newsfirstkannada.com

ನೇಮರ್​ ಗೆಳತಿ ಮನೆ ಮೇಲೆ ದರೋಡೆಕೋರರಿಂದ ದಾಳಿ.. ಮಗುವನ್ನು ಅಪಹರಿಸಲು ಯತ್ನ 

Share :

09-11-2023

    ಖ್ಯಾತ ಪುಟ್​ಬಾಲ್​ ಆಟಗಾರನ ಗೆಳತಿ ಮನೆ ಹೊಕ್ಕಿದ ದರೋಡೆಕೋರರು

    ಬ್ರೂನಾ ಬಿಯಾನ್ಕಾರ್ಡಿ ಪೋಷಕರನ್ನು ಕಟ್ಟಿ ಹಾಕಿದ್ದ ದರೋಡೆಕೋರರು

    ಮನೆಯಲ್ಲಿದ್ದ ಹಣ, ವಾಚ್​, ಆಭರಣಗಳನ್ನು ಕದ್ದು ಪರಾರಿ

ಖ್ಯಾತ ಪುಟ್​ಬಾಲ್​ ಆಟಗಾರನ ಗೆಳತಿ ಹಾಗೂ ಮಗುವನ್ನು ದರೋಡೆ ಮಾಡಲು ಯತ್ನಿಸಿದ ಘಟನೆ ಬ್ರೆಜಿಲ್​ನ ಸಾವೋದಲ್ಲಿ ನಡೆದಿದೆ. ದರೋಡೆ ಕೋರರ ದಾಳಿ ವೇಳೆ ಬ್ರೂನಾ ಬಿಯಾನ್ಕಾರ್ಡಿ ಮತ್ತು ಆಕೆಯ ಮಗು ಮನೆಯಲ್ಲಿ ಇರಲಿಲ್ಲ. ಆದರೆ ಮನೆಯಲ್ಲಿದ್ದ ಆಕೆಯ ಪೋಷಕರನ್ನ ಕಟ್ಟಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬ್ರೂನಾ ಬಿಯಾನ್ಕಾರ್ಡಿ ಮನೆಯ ದರೋಡೆ ಕೋರರು ದಾಳಿ ಮಾಡಿರುವ ಸಂಗತಿ ನೆರೆಹೊರೆಯವರಿಗೆ ತಿಳಿದಂತೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಬ್ರೂನಾ ಬಿಯಾನ್ಕಾರ್ಡಿ ಪೋಷಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಇನ್ನು ಈ ಘಟನೆ ಬಳಿಕ ಪೊಲೀಸರು 20 ವರ್ಷದ ಯುವಕಕನ್ನು ಬಂಧಿಸಿದ್ದಾರೆ. ಮತ್ತೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬ್ರೂನಾ ಬಿಯಾನ್ಕಾರ್ಡಿ ಮತ್ತು ಆಕೆಯ ಮಗು ಮನೆಯಲ್ಲಿ ಇಲ್ಲದ ಕಾರಣ 50 ಮತ್ತು 52 ವರ್ಷದ ಪೋಷಕರನ್ನು ಕಟ್ಟಿಹಾಕಿದ್ದಾರೆ. ದಾಳಿಕೋರರು ಹಣ, ವಾಚ್​, ಆಭರಣಗಳನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಮರ್​ ಗೆಳತಿ ಮನೆ ಮೇಲೆ ದರೋಡೆಕೋರರಿಂದ ದಾಳಿ.. ಮಗುವನ್ನು ಅಪಹರಿಸಲು ಯತ್ನ 

https://newsfirstlive.com/wp-content/uploads/2023/11/Nymar.jpg

Load More