ಕೇರಳದ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ
ಟಿಫಿನ್ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ವಸ್ತುಗಳಿಂದ ವಿಧ್ವಂಸಕ ಕೃತ್ಯ
ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡ 48 ವರ್ಷದ ವ್ಯಕ್ತಿಯ ಬಂಧನ
ಎರ್ನಾಕುಲಂ: ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟ ಬೆಚ್ಚಿ ಬೀಳಿಸಿದೆ. ಸುಮಾರು 2000ಕ್ಕೂ ಹೆಚ್ಚು ಮಂದಿ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದು, ಪ್ರಾರ್ಥನೆಯ ಮಧ್ಯೆ ವಿಧ್ವಂಸಕ ಕೃತ್ಯ ನಡೆದಿದೆ. ಸದ್ಯಕ್ಕೆ ಓರ್ವ ಮಹಿಳೆ ಸಾವನ್ನಪ್ಪಿದ್ರೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇದೊಂದು ಶಂಕಿತ ಭಯೋತ್ಪಾದಕ ಕೃತ್ಯವಾಗಿದ್ದು, ಹೆಜ್ಜೆ, ಹೆಜ್ಜೆಗೂ ಉಗ್ರಗಾಮಿ ದಾಳಿ ಮಾಡಿರೋ ಸ್ಫೋಟಕ ಸುಳಿವುಗಳನ್ನೇ ನೀಡುತ್ತಿದೆ.
ಇಂದು ಬೆಳಗ್ಗೆ ಯೆಹೋವನ ಸಾಕ್ಷಿ ಸಮಾವೇಶದ ಅಂಗವಾಗಿ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಈ ವೇಳೆ ಪ್ರಾರ್ಥನೆಯ ಮಧ್ಯೆ ಟಿಫಿನ್ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ವಸ್ತುಗಳನ್ನು ಬಳಸಿ ಸ್ಫೋಟ ಮಾಡಲಾಗಿದೆ. ಕೆಲವೇ ನಿಮಿಷದಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಪ್ರಾರ್ಥನಾ ಸಭೆಗೆ ಆಗಮಿಸಿದ್ದ ಜನ ದಿಕ್ಕಾಪಾಲಾಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇದುವರೆಗೂ 40ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟ ಭಯೋತ್ಪಾದಕ ದಾಳಿಯ ಸುಳಿವು ನೀಡುತ್ತಿದೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು NIA, NSG ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳಿಂದ ಕ್ಷಣ, ಕ್ಷಣದ ಮಾಹಿತಿಯನ್ನ ಪಡೆಯುತ್ತಿದ್ದಾರೆ.
ಸ್ಫೋಟದ ಕೆಲವೇ ಗಂಟೆಗಳ ನಂತರ, 48 ವರ್ಷದ ವ್ಯಕ್ತಿಯೊಬ್ಬರು ಹೊಣೆಗಾರಿಕೆಯನ್ನು ಹೊತ್ತುಕೊಂಡು ಶರಣಾಗಿದ್ದಾರೆ. ಶಂಕಿತ, ಡೊಮಿನಿಕ್ ಮಾರ್ಟಿನ್ ಸ್ಫೋಟ ಸಂಭವಿಸಿರುವ ಪ್ರಾರ್ಥನಾ ಸಭೆಯನ್ನು ಆಯೋಜಿಸಿದರು ಎನ್ನಲಾಗಿದೆ. ಸರಣಿ ಸ್ಫೋಟಕ್ಕೆ ಆಘಾತ ವ್ಯಕ್ತವಾಗುತ್ತಿದ್ದಂತೆ ಕಣ್ಣೂರು ರೈಲ್ವೆ ನಿಲ್ದಾಣದಲ್ಲಿ ಶಂಕಿತನನ್ನು ಬಂಧಿಸಲಾಗಿದೆ. ಈ ಸರಣಿ ಸ್ಫೋಟದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು ನಗರಗಳಿಗೆ ಹೈಅಲರ್ಟ್ ಘೋಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ