/newsfirstlive-kannada/media/post_attachments/wp-content/uploads/2023/11/DK-SHIVAKUMAR-2-1.jpg)
ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕ ವಿಚಾರ ಕಗ್ಗಂಟಾಗಿಯೇ ಉಳಿದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆದಿದ್ದು, ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ.
ಈ ಮಧ್ಯೆ ಬಸವರಾಜ ರಾಯರೆಡ್ಡಿರನ್ನ ಕರೆಸಿಕೊಂಡ ಸುರ್ಜೇವಾಲ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ನಿಗಮ, ಮಂಡಳಿ ಸ್ಥಾನ ವಹಿಸಿಕೊಳ್ಳುವಂತೆ ಸುರ್ಜೇವಾಲ ಹೇಳಿದ್ದಾರೆ. ಇದಕ್ಕೆ ನಯವಾಗಿಯೇ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ. ಪಕ್ಷಕ್ಕೆ ನನ್ನ ಸೇವೆಯನ್ನ ನಾನು ಮಾಡಿಕೊಂಡು ಹೋಗುತ್ತೇನೆ. ನಿಗಮ, ಮಂಡಳಿ ಏನೂ ಬೇಡ ಎಂದಿದ್ದಾರೆ. ಬಳಿಕ ನಿಮಗೆ ಯಾವ ಜವಾಬ್ದಾರಿ ಕೊಡಬೇಕೋ ಅದನ್ನ ಕೊಡುತ್ತೇವೆ ಅಂತ ಸುರ್ಜೇವಾಲ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೊಂದು ರೌಂಡ್ ಮಾತುಕತೆ
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಡಿ.ಕೆ.ಶಿವಕುಮಾರ್.. ಪಕ್ಷ ಸಂಘಟನೆ ಹಾಗೂ ಬೋರ್ಡ್ ನೇಮಕದ ಬಗ್ಗೆ ಚರ್ಚೆ ಆಗಿದೆ. ಮೊದಲ ಸುತ್ತಿನ ಮಾತುಕತೆ ಬಳಿಕ ನಾಯಕರ ಹೆಸರುಗಳನ್ನು ದೆಹಲಿ ನಾಯಕರಿಗೆ ಕಳುಹಿಸುತ್ತೇವೆ. ಬರೀ ಬೆಂಗಳೂರು ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಶಾಸಕರ ಬಗ್ಗೆ ಕೂಡ ಚರ್ಚೆ ಆಗಿದೆ. ಇನ್ನೊಂದು ರೌಂಡ್ ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡ್ತೀವಿ ಎಂದಿದ್ದಾರೆ.
ಹಿರಿಯ ನಾಯಕರ ಜೊತೆ ಇನ್ನೊಂದು ಸುತ್ತಿನ ಚರ್ಚೆ ಮಾಡಬೇಕು. ಈಗ ಪಂಚರಾಜ್ಯ ಚುನಾವಣೆಗಳು ನಡೆಯುತ್ತಿವೆ. ನಾನು, ಸಿಎಂ ಕೂಡ ಪ್ರಚಾರಕ್ಕೆ ಹೋಗಬೇಕು. ಅನಂತರ ಚರ್ಚೆ ಮಾಡಿ ಫೈನಲ್ ಮಾಡಲಾಗುವುದು ಎಂದರು. ಇದೇ ವೇಳೆ ಗೃಹ ಸಚಿವರು ಮುನಿಸಿಕೊಂಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅವರು ಯಾಕೆ ಮುನಿಸಿಕೊಳ್ತಾರೆ, ಈಗಷ್ಟೇ ಬೆಳಗಾವಿಯಿಂದ ಬಂದು ಹೋಗಿದ್ದಾರೆ. ಮೊದಲು ಎಲ್ಲವೂ ಚರ್ಚೆ ಆಗಬೇಕು. ಲೋಕಸಭೆ ಚುನಾವಣೆಗೆ ಕೆಲವರು ರಿಪೋರ್ಟ್ ಕೊಟ್ಟಿದ್ದಾರೆ. ಇನ್ನೂ ಕೆಲವರು ಕೊಡಬೇಕಿದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us