newsfirstkannada.com

×

‘ದೇವೇಗೌಡ್ರ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಕುಮಾರಸ್ವಾಮಿ ಬೇಳೆ ಬೇಯಲ್ಲ’; HDK ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

Share :

Published July 9, 2023 at 1:18pm

Update July 9, 2023 at 1:27pm

    HDK ಆಡಿಯೋ ಬಿಡುಗಡೆ ಮಾಡೋದನ್ನ ಹಿಡಿಯೋಕಾಗುತ್ತಾ

    ಕುಮಾರಸ್ವಾಮಿ ಇನ್ನೂ ಒಂದು ಬಾರಿ ಸಿಎಂ ಆದ್ರೂ ಬೇಸರ ಇಲ್ಲ

    ಜನಾರ್ದನ ರೆಡ್ಡಿ ಅವರ ಬಾಂಬ್ ರೀತಿ ಆಗೋದು ಬೇಡಾ ಅಷ್ಟೇ

ಮಂಡ್ಯ: ದೇವೇಗೌಡರ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಕುಮಾರಸ್ವಾಮಿಯವರ ಬೇಳೆ ಬೇಯಲ್ಲ. ದೇವೇಗೌಡರ ಹೆಸರು ಹೇಳದೆ ಕುಮಾರಸ್ವಾಮಿಗೆ ರಾಜಕೀಯ ಮಾಡಲು‌ ಆಗಲ್ಲ. ಒಕ್ಕಲಿಗನಾಗಿ ನಾನು ಸಚಿವ ಆಗಿರೋದನ್ನ ಹೆಚ್ಡಿಕೆಗೆ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಸದನದಲ್ಲಿಯೇ ಬಿಡುಗಡೆ ಮಾಡಲಿ’

ಮಂಡ್ಯದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡೋದನ್ನು ಹಿಡಿದುಕೊಳ್ಳೋಕೆ ಆಗುತ್ತಾ. ಸರ್ಕಾರದ ವಿರುದ್ಧ ದಾಖಲೆಗಳು ಇದ್ರೆ ಬಿಡುಗಡೆ ಮಾಡಬೇಡಿ ಎನ್ನೋಕೆ ಆಗಲ್ಲ. ಅವರು ಸದನದಲ್ಲಿಯೇ ಬಿಡುಗಡೆ ಮಾಡಲಿ ಸಂತೋಷ. ನನಗೆ ಆ ಬಗ್ಗೆ ಯಾವುದೇ ಕುತೂಹಲ ಇಲ್ಲ. ಇವರು ಹೀಗೆ ಸಾಕಷ್ಟು ಸಲ ಹೇಳಿದ್ದಾರೆ. ಜನಾರ್ದನ ರೆಡ್ಡಿ ಅವರ ಬಾಂಬ್ ರೀತಿ ಆಗೋದು ಬೇಡಾ ಅಷ್ಟೇ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

‘ನಾನು ಪಾಪದ ಹುಡುಗ’

ಕುಮಾರಸ್ವಾಮಿ ಅವರು ತುಂಬಾ ಒಕ್ಕಲಿಗರನ್ನು ದೂರ ಇಡುತ್ತಾ ಬಂದಿದ್ದಾರೆ. ಈಗ ಅವರಿಗೆ ನನ್ನ ಸರದಿ ಇತ್ತು, ನನ್ನ ಗೆಲ್ಲೋದೆ ಇಲ್ಲ ಅಂದುಕೊಂಡಿದ್ರು. ಮಂಡ್ಯದ ಜನ ನಾನು ಪಾಪದ ಹುಡುಗ ಎಂದು ಗೆಲ್ಲಿಸಿದ್ದಾರೆ. ಈಗ ನಾನು ಮಂತ್ರಿನೂ ಆಗಿದ್ದೇನೆ. ನಾನು ಮಂತ್ರಿ ಆಗಿರೋದನ್ನು ಕುಮಾರಸ್ವಾಮಿ ಹೇಗೆ ಸಹಿಸುತ್ತಾರೆ. ಅವರಿಗೆ ಸಹಿಸಿಕೊಳ್ಳೋಕೆ ಕಷ್ಟ ಆಗುತ್ತೆ, ನಾವು ಅರ್ಥ ಮಾಡಿಕೊಳ್ಳಬೇಕು. ಮೊದಲಿನಿಂದ ಅವರಿಗೆ ಯಾರನ್ನು ಸಹಿಸಿಕೊಳ್ಳೋಕೆ ಆಗಲ್ಲ. ನಮಗೆ ಅವರ ಮೇಲೆ ಹೊಟ್ಟೆ ಉರಿ ಇಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಮಾತನಾಡಿದ್ದಾರೆ.

ನಂತರ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ರಾಜ್ಯದಲ್ಲಿ ಕುಮಾರಸ್ವಾಮಿಯವರು ಇನ್ನೂ ಒಂದು ಬಾರಿ ಸಿಎಂ ಆದ್ರೂ ಬೇಸರ ಇಲ್ಲ. ಹಳೆ ಮೈಸೂರು ಭಾಗದ ಜನರಿಗೆ ಇವರು ಒಕ್ಕಲಿಗರನ್ನು ಬೆಳಸಲ್ಲ ಎಂಬುದು ಗೊತ್ತಾಗಿದೆ. ನಾನು ಒಕ್ಕಲಿಗ ಎಂದು ನನ್ನ ಮೇಲೆ ಅವರಿಗೆ ದ್ವೇಷ. ನಾನು ಸದನದಲ್ಲಿ ದೇವೇಗೌಡರ ಬಗ್ಗೆ ಮಾತನಾಡಿಲ್ಲ. ದೇವೇಗೌಡರ ಬಗ್ಗೆ ಮಾತಾಡಿಲ್ಲ ಅಂದ್ರೆ ಕುಮಾರಸ್ವಾಮಿ ಬೇಳೆಕಾಳು ಬೇಯಲ್ಲ. ದೇವೇಗೌಡರ ವಿಚಾರವನ್ನು ಯಾರು ಚರ್ಚೆ ಮಾಡಲಿಲ್ಲ. ಕುಮಾರಸ್ವಾಮಿಯವರೇ ದೇವೇಗೌಡರ ವಿಚಾರವನ್ನು ಎತ್ತುತ್ತಾರೆ. ದೇವೇಗೌಡರು ಹಿರಿಯರು, ಪ್ರಧಾನಿಯಾದವರು. ರಾಷ್ಟ್ರ ಹಾಗೂ ರಾಜ್ಯದಲ್ಲಿ ಜನರು ಹಾಗೂ ನಾವು ಪ್ರೀತಿ ಮಾಡುತ್ತೇವೆ. ಕುಮಾರಸ್ವಾಮಿ ದೇವೇಗೌಡರ ಹೆಸರು ತರಲಿಲ್ಲ ಅಂದ್ರೆ ಅವರಿಗೆ ನೆಮ್ಮದಿ ಇಲ್ಲ.ದೇವೇಗೌಡರು ಇಲ್ಲ ಅಂದ್ರೆ ಕುಮಾರಸ್ವಾಮಿ ರಾಜಕೀಯ ಮಾಡೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದೇವೇಗೌಡ್ರ ಬಗ್ಗೆ ಮಾತಾಡ್ಲಿಲ್ಲ ಅಂದ್ರೆ ಕುಮಾರಸ್ವಾಮಿ ಬೇಳೆ ಬೇಯಲ್ಲ’; HDK ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

https://newsfirstlive.com/wp-content/uploads/2023/07/Chaluvanarayana-Swamy.jpg

Load More