newsfirstkannada.com

ಮೇಘನಾ ರಾಜ್​ ಬರ್ತಾರೆ, ರಘು ದೀಕ್ಷಿತ್​ ಹಾಡ್ತಾರೆ.. ಸೆಲೆಬ್ರಿಟಿಗಳ ಹೆಸರು ಹೇಳಿ ಲಕ್ಷಾಂತರ ಪೀಕಿದ ನಿಶಾ ನರಸಪ್ಪ

Share :

16-07-2023

  ಸೆಲೆಬ್ರಿಟಿಗಳ ಹೆಸರು ಬಳಸಿ ನಿಶಾ ಲಕ್ಷಾನುಗಟ್ಟಲೆ ಪಂಗನಾಮ

  ಬೇಬಿ ಕಂಟೆಸ್ಟ್ ಸೀಸನ್-4 ಸೇರಿ ವಿವಿಧ ಇವೆಂಟ್ ಹೆಸರಲ್ಲಿ ವಂಚನೆ

  ಸ್ಯಾಂಡಲ್​ವುಡ್​ ತಾರೆಯರ ಹೆಸರು ಹೇಳಿ ವಂಚಿಸಿದ ನಿಶಾ ನರಸಪ್ಪ

ಬಾಲ ನಟಿ ವಶ್ಷಿಕಾ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ ನಿಶಾ ನರಸಪ್ಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಈಕೆ ಪ್ರಕರಣ ಬಗೆದಷ್ಟು ಬೆಳಕಿಗೆ ಬರುತ್ತಿವೆ. ಇದೀಗ ಸೆಲೆಬ್ರಿಟಿಗಳ ಹೆಸರು ಬಳಸಿ ನಿಶಾ ಲಕ್ಷಗಟ್ಟಲೆ ಪಂಗನಾಮ ಹಾಕಿರುವ ಘಟನೆಗಳು ಮುನ್ನೆಲೆಗೆ ಬಂದಿವೆ.

ನಿಶಾ ನರಸಪ್ಪ ಮಕ್ಕಳ ಪೋಷಕರ ಜೊತೆಗೆ ಬಣ್ಣದ ಮಾತನಾಡಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.  ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಕಾರ್ಯಕ್ರಮಕ್ಕೆ ಬರ್ತಾರೆ, ಱಂಪ್ ವಾಕ್ ಮಾಡ್ತಾರೆ. ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷ ರೂಪಾಯಿ ಖರ್ಚಾಗುತ್ತೆ ಎಂದು ಬಣ್ಣದ ಮಾತನಾಡಿ ಎಳೆಯ ಮಕ್ಕಳ ಪೋಷಕರಿಗೆ ವಂಚಿಸಿದ್ದಾರೆ.

ಚೆಕ್​ ಬೌನ್ಸ್​

ಆರೋಪಿ ನಿಶಾ ನರಸಪ್ಪ ನೀಡಿದ್ದ ಚೆಕ್​​ಗಳು ಕೂಡ ಬೌನ್ಸ್ ಆಗಿವೆ ಎಂದು ಪೋಷಕರು ದೂರಿದ್ದಾರೆ. ಜೊತೆಗೆ ಪೋಷಕರ ಜೊತೆ ವಾಯ್ಸ್ ಚಾಟ್ ಮಾಡಿರುವುಸು ಸಹ ಬೆಳಕಿಗೆ ಬಂದಿವೆ. ಈ ಕುರಿತಾಗಿ ಸದಾಶಿವನಗರ ಠಾಣೆಗೆ ವಂಚಿತರಿಂದ ದೂರು ಬರುತ್ತಿವೆ.

ದಾಖಲೆಗಳ ಸಮೇತ ಪೋಷಕರ ದೂರು

ಅಂದಹಾಗೆಯೇ ನಿಶಾ ವಿರುದ್ಧ ಹಣ ನೀಡಿದ್ದಕ್ಕೆ ದಾಖಲೆಗಳ ಸಮೇತ ಪೋಷಕರು ದೂರು ನೀಡುತ್ತಿದ್ದಾರೆ. ನಿನ್ನೆ ಸಂಜೆವರೆಗೆ ಠಾಣೆಗೆ 20 ಪೋಷಕರು ಬಂದು ದೂರು ನೀಡಿದ್ದಾರೆ.

ನಿಶಾ ನರಸಪ್ಪ ಮಾಮ್ ಆ್ಯಂಡ್ ಕಿಡ್ಸ್ ಫ್ಯಾಷನ್ ವೀಕ್, ಲುಲು ಫ್ಯಾಷನ್ ಕಿಡ್ಸ್ ಮಾಡೆಲ್ ಇವೆಂಟ್​ ನಡೆಸುತ್ತಿದ್ದರು. ಇದರಲ್ಲಿ ಬೇಬಿ ಕಂಟೆಸ್ಟ್ ಸೀಸನ್-4 ಸೇರಿ ವಿವಿಧ ಇವೆಂಟ್ ಹೆಸರಲ್ಲಿ ನಿಶಾ ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಸ್ಯಾಂಡಲ್​ವುಡ್​ ತಾರೆಯರ ಹೆಸರು ಬಳಕೆ

ವಂಚಿಸುವ ಹುನ್ನಾರದದಲ್ಲಿ ನಿಶಾ ಸ್ಯಾಂಡಲ್​​ವುಡ್​ ನಟಿ ಮೇಘನಾ ರಾಜ್, ರಘು ದೀಕ್ಷಿತ್, ಶ್ವೇತಾ ಶ್ರೀವಾತ್ಸವ್ , ನಿರಂಜನ್ ದೇಶಪಾಂಡೆ ದಂಪತಿಯೂ ಬರ್ತಾರೆ ಎಂದು ಹೆಸರು ಬಳಕೆ ಮಾಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಘನಾ ರಾಜ್​ ಬರ್ತಾರೆ, ರಘು ದೀಕ್ಷಿತ್​ ಹಾಡ್ತಾರೆ.. ಸೆಲೆಬ್ರಿಟಿಗಳ ಹೆಸರು ಹೇಳಿ ಲಕ್ಷಾಂತರ ಪೀಕಿದ ನಿಶಾ ನರಸಪ್ಪ

https://newsfirstlive.com/wp-content/uploads/2023/07/Nisha-Narasappa-1.jpg

Load More