ಬಾಲನಟಿ ವಂಶಿಕಾ ಹೆಸರು ಹೇಳಿಕೊಂಡು ವಂಚಿಸಿದ ಆರೋಪಿ ನಿಶಾ
ಕಿರುತೆರೆ ಸೆಲೆಬ್ರಿಟಿಗಳ ಹೆಸರನ್ನು ಬಳಸಿಕೊಂಡಿರುವ ನಿಶಾ ನರಸಪ್ಪ
ಸ್ಯಾಂಡಲ್ವುಡ್ ಖ್ಯಾತ ನಟ ಹಾಗೂ ನಟಿಯರೇ ಈಕೆಗೆ ಟಾರ್ಗೆಟ್!
ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾಲ ನಟಿ ವಂಶಿಕಾ ಹೆಸರಲ್ಲಿ ಹಣ ಪಡೆದು ಮೋಸ ಮಾಡಿದ ನಿಶಾ ನರಸಪ್ಪ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಇದೀಗ ಸೆಲೆಬ್ರಿಟಿಗಳ ಹಾಗೂ ಸ್ಯಾಂಡಲ್ವುಡ್ ಖ್ಯಾತ ನಟ, ನಟಿಯರ ಹೆಸರು ಬಳಸಿಕೊಂಡು ನಿಶಾ ನರಸಪ್ಪ ಲಕ್ಷಗಟ್ಟಲೇ ಹಣ ಪೀಕಿದ ಅತಿ ದೊಡ್ಡ ಆರೋಪ ಕೇಳಿ ಬಂದಿದೆ.
ಕೇವಲ ಬಾಲನಟಿ ವಂಶಿಕಾ ಹೆಸರ ಜೊತೆಗೆ ಸ್ಯಾಂಡಲ್ವುಡ್ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಮೇಘನಾ ರಾಜ್, ರಘು ದೀಕ್ಷಿತ್, ಹೆಸರನ್ನು ಹೇಳಿ ವಂಚನೆ ಮಾಡಿದ್ದಾರೆ ಆರೋಪಿ ನಿಶಾ ನರಸಪ್ಪ ಎನ್ನಲಾಗಿದೆ. ನ್ಯೂಸ್ ಫಸ್ಟ್ಗೆ ನಿಶಾ ಮಾತನಾಡಿರುವ ಆಡಿಯೋ ಕೂಡ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡೋ ಪ್ಲ್ಯಾನ್ ಮಾಡಿದ್ದಳು. ಹೀಗಂತಾ ಜನರಿಗೆ ಹೇಳಿ ನಂಬಿಸಿದ್ದಾಳೆ ನಿಶಾ ಅನ್ನೋ ಆರೋಪವಿದೆ.
ನಿಶಾ, ಬೆಂಗಳೂರಿನ ದೊಡ್ಡ ಮಾಲ್ಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ, ನಗರದ ಹೊರಹೊಲಯದಲ್ಲಿನ ರೆಸಾರ್ಟ್ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದರು. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ.
ಇನ್ನು ಆರೋಪಿ ನಿಶಾ ನಟಿ ಶ್ವೇತಾ ಶ್ರೀವಾತ್ಸವ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದರು. ಸದ್ಯ ಪೋಷಕರು ನೀಡಿದ್ದ ದೂರಿನ ಮೇಲೆ ಆರೋಪಿ ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ