newsfirstkannada.com

ಬ್ರೆಜಿಲ್‌ನಲ್ಲಿ ಮುಂದಿನ G20 ಶೃಂಗಸಭೆ.. ‘ಬ್ಯಾಟನ್’ ಹಸ್ತಾಂತರಿಸಿದ ಪ್ರಧಾನಿ ಮೋದಿ; ವಿಡಿಯೋ ಇಲ್ಲಿದೆ

Share :

10-09-2023

    ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಕನಸು

    G20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸಹಮತ

    ರಾಜ್​ಘಾಟ್​ನ ಗಾಂಧೀಜಿ ಸಮಾಧಿ ಬಳಿ ಶಾಂತಿಗೀತೆ ಗಾಯನ

ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ. ಇಡೀ ವಿಶ್ವವನ್ನೇ ತನ್ನತ್ತ ಸೆಳೆದ ನವದೆಹಲಿಯ G20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದೆ. ಜಗತ್ತಿನ ಬಲಿಷ್ಠ ರಾಷ್ಟ್ರದ ನಾಯಕರು G20 ಶೃಂಗಸಭೆಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದು, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಈ ಬಾರಿ G20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸಹಮತ ವ್ಯಕ್ತವಾಗಿದೆ.
G20 ಶೃಂಗಸಭೆಯ ಮೊದಲ ದಿನ ಒಂದು ಭೂಮಿ, ಒಂದು ಕುಟುಂಬದ ಬಗ್ಗೆ ಚರ್ಚಿಸಲಾಯಿತು. ಇಂದು ಒಂದು ಭವಿಷ್ಯದ ಕುರಿತು ಮಾತುಕತೆ ನಡೆಸಲಾಗಿದ್ದು, ಮಹತ್ವದ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ಮುಂದಿನ G20 ಶೃಂಗಸಭೆಯನ್ನು ಬ್ರೆಜಿಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಜಿ20 ಶೃಂಗಸಭೆಯ ಜವಾಬ್ದಾರಿ ಬ್ರೆಜಿಲ್ ವಹಿಸಲಿದೆ ಎಂದು ಘೋಷಣೆ ಮಾಡಿದರು. G20 ಶೃಂಗಸಭೆಯ ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ನರೇಂದ್ರ ಮೋದಿ ಅವರು ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ G20 ಶೃಂಗಸಭೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಬಯಸುತ್ತೇನೆ ಎಂದು ಜವಾಬ್ದಾರಿಯನ್ನು ಹಸ್ತಾಂತರಿಸಿದರು.

G-20 ಶೃಂಗಸಭೆ ಇಂದಿನ ಸಭೆಗೂ ಮುನ್ನ ಮುಂಜಾನೆ ದೆಹಲಿಯ ರಾಜ್​ಘಾಟ್​ಗೆ ಜಿ20 ದೇಶಗಳ ನಾಯಕರು ಭೇಟಿ ನೀಡಿದ್ದರು. ರಾಜ್​ಘಾಟ್​ನಲ್ಲಿರುವ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು. ರಾಜ್​ಘಾಟ್​ನಲ್ಲಿನ ಗಾಂಧೀಜಿ ಸಮಾಧಿ ಬಳಿ ನಡೆದ ಶಾಂತಿಗೀತೆ ಗಾಯನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಆಸ್ಟ್ರೀಲಿಯಾ ಪಿಎಂ ಆ್ಯಂಟೋನಿ ಅಲ್ಬನೀಸ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: G-20 ಸದಸ್ಯ ರಾಷ್ಟ್ರಗಳ ಪಟ್ಟಿಗೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ.. ಕೊಮೊರೊಸ್ ಅಧ್ಯಕ್ಷರನ್ನು ಬಿಗಿದಪ್ಪಿದ ಪ್ರಧಾನಿ ಮೋದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್

ಬ್ರೆಜಿಲ್‌ನಲ್ಲಿ ಮುಂದಿನ G20 ಶೃಂಗಸಭೆ.. ‘ಬ್ಯಾಟನ್’ ಹಸ್ತಾಂತರಿಸಿದ ಪ್ರಧಾನಿ ಮೋದಿ; ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/09/Modi-G20-Baton.jpg

Load More