ್ಯ ಯಾಕೆ?

ರಾಯ್‌ಪುರ್‌; SSLC ಹಾಗೂ PU ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳ ಮುಖ್ಯವಾದದ್ದು. ಉತ್ತಮ ಭವಿಷ್ಯದ ಕನಸು ಕಾಣುವವರು ಒಳ್ಳೆ ಮಾರ್ಕ್ಸ್‌ಗಳಿಸಲೇಬೇಕು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಭವಿಷ್ಯ ಎರಡೂ ಚನ್ನಾಗಿರುತ್ತೆ. ಇದರ ಜೊತೆಗೆ ಕಷ್ಟಪಟ್ಟು ಓದಿ ಟಾಪ್ ಬಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್ ಕಳುಹಿಸಿದ್ರೆ ಹೇಗಿರುತ್ತೆ. ಸುಮ್ನೆ ಯೋಚನೆ ಮಾಡಿದ್ರೆ ಸಖತ್ ಖುಷಿಯಾಗುತ್ತೆ. ಈ ಸಂತಸದ ಕ್ಷಣ ಛತ್ತೀಸ್‌ಘಡದಲ್ಲಿ ನಿಜವಾಗಿದೆ.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಛತ್ತೀಸ್‌ಘಡ ಸರ್ಕಾರ ಒಂದೊಳ್ಳೆ ಪ್ಲಾನ್ ಮಾಡಿದೆ. 10, 12ನೇ ತರಗತಿಯ ಟಾಪರ್‌ಗಳಿಗೆ ರಾಜ್ಯ ಸರ್ಕಾರ ಹೆಲಿಕಾಪ್ಟರ್ ರೈಡಿಂಗ್‌ಗೆ ಅವಕಾಶ ನೀಡಿದೆ. ಈ ಮೂಲಕ ಚೆನ್ನಾಗಿ ಓದುವ ಮಕ್ಕಳಿಗೆ ಪೋತ್ಸಾಹ ನೀಡಲಾಗುತ್ತಿದೆ.

ಛತ್ತೀಸಘಡ್ ಸಿಎಂ ಭೂಪೇಶ್ ಬಘೇಲಾ ವಿದ್ಯಾರ್ಥಿಗಳಿಗೆ ಈ ಭರವಸೆ ಕೊಟ್ಟಿದ್ದರು. ಇಂದು 78 ಟಾಪರ್ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಹೆಲಿಕಾಪ್ಟರ್‌ನಲ್ಲಿ ರೈಡಿಂಗ್ ಕರೆದೊಯ್ದಿದೆ.ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ 78 ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಅಂದ್ರೆ 2022ರಲ್ಲಿ 125 ಟಾಪರ್‌ಗಳು ಹೆಲಿಕಾಪ್ಟರ್‌ ರೈಡಿಂಗ್‌ ಹೋಗಿದ್ದರು.

ಹೆಲಿಕಾಪ್ಟರ್ ರೈಡಿಂಗ್ ಹೋದ ಬುಡಕಟ್ಟು ಸಮುದಾಯದ ಟಾಪರ್ ವಿದ್ಯಾರ್ಥಿಗಳು ಸಖತ್ ಖುಷಿಯಾಗಿದ್ದಾರೆ. ಛತ್ತೀಸ್‌ಘಡ ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣದ ಪೋತ್ಸಾಹಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಛತ್ತೀಸಘಡ ಸಚಿವ ಪ್ರೇಮ ಸಾಯಿ ಸಿಂಗ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್‌ ಭಾಗ್ಯ; ಈ ಉಚಿತ ಪ್ರಯಾಣ ಕೊಟ್ಟಿದ್ದೇಕೆ?

https://newsfirstlive.com/wp-content/uploads/2023/06/Chhattisgarh-2.jpg

Load More