newsfirstkannada.com

Mutiny in Russia: ರಷ್ಯಾದಲ್ಲಿ ಮಿಲಿಟರಿ ಪಡೆಗಳ ಮಧ್ಯೆ ಆಂತರಿಕ ಯುದ್ಧ.. ಪುಟಿನ್ ಸೇನೆ ವಿರುದ್ಧ ದಂಗೆದ್ದ ವ್ಯಾಗ್ನರ್ ಗ್ರೂಪ್..!

Share :

24-06-2023

    ‘25,000 ಸೈನಿಕರಿದ್ದಾರೆ, ಸಾಯಲು ರೆಡಿ’ ಎಂದ ವ್ಯಾಗ್ನರ್

    ಮಿಲಿಟರಿ ಹೆಲಿಕಾಪ್ಟರ್ ಉಡೀಸ್.. ರೋಸ್ಟೋವ್‌ಗೆ ಎಂಟ್ರಿ

    ಏನಿದು ವ್ಯಾಗ್ನರ್ ಗ್ರೂಪ್? ಏನ್ ಹೇಳ್ತಿದೆ ರಷ್ಯಾ ಸೇನೆ?

ರಷ್ಯಾದಲ್ಲಿ ವ್ಯಾಗ್ನರ್ ಗುಂಪು ಮತ್ತು ಸೇನೆ ನಡುವೆ ನಡೆಯುತ್ತಿದ್ದ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾ ಸೈನ್ಯ ವಿರುದ್ಧ ದಂಗೆಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವ್ಯಾಗ್ನರ್ ಗ್ರೂಪ್​: ಇದು ರಷ್ಯಾದ ಖಾಸಗಿ ಮಿಲಿಟರಿ ಪಡೆಯಾಗಿದೆ.

ವ್ಯಾಗ್ನರ್ ಗ್ರೂಪಿನ ಮುಖ್ಯಸ್ಥನ ಬಂಧನಕ್ಕೆ ಆದೇಶ

ಮಾತ್ರವಲ್ಲ, ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ‘ವ್ಯಾಗ್ನರ್ ಗುಂಪಿನ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಮತ್ತೊಂದು ಕಡೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥನನ್ನು ಬಂಧಿಸಲು ಪುಟಿನ್ ಸರ್ಕಾರ ಆದೇಶ ಮಾಡಿದೆ. ಸಶಸ್ತ್ರ ದಂಗೆಯ ಆರೋಪದ ಮೇಲೆ ಬಂಡಾಯ ಪಕ್ಷದ ಮುಖ್ಯಸ್ಥನನ್ನು ಬಂಧಿಸುವಂತೆ ನಿರ್ದೇಶಿಸಲಾಗಿದೆ ಎಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಮಾಹಿತಿ ನೀಡಿದ್ದಾರೆ.

ರಷ್ಯಾದ ಮಿಲಿಟರಿ ಹೆಲಿಕಾಪ್ಟರ್ ಉಡೀಸ್..!

62 ವರ್ಷದ ಯೆವ್ಗೆನಿ ಪ್ರಿಗೊಜಿನ್ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಬದುಕಿನ ಕೊನೆಯವರೆಗೆ ಹೋರಾಡ್ತೇವೆ. ನಮ್ಮ ದಾರಿಗೆ ಯಾರು ಅಡ್ಡಿ ಬರುತ್ತಾರೋ ಅವರೆಲ್ಲರನ್ನೂ ನಾಶಪಡಿಸುತ್ತೇವೆ. ಈಗಾಗಲೇ ರಷ್ಯಾದ ಮಿಲಿಟರಿ ಹೆಲಿಕಾಪ್ಟರ್ ಹೊಡೆದುರುಳಿಸಲಾಗಿದೆ. ನಾಗರಿಕ ತುಕಡಿ, ಹೆಲಿಕಾಪ್ಟರ್ ಮೇಲೆ ಗುಂಡು ಹಾರಿಸಲಾಗಿದೆ. ದಕ್ಷಿಣ ರಷ್ಯಾದ ರೋಸ್ಟೊವ್ ಪ್ರದೇಶವನ್ನು ಪ್ರವೇಶಿಸಿದ್ದೇವೆ ಎಂದಿದ್ದಾರೆ.

25 ಸಾವಿರ ಸೇನ್ಯವಿದೆ, ಸಾಯಲು ರೆಡಿ ಇದೆ

ನಮ್ಮ ಬಳಿ 25 ಸಾವಿರ ಬಲಿಷ್ಠ ಸೈನ್ಯವಿದೆ. ಅದು ಸಾಯಲು ಸಿದ್ಧವಿದೆ. ನಮ್ಮ ಪಡೆಗಳು ದಕ್ಷಿಣ ಗಡಿ ಪ್ರದೇಶವನ್ನು ಪ್ರವೇಶಿಸಿವೆ. ಪುಟಿನ್ ಸೇನೆ ನಮ್ಮ ವಿರುದ್ಧ ದಾಳಿ ಮಾಡ್ತಿದೆ. ಉಕ್ರೇನ್ ವಿರುದ್ಧ ಯುದ್ಧಕ್ಕೆ ಹೋಗಿದ್ದಾಗ, ಉಕ್ರೇನ್ ಸೇನೆ ಬದಲಾಗಿ ನಮ್ಮ ಸೇನಾ ತಂಡದ ಮೇಲೆ ರಷ್ಯಾ ಸರ್ಕಾರಿ ಸೇನೆ ದಾಳಿ ಮಾಡಿದೆ. ಅಲ್ಲದೇ ಬಲವಾದ ಕಾರಣಗಳಿಲ್ಲದೇ ಉಕ್ರೇನ್ ಮೇಲೆ ದಾಳಿ ಮಾಡುವಂತೆ ಪುಟಿನ್ ಸರ್ಕಾರ ಆದೇಶ ಮಾಡಿತ್ತು. ಉಕ್ರೇನ್ ಮೇಲಿನ ದಾಳಿಯೇ ಫೇಕ್ ಆಗಿದೆ ಎಂದು ಆರೋಪಿಸಿದ್ದಾರೆ.

ವ್ಯಾಗ್ನರ್ ಗ್ರೂಪ್ ಬಂಡಾಯದಿಂದ ಏನೂ ಆಗಲ್ಲ..!

ವ್ಯಾಗ್ನರ್ ಗ್ರೂಪ್​ ‘ರೋಸ್ಟೋವ್‌’ಗೆ ಎಂಟ್ರಿಕೊಟ್ಟ ಹಿನ್ನೆಲೆಯಲ್ಲಿ ರಷ್ಯಾದ ಅಧಿಕಾರಿಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಮಾತ್ರವಲ್ಲ, ಭದ್ರತಾ ಕ್ರಮಗಳನ್ನು ಬಲಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ರಷ್ಯಾ ಸೈನ್ಯವು ಹೆಚ್ಚಿನ ಸಂಖ್ಯೆಯ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಮಾಸ್ಕೋದ ಬೀದಿಗಳಲ್ಲಿ ನಿಲ್ಲಿಸಿದೆ. ಇನ್ನು ವ್ಯಾಗ್ನರ್ ಗ್ರೂಪ್​ನ ಬಂಡಾಯ ರಷ್ಯಾದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ರಷ್ಯಾ ಹೇಳಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mutiny in Russia: ರಷ್ಯಾದಲ್ಲಿ ಮಿಲಿಟರಿ ಪಡೆಗಳ ಮಧ್ಯೆ ಆಂತರಿಕ ಯುದ್ಧ.. ಪುಟಿನ್ ಸೇನೆ ವಿರುದ್ಧ ದಂಗೆದ್ದ ವ್ಯಾಗ್ನರ್ ಗ್ರೂಪ್..!

https://newsfirstlive.com/wp-content/uploads/2023/06/Russia.jpg

Load More