newsfirstkannada.com

ಎಡಬಿಡದೇ ಸುರಿದ ಭಾರೀ ಮಳೆ; ಸಿಲಿಕಾನ್​ ಸಿಟಿ ಮಂದಿ ಫುಲ್​​ ಹೈರಾಣು.. ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

Share :

07-11-2023

    ರಸ್ತೆಯಲ್ಲಿ ನುಗ್ಗಿದ ಡ್ರೈನೇಜ್‌ ನೀರು ವಾಹನ ಸವಾರರ ಪರದಾಟ

    ಮಳೆಯಿಂದಾಗಿ ಕೆರೆಯಂತಾದ ಶ್ರೀರಾಂಪುರ ಅಂಡರ್ ಪಾಸ್

    ಮಲ್ಲೇಶ್ವರಂ, ಶಾಂತಿನಗರ, ವಿಜಯನಗರ ಸೇರಿ ಹಲವೆಡೆ ಮಳೆ

ಬೆಂಗಳೂರು: ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಸಿಲಿಕಾನ್​ ಸಿಟಿಯಲ್ಲಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ನಗರದ ಮಲ್ಲೇಶ್ವರಂ, ಶಾಂತಿನಗರ, ಮೈಸೂರು ಬ್ಯಾಂಕ್, ಟೌನ್ ಹಾಲ್, ವಿಜಯನಗರ, ರಾಜಾಜಿನಗರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ಇತ್ತ ಭಾರೀ ಮಳೆಗೆ ಕುರುಬರ ಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಒಂದು ಗಂಟೆಯಲ್ಲೇ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೆಳಗಿನ ಅಂಡರ್ ಪಾಸ್ ಹಾಗೂ ಶ್ರೀರಾಂಪುರ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಧಾರಾಕಾರವಾಗಿ ಮಳೆ ಸುರಿದಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ನಗರದ ಪೂರ್ವವಲಯದಲ್ಲಿ 1 ಮರ, ಮಹದೇವಪುರ ವಲಯದಲ್ಲಿ ಒಂದು ಮರ, ಹಾಗೂ ಬೆಂಗಳೂರು ದಕ್ಷಿಣದಲ್ಲಿ ಎರಡು ಮರಗಳು ಧರೆಗುರುಳಿವೆ. ನಗರದ ಏಳು ವಲಯಗಳ ಪೈಕಿ 18 ಕಡೆ ಡ್ರೈನೇಜ್ ನೀರು ರಸ್ತೆಗೆ ಬಂದಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಜಕ್ಕೂರಿನಲ್ಲಿ 113.50 ಮಿಲಿಮೀಟರ್ ಮಳೆಯಾಗಿದೆ. ಹಂಪಿನಗರದಲ್ಲಿ 86 ಮಿಲಿಮೀಟರ್, ನಾಗಪುರದಲ್ಲಿ 82.50 ಮಿಲಿಮೀಟರ್, ನಂದಿನಿ ಲೇಔಟ್​ನಲ್ಲಿ 70.60, ವಿಶ್ವನಾಥ್ ನಾಗೇನಹಳ್ಳಿಯಲ್ಲಿ 71 ಮಿಲಿಮೀಟರ್, ರಾಜಮಹಲ್ ಗುಟ್ಟಹಳ್ಳಿಯಲ್ಲಿ 69.50 ಮಿಲಿಮೀಟರ್, ಗಾಳಿ ಆಂಜನೇಯ ದೇವಸ್ಥಾನ ಬಳಿ 68 ಮಿಲಿಮೀಟರ್, ಕೊಟ್ಟಿಗೆಪಾಳ್ಯದಲ್ಲಿ 64 ಹಾಗೂ ಅಗ್ರಹಾರ ದಾಸರಹಳ್ಳಿಯಲ್ಲಿ 64 ಮಿಲಿಮೀಟರ್ ಮಳೆ ಸುರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಡಬಿಡದೇ ಸುರಿದ ಭಾರೀ ಮಳೆ; ಸಿಲಿಕಾನ್​ ಸಿಟಿ ಮಂದಿ ಫುಲ್​​ ಹೈರಾಣು.. ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

https://newsfirstlive.com/wp-content/uploads/2023/10/BNG_RAIN_1.jpg

Load More