ವನ್ಷಿಕಾ ಹೆಸರಲ್ಲಿ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್
ನನ್ನ ನೇಮ್ ಹಾಳು ಮಾಡಲು ಮಾಡಿದ ಸಂಚು
ಮಾಸ್ಟರ್ ಆನಂದ್ ಪತ್ನಿ ವಿರುದ್ಧ ನಿಶಾ ಆರೋಪ
ಬೆಂಗಳೂರು: ಕೆಲ ದಿನಗಳ ಹಿಂದೆ ನಟ, ನಿರೂಪಕ ಮಾಸ್ಟರ್ ಅನಂದ್ ಮಗಳು ವನ್ಷಿಕಾ ಹೆಸರಲ್ಲಿ ಮೋಸದಾಟದ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಡೆಲ್ ನಿಶಾ ನರಸಪ್ಪ ಕಂಬಿ ಹಿಂದೆ ಬಂಧಿಯಾಗಿದ್ದಳು.
ಕಳೆದ ಜುಲೈ 21ರಂದು ಜಾಮೀನು ಮೂಲಕ ಹೊರಬಂದಿದ್ದ ನಿಶಾ ಇಂದು ಸಂಜೆ ದಿಢೀರ್ ಆಗಿ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಎಂ.ಎಸ್ ಪಾಳ್ಯದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿಶಾ, ವನ್ಷಿಕಾ ತಾಯಿ ಯಶಸ್ವಿನಿ ಹಾಗೂ ಹರ್ಷಿತ ಎಂಬಾಕೆ ವಿರುದ್ಧ ಸಾಲು ಸಾಲು ಆರೋಪಗಳ ಸುರಿಮಳೆಗೈದಿದ್ದಾಳೆ.
ನನ್ನ ವಿರುದ್ಧ ಆನಂದ್ ಪತ್ನಿ ಯಶಸ್ವಿನಿ, ಹರ್ಷಿತ ಷಡ್ಯಂತ್ರ
ನಾನು ಏಳು ವರ್ಷಗಳಿಂದ ಎನ್.ಎನ್ ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದೇನೆ. ಅದರ ಮೂಲಕ ನಾನು ಸಾಕಷ್ಟು ಇವೆಂಟ್ ಮಾಡಿದ್ದು, ನನ್ನ ಕಂಪನಿಗೆ ಒಂದೂ ಕಪ್ಪು ಚುಕ್ಕೆ ಇರಲಿಲ್ಲ. ಆದ್ರೆ ಹರ್ಷಿತಾ ಅನ್ನೋ ಎಕ್ಸ್ ಎಂಪ್ಲಾಯೀ ಮಾಡಿರೋ ಗಿಮಿಕ್ಗೆ ನಾನು ಬಲಿಯಾಗಿದ್ದೇನೆ. ಇದು ನನ್ನ ವಿರುದ್ಧ ನಡೆದ ವ್ಯವಸ್ಥಿತ ಸಂಚು ಎಂದು ನಿಶಾ ಆರೋಪಿಸಿದ್ದಾಳೆ.
ನನ್ನ ನೇಮ್ ಹಾಳು ಮಾಡೋದಕ್ಕೆ ಮಾಡಿದ ಸಂಚು
ಇವೆಲ್ಲವನ್ನೂ ಆರು ತಿಂಗಳೂ ಕಂಪ್ಲೀಟ್ ಪ್ಲ್ಯಾನ್ ಮಾಡಿ ಮಾಡಿದ್ದಾರೆ. ನನ್ನ ಮೇಲೆ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ. ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡಿದವರಿಗೆ ಯಶಸ್ವಿನಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ರು ನಿಶಾ.
ಇದೆಲ್ಲಾ ಹರ್ಷಿತಾ ಮತ್ತು ಗ್ಯಾಂಗ್ ಮಾಡಿರುವ ಪ್ಲಾನ್
ಯಶಸ್ವಿನಿಗೂ ನಮಗೂ ಒಂದು ವರ್ಷದಿಂದ ಪರಿಚಯ, ಅವರು ಪ್ರಮೋಷನ್ಗಾಗಿ ಬರುತ್ತಿದ್ರು. ಯಶಸ್ವಿನಿಯವರು ಪುಗ್ಸಟ್ಟೆ ಯಾವುದೇ ಇವೆಂಟ್ಗೆ ಬಂದಿರಲಿಲ್ಲ. ಪ್ರತಿಯೊಂದಕ್ಕೂ ಹಣ ಪಡೆದೇ ಬಂದಿದ್ದಾರೆ. ನನ್ನ ಪ್ರೊಡಕ್ಷನ್ ಕಂಪನಿಗೆ ಏಳು ವರ್ಷ, ವನ್ಷಿಕಾಗೆ ಐದು ವರ್ಷ. ನಾನು ಇವರ ಮಗಳಿಂದಲೇನಾ ಬದುಕಿರೋದು ಅಂತ ನಿಶಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸದ್ಯ ನಿಶಾ ಮಾಡಿರೋ ಸಾಲು ಸಾಲು ಆರೋಪದಿಂದ ಪ್ರಕರಣ ಇನ್ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ