newsfirstkannada.com

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ HDK ಪುತ್ರ..? ಈ ಬಗ್ಗೆ ನಿಖಿಲ್​​ ಹೇಳಿದ್ದೇನು..?

Share :

17-09-2023

  ಸದ್ಯದಲ್ಲೇ ಮುಂದಿನ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್​​

  ಕಾಂಗ್ರೆಸ್​ ಪಕ್ಷದ ವಿರುದ್ಧ ಜೆಡಿಎಸ್​​, ಬಿಜೆಪಿ ಜಂಟಿ ಹೋರಾಟ..!

  ಈ ಬಗ್ಗೆ ಮಾಜಿ ಸಿಎಂ ಹೆಚ್​ಡಿಕೆ ಪುತ್ರ ನಿಖಿಲ್​​ ಕುಮಾರಸ್ವಾಮಿ ಏನಂದ್ರು?

ಬೀದರ್​​: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ವಿರುದ್ಧ ಬಿಜೆಪಿ, ಜೆಡಿಎಸ್​​​ ಮೈತ್ರಿಯಾಗಿ ಸ್ಪರ್ಧಿಸುತ್ತಿವೆ. ಮಾಜಿ ಪ್ರಧಾನಿ ದೇವೇಗೌಡ್ರು, ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಹತ್ವದ ಸಭೆ ಮಾಡಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಪುತ್ರ ನಿಖಿಲ್​​ ಮಾತಾಡಿದ್ದಾರೆ.

ಇಂದು ಮಾಧ್ಯಮದವರ ಜತೆ ಮಾತಾಡಿದ ನಿಖಿಲ್​​ ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್​​ ಮೈತ್ರಿ ವಿಚಾರದ ಬಗ್ಗೆ ನಮ್ಮ ಪಕ್ಷದ ವರಿಷ್ಠರು ತೆರೆ ಎಳೆಯುತ್ತಾರೆ. ಯಾವ ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು? ಅನ್ನೋ ವಿಚಾರ ಅವರೇ ನಿರ್ಧಾರ ಮಾಡಲಿದ್ದಾರೆ ಎಂದರು.

ನಾನು ಸಿನಿಮಾ ಶೂಟಿಂಗ್​ ಆರಂಭಿಸಿ ಒಂದು ವಾರ ಆಗಿದೆ. ರಾಜಕೀಯದಿಂದ ದೂರ ಉಳಿಯಬೇಕು ಎಂದೇ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಒಂದು ಪ್ರಾದೇಶಿಕ ಪಕ್ಷ ಕಟ್ಟೋದು ಅಷ್ಟು ಸುಲಭ ಅಲ್ಲ. ದೇವೇಗೌಡರ ಹೋರಾಟದ ಶ್ರಮದಿಂದ, ಕಾರ್ಯಕರ್ತರ ಹುರುಪಿನಿಂದ ಜೆಡಿಎಸ್​ ಇದೆ. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು 25 ವರ್ಷ ಮುನ್ನಡೆಸಿಕೊಂಡು ಬಂದಿದ್ದಾರೆ. ಬಹಳಷ್ಟು ನಾಯಕರ ಕೊಡುಗೆ ಜೆಡಿಎಸ್​​ಗೆ ಇದೆ ಎಂದರು.

ಕಾರ್ಯಕರ್ತನಾಗಿ ಓಡಾಡುತ್ತೇನೆ ಎಂದ ನಿಖಿಲ್​​

ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತನಾಗಿ ಓಡಾಡಲಿದ್ದೇನೆ. ಬೀದರ್​ನಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ ಅನ್ನೋದು ಬಂಡೆಪ್ಪಾ ಅವರೇ ನಿರ್ಧಾರ ತೆಗೆದುಕೊಳ್ಳಬೇಕು. ಇವರ ಜೊತೆ ದೇವೇಗೌಡ್ರು ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ HDK ಪುತ್ರ..? ಈ ಬಗ್ಗೆ ನಿಖಿಲ್​​ ಹೇಳಿದ್ದೇನು..?

https://newsfirstlive.com/wp-content/uploads/2023/06/HDkumaraswamy-Nikhil.jpg

Load More