newsfirstkannada.com

ಕೇರಳವನ್ನು ಮತ್ತೆ ಬೆಚ್ಚಿ ಬೀಳಿಸಿದ ನಿಫಾ ವೈರಸ್.. ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

Share :

12-09-2023

    2018ರಲ್ಲಿ ನಿಫಾ ವೈರಸ್​ನಿಂದ ಕೇರಳದಲ್ಲಿ 17 ಜನ ಸಾವು

    ಮೃತನ ಸಂಬಂಧಿಗೆ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

    ಉನ್ನತ ಮಟ್ಟದ ಸಭೆ ನಡೆಸಿದ ಆರೋಗ್ಯ ಸಚಿವೆ, ಸಿಬ್ಬಂದಿ

ತಿರುವನಂತಪುರಂ: ಕೇರಳದ ಕೋಝಿಕ್ಕೋಡ್​ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ವ್ಯಕ್ತಿಗಳು ನಿಫಾ ವೈರಸ್​ನಿಂದ ಸಾವನ್ನಪ್ಪಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಸಚಿವೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದು ಇದರಿಂದ ಆರೋಗ್ಯದ ದೃಷ್ಟಿಯಿಂದ ಜನರು ಅಲರ್ಟ್ ಆಗಿರುವಂತೆ ಎಚ್ಚರಿಕೆ ನೀಡಲಾಗಿದೆ.

ಕೋಝಿಕ್ಕೋಡ್​ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವಿಗೆ ನಿಫಾ ವೈರಸ್ ಎಂದು ಹೇಳಲಾಗಿದೆ. ಅದೇ ಆಸ್ಪತ್ರೆಯಲ್ಲಿ ಒಟ್ಟು ನಾಲ್ವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ ಮೃತಪಟ್ಟ ವ್ಯಕ್ತಿಗೆ ಸಂಬಂಧಿಯಾಗಿರುವ 22 ವರ್ಷದ ಯುವಕ ಆಸ್ಪತ್ರೆಯ ಐಸಿಯುನಲ್ಲಿದ್ದಾನೆ. 4 ಮತ್ತು 9 ವರ್ಷದ ಹಾಗೂ 10 ತಿಂಗಳ ಹಸುಗೂಸು ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವಿಷ ಆಹಾರ ಸೇವಿಸಿ 78 ವಿದ್ಯಾರ್ಥಿನಿಯರು ಅಸ್ವಸ್ಥ.. ಆಸ್ಪತ್ರೆಗೆ ದಾಖಲು

ಈ ರೋಗಿಗಳ ಅನಾರೋಗ್ಯದ ಸ್ಯಾಂಪಲ್ ಅನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್​ಐವಿ)ಗೆ ಕಳುಹಿಸಲಾಗಿದೆ. ಫಲಿತಾಂಶವು ಇಂದು ಸಂಜೆ ವೇಳೆಗೆ ಬರಬಹುದು. ಆ ನಂತರವೇ ನಿಫಾ ವೈರಸ್ ಹೌದೋ, ಅಲ್ವಾ ಎಂದು ಕನ್ಫರ್ಮ್​ ಆಗಿ ಹೇಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಪರಿಸ್ಥಿತಿ ಅವಲೋಕನ ಮಾಡಲು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಿಫಾ ವೈರಸ್

2018ರಲ್ಲಿ ಕೋಝಿಕ್ಕೋಡ್​ನ ನಿವಾಸಿಗಿದ್ದ ಒಬ್ಬರಿಗೆ ನಿಫಾ ವೈರಸ್ ಕಾಣಿಸಿಕೊಂಡಿತ್ತು. ನಂತರ ಅದೇ ವರ್ಷ ಒಟ್ಟು 23 ಕೇಸ್​ಗಳು ಕಾಣಿಸಿ ಅದರಲ್ಲಿ 17 ಜನರು ನಿಫಾದಿಂದಲೇ ಸಾವನ್ನಪ್ಪಿದ್ದರು. ತದನಂತರ 2021ರಲ್ಲಿ ಮತ್ತೊಂದು ಪ್ರಕರಣ ಕಾಣಿಸಿಕೊಂಡಿತ್ತು. ಆದರೆ ಮತ್ತೆ ನಿಫಾ ಬಗ್ಗೆ ಆರೋಗ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ನಿಫಾ ವೈರಸ್‌ನ ಲಕ್ಷಣಗಳು ಏನೇನು..?

  • ತಲೆನೋವು, ಸ್ನಾಯು ನೋವು, ಜ್ವರ, ಮೆದುಳಿನಲ್ಲಿ ಜ್ವರ
  • ನಿರಂತರ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಕಾಣುತ್ತದೆ
  • ವಾಂತಿ, ಗಂಟಲು ನೋವು, ತಲೆಸುತ್ತುವಿಕೆ, ಅರೆ ನಿದ್ರಾವಸ್ಥೆ

ನಿಫಾ ವೈರಸ್ ತಡೆಗಟ್ಟುವುದು ಹೇಗೆ..?

  • ಪ್ರಾಣಿಗಳ ಆರೋಗ್ಯ ಪರೀಕ್ಷಿಸುವಾಗ ಕೈಗೆ ಗ್ಲೌಸ್ ಧರಿಸಬೇಕು
  • ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುತ್ತಿರಬೇಕು
  • ನಿಫಾದಿಂದ ಮೃತಪಟ್ಟವರ ದೇಹಗಳನ್ನು ನಿಯಮದಂತೆ ನಿರ್ವಹಣೆ ಮಾಡಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳವನ್ನು ಮತ್ತೆ ಬೆಚ್ಚಿ ಬೀಳಿಸಿದ ನಿಫಾ ವೈರಸ್.. ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

https://newsfirstlive.com/wp-content/uploads/2023/09/KERALA_NIPAH.jpg

Load More