ಜೋಧಾ ಅಕ್ಬರ್, ದೇವದಾಸ್ ಅಂತಹ ಸಿನಿಮಾಗಳ ಕಲೆಗಾರ
ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲೇ ಗುರುತಿಸಿಕೊಂಡಿದ್ದ ಕಲಾವಿದ
ಕಲಾವಿದನ ಆತ್ಮಹತ್ಯೆ ಬಗ್ಗೆ ಶಾಸಕ, ಎಸ್ಪಿ ಹೇಳುವುದು ಏನು?
ಮುಂಬೈ: ಜೋಧಾ ಅಕ್ಬರ್, ದೇವದಾಸ್, ಲಗಾನ್‌ನಂತಹ ಸಿನಿಮಾಗಳ ಕಲಾ ಮಾಂತ್ರಿಕ. ಬಾಲಿವುಡ್‌ನ ಪ್ರಸಿದ್ಧ ಕಲಾ ನಿರ್ದೇಶಕ ನಿತಿನ್ ದೇಸಾಯಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮುಂಬೈನ ಕರ್ಜತ್‌ನಲ್ಲಿನ ತಮ್ಮ ND ಸ್ಟುಡಿಯೋದಲ್ಲಿ ನಿತಿನ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಲಾ ನಿರ್ದೇಶಕ ನಿತಿನ್ ದೇಸಾಯಿ ಇದೇ ಆಗಸ್ಟ್ 9 ರಂದು 58ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅವರ ND ಸ್ಟುಡಿಯೋ ನನ್ನ ಕ್ಷೇತ್ರದ ವ್ಯಾಪ್ತಿ ಬರುತ್ತದೆ. ಆದ್ರೆ ಅವರು ಕೆಲ ದಿನಗಳಿಂದ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೋಟಿ, ಕೋಟಿ ಸಾಲಗಳಿಂದ ಹೊರ ಬರಲಾಗದೇ ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಾಸಕ ಮಹೇಶ್ ಬಲ್ಡಿ ಹೇಳಿಕೆ ನೀಡಿದ್ದಾರೆ.
ಬಾಲಿವುಡ್‌ನ ಹಲವಾರು ಸಿನಿಮಾಗಳಿಗೆ ಆರ್ಟ್ ಡೈರೆಕ್ಟ್ ಮಾಡಿದ್ದ ನಿತಿನ್ ದೇಸಾಯಿ ಇಂದು ಬೆಳಗ್ಗೆ 4:30 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ನಾವು ಸ್ಥಳಕ್ಕೆ ಆಗಮಿಸಿದೆವು. ಅವರ ಆತ್ಮಹತ್ಯೆ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತದೆ ಎಂದು SP ಸೋಮನಾಥ್ ಜಾರ್ಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ