newsfirstkannada.com

ಅಜಿತ್ ಪವಾರ್ ‘ಪವರ್ ಪ್ಲೇ’ ಆಟಕ್ಕೆ ಎರಡು ಹೋಳಾದ NCP; ಬಂಡಾಯವೆದ್ದ ನಾಯಕರಿಗೀಗ ಅನರ್ಹತೆ ಭೀತಿ..!?

Share :

03-07-2023

  ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

  ಅಜಿತ್ ಜೊತೆ NCP 8 ರೆಬೆಲ್ ಶಾಸಕರು ಸಚಿವರಾಗಿ ಪದಗ್ರಹಣ

  2019ರಲ್ಲೂ NCP ಶರದ್ ಪವಾರ್​ಗೆ ಕೈಕೊಟ್ಟಿದ್ದ ಅಜಿತ್

ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಹಂಗಾಮಾವೇ ನಡೆಯುತ್ತಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಏಕನಾಥ್ ಶಿಂದೆ ಸರ್ಕಾರಕ್ಕೆ ಬೆಂಬಲ ಸೂಚಿಸಿ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಎನ್​ಸಿಪಿ, ವಿಧಾನಸಭಾ ಅಧ್ಯಕ್ಷರನ್ನು ಸಂಪರ್ಕಿಸಿದೆ.

ಅಜಿತ್ ಪವಾರ್ ಸೇರಿ 9 ಶಾಸಕರನ್ನೂ ಅನರ್ಹಗೊಳಿಸುವಂತೆ ಸ್ಪೀಕರ್ ರಾಹುಲ್ ನರ್ವೇಕರ್​ ಭೇಟಿಯಾಗಿ ಎನ್​ಸಿಪಿ ಆಗ್ರಹಿಸಿದೆ. ಜೊತೆಗೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರು ಎನ್​ಸಿಪಿ ಜೊತೆ ದೃಢವಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಅಂತಾ ವರದಿಯಾಗಿದೆ.

ಎನ್​ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಏಕನಾಥ್ ಶಿಂದೆ ಜೊತೆ ಕೈಜೋಡಿಸಿರುವ ಅಜಿತ್ ಪವಾರ್ ಬಣವನ್ನು ಅನರ್ಹಗೊಳಿಸುವಂತೆ ಆಗ್ರಹಿಸಿದ್ದೇವೆ ಎಂದಿದ್ದಾರೆ. 1999ರಲ್ಲಿ ಶರದ್ ಪವಾರ್ ಹುಟ್ಟುಹಾಕಿದ್ದ ಎನ್​ಸಿಪಿ ಪಕ್ಷವು, ಇಂದು ಎರಡು ಹೋಳಾಗಿದೆ.

ಅಜಿತ್ ಪವಾರ್, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಹೋದರ ಅಳಿಯ. ಶರದ್ ಪವಾರ್, ತಮ್ಮ ಮಗಳು ಸುಪ್ರಿಯಾ ಸುಳೆಗೆ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ನೀಡಿರೋದು ಅಜಿತ್ ಪವಾರ್ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ, ಪಕ್ಷದ ವಿರುದ್ಧ ದಂಗೆದ್ದು, ಏಕನಾಥ್ ಶಿಂದೆ ಸರ್ಕಾರಕ್ಕೆ ಬೆಂಬಲ ಸೂಚಿಸಿ, ನಿನ್ನೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

2019ರಲ್ಲೂ ಅಜಿತ್ ಪವಾರ್ ಅವರು ಎನ್‌ಸಿಪಿ ವಿರುದ್ಧ ಬಂಡಾಯ ಎದ್ದಿದ್ದರು. ಅಂದು ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಇದೀಗ ಮತ್ತೆ ಶರದ್‌ ಪವಾರ್ ಮೇಲೆ ರೆಬೆಲ್ ಆಗಿದ್ದು, ತನ್ನೊಂದಿಗೆ ಹಲವು ಶಾಸಕರನ್ನು ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ದಿಢೀರ್ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ರೆ 8 ಶಾಸಕರು ಸಿಎಂ ಏಕನಾಥ್ ಶಿಂಧೆ ಸರ್ಕಾರದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಜಿತ್ ಪವಾರ್ ‘ಪವರ್ ಪ್ಲೇ’ ಆಟಕ್ಕೆ ಎರಡು ಹೋಳಾದ NCP; ಬಂಡಾಯವೆದ್ದ ನಾಯಕರಿಗೀಗ ಅನರ್ಹತೆ ಭೀತಿ..!?

https://newsfirstlive.com/wp-content/uploads/2023/07/AJIT_POWR.jpg

Load More