newsfirstkannada.com

ದಳಕ್ಕೆ DK ಗಾಳ..!! ಕುಮಾರಸ್ವಾಮಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಡಲು ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್..!

Share :

18-08-2023

  3ನೇ 2ರಷ್ಟು JDS ಶಾಸಕರ ಸೆಳೆಯಲು ‘ಆಪರೇಷನ್ ಹಸ್ತ’

  ಐದಾರು ಶಾಸಕರ ಒಟ್ಟುಗೂಡಿಸಿ ವಿಲೀನಕ್ಕೆ ಡಿಕೆಎಸ್ ಪ್ಲಾನ್

  ಜೆಡಿಎಸ್​ನ 13 ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್​ಗೆ ಸೇರ್ಪಡೆ..?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಉಪಮುಖ್ಯಮಂತ್ರಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರಂತೆ. ಹೀಗೊಂದು ಮಾತು ರಾಜಕೀಯ ಪಡಶಾಲೆಯಲ್ಲಿ ಜೋರಾಗಿ ಕೇಳಿಬರುತ್ತಿದ್ದು, ಮೈಸೂರು ಭಾಗದ ಜೆಡಿಎಸ್​ ನಾಯಕರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳುವ ಮೂಲಕ ರಾಜಕೀಯವಾಗಿ ಟಾಂಗ್ ಕೊಡಲು ಮುಂದಾಗಿದ್ದಾರೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಕುಗ್ಗಿಸಲು ಡಿ.ಕೆ.ಶಿವಕುಮಾರ್ ಪ್ಲಾನ್ ಮಾಡಿದ್ದು, ಮೂರನೇ ಎರಡರಷ್ಟು ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್​ ಗಾಳ ಹಾಕಿದ್ಯಂತೆ. ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ನಾಯಕರನ್ನು ಸೆಳೆಯಲು ಮುಂದಾಗಿದೆ. ವರದಿಗಳ ಪ್ರಕಾರ 13 ಶಾಸಕರನ್ನು ಕಾಂಗ್ರೆಸ್​ಗೆ ಬರ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ದಳಕ್ಕೆ ಡಿಕೆ ಗಾಳ

 • ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಕುಗ್ಗಿಸಲು ಪ್ಲಾನ್
 • 3ನೇ 2ರಷ್ಟು ಜೆಡಿಎಸ್ ಶಾಸಕರನ್ನ ಸೆಳೆಯಲು ಆಪರೇಷನ್ ಹಸ್ತ
 • 13 ಶಾಸಕರ ಸೆಳೆದು ಪಕ್ಷದ ಜೊತೆ ವಿಲೀನ‌ ಮಾಡಿಕೊಳ್ಳಲು ಪ್ಲಾನ್
 • ಪ್ರಮುಖ ಜೆಡಿಎಸ್​ ನಾಯಕರೊಬ್ಬರ ಮೂಲಕ ಆಪರೇಷನ್ ತಂತ್ರ
 • ಆ ನಾಯಕನ ಮೂಲಕ ಶಾಸಕರನ್ನ ಸೆಳೆಯಲಯ ಡಿಕೆಶಿ ಯತ್ನ
 • 8 ಜೆಡಿಎಸ್ ಶಾಸಕರ ಜೊತೆ ಸಂಪರ್ಕ ಸಾಧಿಸಿರುವ ಡಿಸಿಎಂ
 • ಇನ್ನೂ ಐದಾರು ಶಾಸಕರನ್ನ ಒಟ್ಟುಗೂಡಿಸಿ ವಿಲೀನಕ್ಕೆ ಪ್ಲಾನ್
 • ಕೊನೆಪಕ್ಷ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ತಂತ್ರ
 • ಈಗಾಗಲೇ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ

ಕುಮಾರಸ್ವಾಮಿಯೇ ಟಾರ್ಗೆಟ್

ಈ ಮೂಲಕ ಕುಮಾರಸ್ವಾಮಿ ಅಬ್ಬರಕ್ಕೆ ಬ್ರೇಕ್ ಹಾಕಲು ಶಿವಕುಮಾರ್ ತಂತ್ರ ರೂಪಿಸುತ್ತಿದ್ದಾರೆ. ಯಾಕಂದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್​ಗೂ ಹೆಚ್​ಡಿಕೆ ರಾಜಕೀಯವಾಗಿ ಸಮಾನ ಶತ್ರುವಾಗಿದ್ದಾರೆ. ಚುನಾವಣೆ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್​ ಗದ್ದುಗೆ ಏರುತ್ತಿದ್ದಂತೆಯೇ ಕುಮಾರಸ್ವಾಮಿ ಒಂದಲ್ಲ ಒಂದು ವಿಚಾರಗಳ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಅಸ್ತಿತ್ವ ಕಳೆದಷ್ಟೂ ಕಾಂಗ್ರೆಸ್​ಗೆ ಲಾಭ ಎಂಬ ಲೆಕ್ಕಾಚಾರದಲ್ಲಿ ಡಿ.ಕೆ.ಶಿವಕುಮಾರ್​ ಇದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಳಕ್ಕೆ DK ಗಾಳ..!! ಕುಮಾರಸ್ವಾಮಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಡಲು ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್..!

https://newsfirstlive.com/wp-content/uploads/2023/08/DKS.jpg

Load More