newsfirstkannada.com

ಸೀಮಾ ಹೈದರ್​ ಮೇಲೆ ಹದ್ದಿನ ಕಣ್ಣು.. ಆಕೆಗೂ ಪಾಕ್​ ಆರ್ಮಿಗೂ ಇದೆ ಭಾರೀ ನಂಟು!?

Share :

19-07-2023

  ಪಾಕ್​ ಸೇನೆಗೂ ಸೀಮಾ ಹೈದರ್​ಗೂ ಇದೆಯಾ ನಂಟು?

  ಪಬ್​ಜಿ ಪ್ರಿಯಕರ ನೆಪದಲ್ಲಿ ಭಾರತ ಸೇರಿದಳಾ ಸೀಮಾ?

  ಪಾಕ್​ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆಕೆಯ ಅಣ್ಣ, ಚಿಕ್ಕಪ್ಪ

ಪಬ್​ಜಿ​ ಪ್ರೇಮಿಯ ಪ್ರೀತಿಗೆ ಬಿದ್ದು ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಮತ್ತು ಉತ್ತರ ಪ್ರದೇಶದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸೀಮಾ ಹೈದರ್​​ ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಬಾಯಿ ಬಿಟ್ಟಿದ್ದಾಳೆ. ತನ್ನ ಸಹೋದರ ಪಾಕಿಸ್ತಾನ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದನ್ನು ಹೇಳಿದ್ದಾಳೆ. ಆದರೆ ಆತ ಸೇನೆಯಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾನಾ? ಅಥವಾ ಮಿಲಿಟರಿ ತೊರೆದಿದ್ದಾನಾ? ಎಂಬುದರ ಬಗ್ಗೆ ಖಚಿತವಾಗಿ ಹೇಳಿಲ್ಲ.

ಸೀಮಾ ಮೇಲೆ ಹದ್ದಿನ ಕಣ್ಣು

ಮಾಜಿ ಪತಿ ಗುಲಾಮ್​​ ಹೈದರ್​ನನ್ನು ಬಿಟ್ಟು​ ಸೀಮಾ ಹೈದರ್​ ಪಾಕಿಸ್ತಾನದಿಂದ ಭಾರತಕ್ಕೆ ಬಂದಳು. ಪಾಕ್​ನಿಂದ ದುಬೈಗೆ ಹಾರಿ, ದುಬೈನಿಂದ ಭಾರತಕ್ಕೆ ಬಂದಳು. ಆದರೆ ಈಕೆ ಭಾರತಕ್ಕೆ ಬಂದದ್ದೇ ತಡ ಭಯೋತ್ಪಾದನ ನಿಗ್ರಹ ದಳ ಈಕೆ ಮೇಲೆ ಕಣ್ಣಿಟ್ಟಿತ್ತು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಜೊತೆಗೆ ಸಂಪರ್ಕ ಇದೆಯಾ? ಎಂಬ ಕುರಿತಾಗಿ ತನಿಖೆ ನಡೆಸುತ್ತಿದೆ.

ಗುಲಾಮ್​ ಹೈದರ್​ ಹೇಳಿದಂತೆ. ಸೀಮಾ ಅವರ ಸಹೋದರನಾದ ಆಸಿಫ್ ಸೇನೆಯಲ್ಲಿದ್ದು ಕರಾಚಿಯಲ್ಲಿ ಆಕೆಯನ್ನು ಭೇಟಿ ಮಾಡಿದ್ದಳು.​ ಮಾತ್ರವಲ್ಲದೆ, ಆಕೆಯ ಚಿಕ್ಕಪ್ಪ ಗುಲಾನ್​ ಅಕ್ಬರ್​ ಕೂಡ ಪಾಕ್​ ಸೇನೆಯ ಉನ್ನತ ಹುದ್ದೆಯಲ್ಲಿದ್ದು, ಇಸ್ಲಾಮಾಬಾದ್​ನಲ್ಲಿ ನೆಲೆಸಿರುವುದಾಗಿ ಆತ ಹೇಳಿದ್ದಾನೆ.

ಒಂದಲ್ಲಾ.. ಹಲವು ಅನುಮಾನ

ಸೀಮಾ ಹೈದರ್​ ಬಗ್ಗೆ ಭಯೋತ್ಪಾದನ ನಿಗ್ರಹ ದಳಕ್ಕೆ ಹಲವು ಅನುಮಾನಗಳು ಮೂಡಿವೆ. ಅದರಲ್ಲಿ ಆಕೆಯ ಬಳಿ ಮೂರು ನಾಲ್ಕು ಮೊಬೈಲ್​ಗಳಿವೆ ಎಂದು ಬೆಳಕಿಗೆ ಬಂದಿದೆ. ಆಕೆಯ ಸಾಮಾಝಿಕ ಜಾಲತಾಣದ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಅದರ ಜೊತೆಗೆ ಆಕೆ ಬಳಿ ಇರುವ ಪಾಕಿಸ್ತಾನಿ ಗುರುತಿನ ಚೀಟಿಯ ಬಗ್ಗೆಯೂ ಅನುಮಾನ ಎದ್ದಿದೆ. ಕಾರಣ ಆಕೆಯ ಬಳಿ ಇರುವ ಗುರುತಿನ ಚೀಟಿ ಸೆಪ್ಟೆಂಬರ್​​​ 20,2022ರಂದು ನೀಡಲಾಗಿದೆ. ಜೊತೆಗೆ ವೀಸಾ ಇಲ್ಲದೆ ಭಾರತಕ್ಕೆ ಹೇಗೆ ಬಂ್ಳು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸದ್ಯ ಸೀಮಾ ಉತ್ತರ ಪ್ರದೇಶದ ಗೌತಮ್​ ಬುದ್ಧ ನಗರದ ಜಿಲ್ಲೆಯ ಗ್ರೇಟರ್​ ನೋಯ್ಡಾದ ಸಚಿನ್​ ಮೀನಾ ಜೊತೆಗೆ ವಾಸಿಸುತ್ತಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀಮಾ ಹೈದರ್​ ಮೇಲೆ ಹದ್ದಿನ ಕಣ್ಣು.. ಆಕೆಗೂ ಪಾಕ್​ ಆರ್ಮಿಗೂ ಇದೆ ಭಾರೀ ನಂಟು!?

https://newsfirstlive.com/wp-content/uploads/2023/07/SEEMA.jpg

Load More