newsfirstkannada.com

‘ಗರಡಿ’ ಚಿತ್ರದ ಐಟಂ ಸಾಂಗ್​​ನಲ್ಲಿ ಸೊಂಟ ಬಳುಕಿಸಿದ ನಟಿ ನಿಶ್ವಿಕಾ ನಾಯ್ಡು; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

15-06-2023

  ಮೆಗಾಫ್ಯಾಮಿಲಿಗೆ ಕಂಡಿಷನ್​ ಹಾಕಿದ್ರಾ ಲಾವಣ್ಯ?

  ಶೂಟಿಂಗ್ ಮುಗಿಸಿದ ರಚ್ಚು- ಡಾರ್ಲಿಂಗ್ ಕೃಷ್ಣ

  ನೆಟ್​​ಫ್ಲಿಕ್ಸ್ ಜೊತೆ ನಟ ಮಹೇಶ್ ಬಾಬು ಸಿನಿಮಾ

ಶೂಟಿಂಗ್ ಮುಗಿಸಿದ ರಚ್ಚು- ಡಾರ್ಲಿಂಗ್ ಕೃಷ್ಣ

ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಡಾರ್ಲಿಂಗ್ ಕೃಷ್ಣ ನಟನೆಯ ‘ ಲವ್ ಮೀ ಆರ್ ಹೇಟ್ ಮೀ’ ಚಿತ್ರದ ಶೂಟಿಂಗ್ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಮಾತಿನ ಭಾಗವನ್ನು ಸಂಪೂರ್ಣವಾಗಿ ಮುಗಿಸಿದೆ. ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದು, ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ್ ಗಂಗಾಧರ್ ಜೊತೆಗೆ ಸ್ನೇಹಿತರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ 29ಕ್ಕೆ ಈ ಚಿತ್ರ ತೆರೆಗೆ ಬರಲಿದೆ.

ಮೆಗಾಸ್ಟಾರ್ ಚಿರಂಜೀವಿ ಸಹೋದರ ಪುತ್ರನ ಕೈ ಹಿಡೀತಿರೋ ನಟಿ ಲಾವಣ್ಯ ತ್ರಿಪಾಠಿ ಮೆಗಾ ಫ್ಯಾಮಿಲಿಗೆ ಕೆಲವು ಕಂಡಿಷನ್​ ಹಾಕಿದ್ದಾರಂತೆ. ರಿಸೆಂಟ್​ ಆಗಿ ವರುಣ್ ತೇಜ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡ ಲಾವಣ್ಯ, ಮದುವೆ ನಂತರ ನಟಿಸೋಕೆ ಅವಕಾಶ ಕೊಟ್ಟಿಲ್ಲ ಅಂದ್ರು ಪರವಾಗಿಲ್ಲ ಸಿನಿಮಾ ನಿರ್ಮಾಣ ಮಾಡೋದಕ್ಕಾದರೂ ಸಹಕರಿಸಬೇಕು ಅಂತ ಬೇಡಿಕೆಯಿಟ್ಟಿದ್ದರಂತೆ. ಜೊತೆಗೆ ಲಾವಣ್ಯ ಭರತನಾಟ್ಯ ಡ್ಯಾನ್ಸರ್ ಆಗಿರೋದ್ರಿಂದ ಡ್ಯಾನ್ಸ್​ ಪ್ರದರ್ಶನ ಮಾಡೋದಕ್ಕೂ ಅನುಮತಿ ಕೊಡಬೇಕು ಎಂಬ ಷರತ್ತು ವಿಧಿಸಿ ಮದುವೆಗೆ ಒಪ್ಪಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿದೆ.

ನಿಶ್ವಿಕಾ ನಾಯ್ಡು ಸಖತ್ ಡ್ಯಾನ್ಸ್

ಯೋಗರಾಜ್ ಭಟ್ ನಿರ್ದೇಶನದಲ್ಲಿ ತಯಾರಾಗ್ತಿರುವ ಗರಡಿ ಚಿತ್ರದ ಐಟಂ ಹಾಡು ಬಿಡುಗಡೆಯಾಗಿದ್ದು, ನಟಿ ನಿಶ್ವಿಕಾ ನಾಯ್ಡು ಅವರ ಡ್ಯಾನ್ಸ್​ ಸಿನಿಪ್ರೇಮಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಯೋಗರಾಜ್ ಭಟ್ ಸಾಹಿತ್ಯ ಹಾಗೂ ಹರಿಕೃಷ್ಣ ಮ್ಯೂಸಿಕ್ ಕಾಂಬಿನೇಷನ್​ನಲ್ಲಿ ಬಂದಿರುವ ಈ ಹಾಡನ್ನ ಮೇಘನಾ ಹಲಿಯಾಲ್ ಹಾಡಿದ್ದು, ನಿಶ್ವಿಕಾ ಡ್ಯಾನ್ಸ್​ ಹೈಲೈಟ್​ ಆಗಿದೆ. ಇನ್ನು ಬಿಸಿ ಪಾಟೀಲ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಯಶಸ್ ಸೂರ್ಯ ನಾಯಕನಾಗಿ ನಟಿಸ್ತಿದ್ದಾರೆ.

ನೆಟ್​ಫ್ಲಿಕ್ಸ್ ಜೊತೆ ಮಹೇಶ್ ಬಾಬು ಸಿನಿಮಾ!

ತೆಲುಗು ನಟ ಮಹೇಶ್ ಬಾಬು ನೆಟ್ ಫ್ಲಿಕ್ಸ್ ಜೊತೆ ಸಿನಿಮಾ ಮಾಡೋಕೆ ಮುಂದಾಗಿದ್ದಾರಂತೆ. ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ‘ಗುಂಟೂರು ಖಾರಂ’ ಚಿತ್ರ ಮಾಡ್ತಿರುವ ಪ್ರಿನ್ಸ್​, ಅದಾದ ಮೇಲೆ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ. ಈ ನಡುವೆ ನೆಟ್​​ಪ್ಲಿಕ್ಸ್​ ಜೊತೆಯೂ ಕಮಿಟ್ ಆಗಿದ್ದು, ಈ ಚಿತ್ರವನ್ನ ಅವೆಂಜರ್ಸ್​ ಎಂಡ್​ ಗೇಮ್ ಖ್ಯಾತಿಯ ರುಸ್ಸು ಬ್ರದರ್ಸ್​ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಈಗ ಟಾಲಿವುಡ್​ ಅಂಗಳದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಏಕಕಾಲಕ್ಕೆ ದೃಶ್ಯಂ 3 ಶೂಟಿಂಗ್..!

ಮಲಯಾಳಂ ಸೂಪರ್​ಹಿಟ್​ ದೃಶ್ಯಂ ಚಿತ್ರದ ಮೂರನೇ ಭಾಗ ತಯಾರಾಗಲಿದೆ. ವಿಶೇಷ ಏನಪ್ಪಾ ಅಂದ್ರೆ ದೃಶ್ಯಂ-3 ಚಿತ್ರದ ಹಿಂದಿ ಮತ್ತು ಮಲಯಾಳಂ ಅವತರಣಿಕೆಯನ್ನ ಏಕಕಾಲಕ್ಕೆ ಶೂಟ್ ಮಾಡುವ ಯೋಜನೆ ಹಾಕಿಕೊಂಡಿದೆಯಂತೆ ಚಿತ್ರತಂಡ. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ರೆ ಹಿಂದಿಯಲ್ಲಿ ಅಜಯ್ ದೇವಗನ ಕಾಣಿಸಿಕೊಳ್ಳಲಿದ್ದಾರೆ. ಎರಡೂ ಚಿತ್ರಕ್ಕೂ ಜಿತು ಜೋಸೆಫ್ ಅವರೇ ಕಥೆ ಮಾಡ್ತಿದ್ದು, ಶೀಘ್ರದಲ್ಲೇ ಸಿನಿಮಾ ಆರಂಭಿಸಲಿದ್ದಾರಂತೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ಗರಡಿ’ ಚಿತ್ರದ ಐಟಂ ಸಾಂಗ್​​ನಲ್ಲಿ ಸೊಂಟ ಬಳುಕಿಸಿದ ನಟಿ ನಿಶ್ವಿಕಾ ನಾಯ್ಡು; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/06/movie-2.jpg

Load More