ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗ
ಅಸಲಿಗೆ ಉಗ್ರರ ಬಾಂಬ್ ಬ್ಲಾಸ್ಟ್ ಟಾರ್ಗೆಟ್ ರಾಮೇಶ್ವರಂ ಕೆಫೆ ಅಲ್ಲ, ಮತ್ತೇನು?
ಮಲ್ಲೇಶ್ವರಂನಲ್ಲಾಗಬೇಕಾಗಿದ್ದ ಭೀಕರ ಕೃತ್ಯ ಕುಂದಲಹಳ್ಳಿಗೆ ಶಿಫ್ಟ್ ಆಗಿದ್ದು ಏಕೆ?
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಒಂದು ರೋಚಕ ತಿರುವು ಪಡೆದುಕೊಂಡಿದೆ. ಎನ್ಐಎ ಈಗಾಗಲೇ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದು, ಅದರಲ್ಲಿ ಬೆಚ್ಚಿ ಬೀಳುವ ಅಂಶಗಳು ಅಡಕವಾಗಿವೆ. ಅಸಲಿಗೆ ರಾಮೇಶ್ವರಂ ಕೆಫೆ ಉಗ್ರರ ಟಾರ್ಗೆಟ್ ಆಗಿರಲೇ ಇಲ್ಲ. ಇಟ್ಟ ಗುರಿಯನ್ನು ಮುಟ್ಟಲಾಗದೇ ಗುರಿಯನ್ನು ಬೇರೆಯೆಡೆಗೆ ತಿರುಗಿಸಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: UPSC ಎಕ್ಸಾಂ ದಿನವೇ PSI ಪರೀಕ್ಷೆ; ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಎನ್ಐಎ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಅಂದೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ರಾಜ್ಯದ ಬಿಜೆಪಿ ಕಚೇರಿಯನ್ನು ಉಡಾಯಿಸಲು ಪ್ಲಾನ್ ರೂಪಿಸಲಾಗಿತ್ತು. ಅಲ್ಲಿ ಐಇಡಿ ಬಾಂಬ್ ಸ್ಪೋಟಿಸುವಲ್ಲಿ ವಿಫಲವಾದ ಹಿನ್ನೆಲೆ, ಗುರಿ ರಾಮೇಶ್ವರಂ ಕೆಫೆಯತ್ತ ತಿರುಗಿತು.
ಈಗಾಗಲೇ ಎನ್ಐಎ ನಾಲ್ವರು ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಮುಸ್ಸಾವಿರ್ ಹುಸೈನ್ ಶಾಜಿಬ್, ಅಬ್ದುಲ್ ಮಥಿನ್ ಅಹ್ಮದ್ ತಾಹಾ, ಮಾಝ್ ಮುನೀರ್ ಮತ್ತು ಮುಹಾಮಿಲ್ ಷರೀಫ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ, ಸ್ಫೋಟಕ ಪರಿಕರಗಳ ಕಾಯ್ದೆ ಹಾಗೂ ಸರ್ಕಾರಿ ಆಸ್ತಿ ಹಾನಿತಡೆ ಕಾಯ್ದ ಸೇರಿ ವಿವಿಧ ಸೆಕ್ಷನ್ಗಳ ಅಡಿ ಅಪರಾಧ ಸಂಬಂಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ