ಅರ್ಧಕ್ಕೆ ನಿಂತು ಹೋಗಿದ್ದ ರಸ್ತೆ ಕಾಮಗಾರಿ
8ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿತ್ತು
ಈ ಬಗ್ಗೆ ನ್ಯೂಸ್ಫಸ್ಟ್ ವಿಸ್ತೃತ ವರದಿ ಮಾಡಿತ್ತು
ಬೆಂಗಳೂರು: ಮೃತ್ಯಕೂಪವಾಗಿ ಬಲಿ ಪಡೆಯುತ್ತಿದ್ದ ಇದೇ ಮಾಗಡಿ ಮುಖ್ಯರಸ್ತೆ ಹಿಂದೆ ಹೇಗಿತ್ತು. ಈಗ ಹೇಗಿದೆ. ಯೆಸ್.. ಕಾಮಗಾರಿ ಮತ್ತೆ ಶುರುವಾಗಿದೆ. ಇದು ನ್ಯೂಸ್ಫಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್.
ಚಿಕ್ಕಗೊಲ್ಲರಹಟ್ಟಿ ಬಳಿ ಕಿಲೋ ಮೀಟರ್ಗಟ್ಟಲೇ ಅದ್ರಲ್ಲೂ, 6 ತಿಂಗಳಿನಿಂದ ಅರ್ಧಕ್ಕೆ ನಿಂತಿದ್ದ ಕಾಮಗಾರಿ ಮತ್ತೆ ಶುರುವಾಗಿದೆ. ಮೊದಲು ಜೂನ್ 28ರಂದು ಹದಗೆಟ್ಟ ರಸ್ತೆ ಬಗ್ಗೆ ನ್ಯೂಸ್ಫಸ್ಟ್ ವರದಿ ಪ್ರಸಾರ ಮಾಡಿತ್ತು. ಆಗ ಶೀಘ್ರದಲ್ಲಿ ಕಾಮಗಾರಿ ಆರಂಭ ಮಾಡುವ ಭರವಸೆ ನೀಡಿದ್ದ ಅಧಿಕಾರಿಗಳು ಹಾಗೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಕಾಲಹರಣ ಮಾಡಿದ್ರು. ಇದರಿಂದ ಆಗಸ್ಟ್ 18ರಂದು ನಿರ್ಲಕ್ಷ್ಯದ ಬಗ್ಗೆ ನ್ಯೂಸ್ಫಸ್ಟ್ 2ನೇ ಬಾರಿ ವಿಸ್ತ್ರತ ವರದಿ ಮಾಡಿದೆ. ಈ ಬೆನ್ನಲೆ ಕೆಲಸ ಶುರುವಾಗಿದೆ. ಕೆ-ಶಿಪ್ ಅಧಿಕಾರಿಗಳು ಕಾಮಗಾರಿ ಶುರು ಮಾಡಿದ್ದಾರೆ. ಈಗ ನ್ಯೂಸ್ಫಸ್ಟ್ ಕಾಳಜಿಗೆ-ಬದ್ಧತೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನ್ಯೂಸ್ಫಸ್ಟ್ ಇಂಪ್ಯಾಕ್ಟ್
2019ರಲ್ಲಿ ನೈಸ್ ರಸ್ತೆಯಿಂದ ಮಾಗಡಿವರೆಗಿನ ಚತುಷ್ಪದ ರಸ್ತೆ ಕಾಮಗಾರಿಯನ್ನ ಕೆ- ಶಿಪ್ ಆರಂಭಿಸಿತ್ತು. ಕಳೆದ 6 ತಿಂಗಳಿನಿಂದ ಭೂಸ್ವಾಧಿನ ಸಮಸ್ಯೆ ಜೊತೆಗೆ ಕೈ ಕೊಟ್ಟಿದ್ದ ಗುತ್ತಿಗೆ ವಹಿಸಿದ್ದ ಕಂಪನಿಗಳಿಂದ ಕಾಮಗಾರಿ ನಿಂತಿತ್ತು. ರಾಜ್ಯ ಹೆದ್ದಾರಿ ಆದ ಕಾರಣ ನಿತ್ಯ ಸಾವಿರಾರು ಜನರ ಸಂಚಾರ ನಡೆಸ್ತಿದ್ದು, ರಸ್ತೆ ಧೂಳಿನಿಂದ ವಾಹನ ಸವಾರರು, ಸುತ್ತಮುತ್ತಲ ಜನರಿಗೆ ತೊಂದರೆ ಉಂಟಾಗಿತ್ತು. ಅರ್ಧಕ್ಕೆ ನಿಂತ ಕಾಮಗಾರಿಗೆ ಒಂದು ವರ್ಷಕ್ಕೆ ಎಂಟು ಜನ ಪ್ರಾಣ ಕಳೆದುಕೊಂಡಿದ್ರು. ಈಗ ಇದೆಲ್ಲದಕ್ಕೂ ಮುಕ್ತಿ ಸಿಕ್ಕಿದೆ.
ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವ್ರ ಗಮನಕ್ಕೆ ತಂದ ಮೇಲೆ ಕೆ-ಶಿಪ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಶಾಸಕರು, ಕೊನೆಗೂ ಕೊಟ್ಟ ಮಾತಿನಂತೆ ಕಾಮಗಾರಿ ಶುರು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ