newsfirstkannada.com

PFIಗೆ ವಿದೇಶದಿಂದ ಫಂಡಿಂಗ್​ ಪ್ರಕರಣ; ಮಂಗಳೂರಿನ 3 ಕಡೆ NIA ದಾಳಿ

Share :

13-08-2023

    ಉಳ್ಳಾಲ ಸೇರಿದಂತೆ ದ.ಕನ್ನಡ ಜಿಲ್ಲೆಯ 3 ಕಡೆ  NIA ದಾಳಿ

    ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್​ವರ್ಕ್

    ಧಾರ್ಮಿಕ ಶಿಕ್ಷಕನ ಮನೆ ಪರಿಶೀಲನೆ ನಡೆಸಿದ ಅಧಿಕಾರಿಗಳು

ಮಂಗಳೂರು: ನಿಷೇಧಿತ PFI ಸಂಘಟನೆಗೆ ವಿದೇಶದಿಂದ ಫಂಡಿಂಗ್ ಪ್ರಕರಣ ಸಂಬಂಧಿಸಿದಂತೆ ಮಂಗಳೂರಿನ 3 ಕಡೆ  NIA ದಾಳಿ ನಡೆಸಿದೆ. ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ  NIA ದಾಳಿ ನಡೆಸಿದೆ. ಉಳ್ಳಾಲದ ಕಿನ್ಯಾ, ಒಳಚ್ಚಿಲ್ ಪದವು ಮತ್ತು ಪಾಣೆ ಮಂಗಳೂರಿನಲ್ಲಿ ದಾಳಿ ನಡೆದಿದೆ.

NIA ಅಧಿಕಾರಿಗಳು ಇಬ್ರಾಹಿಂ ಎಂಬವರ ಮನೆಗೆ ದಿಢೀರ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ರಾಹಿಂ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಪಿಎಫ್ಐ ನಿಷೇಧದ ಬಳಿಕ ತಲೆ ಮರೆಸಿಕೊಂಡದ್ದನು. ಇದೇ ಕಾರಣಕ್ಕೆ ಇಬ್ರಾಹಿಂ ಮನೆಯಲ್ಲಿ ಎನ್​ಐಎ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಎನ್​ಐಎ ದಾಳಿ ಸಂದರ್ಭದಲ್ಲಿ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ. ಮತ್ತೊಂದೆಡೆ NIA ಅಧಿಕಾರಿಗಳು ವಶಪಡಿಸಿ ಕೊಂಡ ದಾಖಲೆಗಳನ್ನು ಕೊಂಡು ಹೋಗಿದ್ದಾರೆ.

NIA ಅಧಿಕಾರಿಗಳು PFI ಸಂಘಟನೆ ಯ ಫಂಡಿಂಗ್ ನೆಟ್​​ವರ್ಕ್ ಭೇಧಿಸಿದ್ದರು. ಬಂಧಿತರ ವಿಚಾರಣೆ ಸಂದರ್ಭದಲ್ಲಿ ಇಬ್ರಾಹಿಂ ಹೆಸರು ಬೆಳಕಿಗೆ ಬಂದಿತ್ತು. PFI ಫಂಡಿಂಗ್ ನೆಟ್​ವರ್ಕ್ ಗೆ ಇಬ್ರಾಹಿಂ ಲಿಂಕ್ ಇರೋದು ಬೆಳಕಿಗೆ ಬಂತು.

ಇನ್ನು ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್​ವರ್ಕ್ ವಿಚಾರವಾಗಿ ಈ ದಾಳಿ ನಡೆಸಲಾಗಿದೆ. ಮಂಗಳೂರು ಹೊರವಲಯದ ಒಳಚ್ಚಿಲ್ ಪದವು ಮತ್ತು ಬಂಟ್ವಾಳದ ಮಲ್ಕಾರ್ ಎಂಬಲ್ಲಿ ಎನ್​ಐಎ ದಾಳಿ ಮಾಡಿದ್ದಾರೆ.  ಒಳಚ್ಚಲ್ ನ ಮುಸ್ತಾಕ್ ಎಂಬವರ ಮನೆ ಮೇಲೆ ಎನ್ ಐ ಎ ದಾಳಿ ನಡೆಸಿದ್ದಾರೆ. ಅತ್ತ ಬಂಟ್ವಾಳ ದ ಮೆಲ್ಕಾರ್ ನ ಇಬ್ರಾಹಿಂ ನಂದಾವರ ಎಂಬವರ ಮನೆಯಲ್ಲಿ NIA ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PFIಗೆ ವಿದೇಶದಿಂದ ಫಂಡಿಂಗ್​ ಪ್ರಕರಣ; ಮಂಗಳೂರಿನ 3 ಕಡೆ NIA ದಾಳಿ

https://newsfirstlive.com/wp-content/uploads/2023/08/NIA.jpg

Load More