ಕೇರಳದಲ್ಲಿ ಮತ್ತೆ ಕರಾಳ ರೂಪ ಪ್ರದರ್ಶಿಸಿದ ‘ನಿಫಾ’
ವೇಗವಾಗಿ ಹರಡುತ್ತೆ.. ಮಿಸ್ ಆದ್ರೆ ಪ್ರಾಣ ತೆಗೆಯುತ್ತೆ
‘ನಿಫಾ’ ಕಟ್ಟಿಹಾಕಲು ಆರೋಗ್ಯ ಇಲಾಖೆ ಅಲರ್ಟ್..!
ಬೆಂಗಳೂರು: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾ ವೈರೆಸ್ ಭಯ ಕಡಿಮೆ ಆಯ್ತು ಎಂದು ಜನರು ನಿಟ್ಟುಸಿರು ಬಿಡೋ ಹೊತ್ತಲ್ಲೇ ಮತ್ತೊಂದು ಮಹಾಮಾರಿ ಎಂಟ್ರಿಯಾಗಿದೆ. ಕೇರಳದಲ್ಲಿ ಜನ್ಮ ತಾಳಿದ ನಿಫಾ ರಾಜ್ಯದ ಗಡಿದಾಟಲು ಹೊಂಚು ಹಾಕಿ ಕುಳಿತಿದೆ. ಮಹಾಮಾರಿಯನ್ನ ಕಟ್ಟಿಹಾಕಿ, ರಾಜ್ಯದ ಜನತೆಯ ಹಿತ ಕಾಪಾಡಲು ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಕೇರಳದಲ್ಲಿ ಮತ್ತೆ ಕರಾಳ ರೂಪ ಪ್ರದರ್ಶಿಸಿದ ‘ನಿಫಾ’!
ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ನಿಫಾ ವೈರಸ್ನಿಂದ ಎರಡು ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಖಚಿತಪಡಿಸಿದ್ದಾರೆ. ಅಲ್ಲದೇ 9 ವರ್ಷದ ಬಾಲಕ ಸೇರಿದಂತೆ ಮತ್ತಿಬ್ಬರಿಗೆ ನಿಫಾ ವೈರಸ್ ಸೋಂಕು ತಗಲಿದೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಕೇರಳಕ್ಕೆ ಆರೋಗ್ಯ ಇಲಾಖೆ ತಂಡವನ್ನು ಕಳುಹಿಸಿ ಪರಿಸ್ಥಿತಿ ಅವಲೋಕಿಸಿದೆ. ನಿಫಾ ವೈರಸ್ ನಿರ್ವಹಣೆಯಲ್ಲಿ ಕೇರಳ ಸರ್ಕಾರಕ್ಕೆ ನೆರವು ನೀಡಲು ಸೂಚಿಸಿದೆ.
ಒಬ್ಬರಿಂದ ಒಬ್ಬರಿಗೆ ಹರಡುತ್ತೆ.. ಮಿಸ್ ಆದ್ರೆ ಪ್ರಾಣ ತೆಗೆಯುತ್ತೆ!
ನಿಫಾ ವೈರೆಸ್ ಆತಂಕ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡಿ ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡುವ ನಿಫಾ ಒಂದು ಸಲ ಅಟ್ಯಾಕ್ ಮಾಡಿದ್ರೆ ಜೀವವನ್ನ ಹಿಂಡಿ ಹಿಪ್ಪೆ ಮಾಡುತ್ತೆ. ಈ ವೈರಸ್ನಿಂದಾಗಿ ಈಗಾಗಲೇ ಹಲವು ಜನರು ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಕೇರಳದಲ್ಲಿ ಮತ್ತೆ ಅಬ್ಬರ ಶುರುಮಾಡಿರೋ ನಿಫಾ ಗಡಿದಾಟಿ ರಾಜ್ಯದ ಮೇಲೂ ದಾಳಿಮಾಡಲು ಸಜ್ಜಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದ್ಕಡೆ ಡೆಂಘೀ ಭೀತಿ ಹೆಚ್ಚಾಗಿದ್ರೆ, ಮತ್ತೊಂದ್ಕಡೆ ನಿಫಾ ವೈರಸ್ನ ಭಯ ನಗರವನ್ನ ತಲ್ಲಣಗೊಳಿಸಿದೆ. ಹೀಗಾಗಿ ಆರಂಭದಲ್ಲೇ ಕ್ರೂರಿಯನ್ನ ಕಟ್ಟಿಹಾಕಲು ಬಿಬಿಎಂಪಿ ಅಲರ್ಟ್ ಆಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ಕ್ಲೀನಿಂಗ್ ಒತ್ತು ನೀಡಲು ಅಧಿಕಾರಿಗಳು ಮುಂದಾಗಿದ್ದು, ಏರ್ಪೋರ್ಟ್ ಮೇಲೂ ನಿಗಾ ಇಡಲು ಸಜ್ಜಾಗಿದ್ದಾರೆ.
‘ನಿಫಾ’ ಕಟ್ಟಿಹಾಕಲು ಆರೋಗ್ಯ ಇಲಾಖೆ ಅಲರ್ಟ್!
ನಿಫಾ ವೈರಸ್ ಹರಡುವಿಕೆ ಬಗ್ಗೆ ರಾಜ್ಯ ಸರ್ಕಾರ ಸಹ ಅಲರ್ಟ್ ಆಗಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ದಕ್ಷಿಣ ಕನ್ನಡಕ್ಕೆ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಡಲು ಸೂಚಿಸಲಾಗಿದೆ. ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸಹ ಸೂಚಿಸಲಾಗಿದೆ.
ನಿಫಾ ವೈರಸ್ ಹರಡುವಿಕೆ ತಡೆಯಲು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಚಾಮರಾಜನಗರದ ಗಡಿ ಭಾಗದ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸಲಾಗ್ತಿದೆ. ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಮಾಂಸ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ.
ಒಟ್ನಲ್ಲಿ ಕೋವಿಡ್ ವೈರೆಸ್ ಕರಿಛಾಯೆ ಮಾಯವಾಯ್ತು ಅನ್ನೋ ಹೊತ್ತಲ್ಲೆ ನಿಫಾ ವೈರಸ್ ದೇಶದಲ್ಲಿ ಭೀತಿ ಹುಟ್ಟಿಸಿದೆ.. ಜನರು ವೈರಸ್ ಬಗ್ಗೆ ಆಲಸ್ಯ ತೋರದೇ ಮುಂಜಾಗೃತ ಕ್ರಮಗಳನ್ನ ಅನುಸರಿಸಿ ಮಾರಕ ವೈರಸ್ಗೆ ಬೇಲಿ ಹಾಕಬೇಕಿದೆ.