newsfirstkannada.com

1,400 ಕಿ.ಮೀ​ ಉದ್ದ, 3 ದೇಶಗಳ ಸಂಪರ್ಕ; ಅಟಲ್ ಕನಸಿನ ಈ ಬೃಹತ್ ಹೆದ್ದಾರಿ ಆರಂಭವಾಗೋದು ಯಾವಾಗ?

Share :

04-07-2023

  ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ನಡುವೆ ನಡೀತಿದೆ ಹೆದ್ದಾರಿ ಕಾಮಗಾರಿ

  ಅಟಲ್ ಬಿಹಾರಿ ವಾಜಪೇಯಿ ಕನಸು ನನಸಾಗೋದು ಯಾವಾಗ

  ಭಾರತದ ಯಾವ ರಾಜ್ಯದ ನಗರದಿಂದ ಹೆದ್ದಾರಿ ಪ್ರಾರಂಭ ಆಗುತ್ತೆ?

ನವದೆಹಲಿ: ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ನಡುವೆ ನಿರ್ಮಿಸಲಾಗುತ್ತಿರುವ ತ್ರಿಪಕ್ಷೀಯ ಬೃಹತ್​ ಹೆದ್ದಾರಿಯ ಕೆಲಸ ಈಗಾಗಲೇ ಶೇ. 70 ರಷ್ಟು ಮುಗಿದಿದೆ. ಸಂಪೂರ್ಣ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಇನ್ನೂ 3-4 ವರ್ಷಗಳು ಬೇಕಾಗಲಿವೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ.

ಈ ಬೃಹತ್​ ಹೆದ್ದಾರಿಯು ಒಟ್ಟು 1,400 ಕಿಲೋ ಮೀಟರ್​ ಉದ್ದ ಇದ್ದು 3 ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸಲಿದೆ. ಈ ಬೃಹತ್​ ಹೆದ್ದಾರಿಗಾಗಿ ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ಶ್ರಮಿಸುತ್ತಿವೆ. ಈ ಹೆದ್ದಾರಿಯು ಮುಂದಿನ ದಿನಗಳಲ್ಲಿ ವ್ಯಾಪಾರ- ವ್ಯವಹಾರ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದರು.

ಈ ಯೋಜನೆಯನ್ನು 2002ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾಜಿ ಪ್ರಧಾನಿ ದಿವಂಗತ ವಾಜಪೇಯಿಯವರು ಪ್ರಸ್ತಾಪ ಮಾಡಿದ್ದರು. ನಂತರದ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಯೋಜನೆ 2019ರಲ್ಲಿ ಪೂರ್ಣ ಮಾಡಲಾಗುವುದು ಎಂದು ಮೊದಲು ಹೇಳಲಾಗಿತ್ತು. ಆದ್ರೆ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರಿಂದ ಇನ್ನೂ 3-4 ವರ್ಷದಲ್ಲಿ ಮುಕ್ತಾಯಗೊಳಲ್ಲಿದೆ ಎಂದು ನಿತಿನ್​ ಗಡ್ಕರಿ ಹೇಳಿದ್ದಾರೆ.

ಈ ಹೈವೇಯು ಮಣಿಪುರ ರಾಜ್ಯದಲ್ಲಿನ ಅಂತಾರಾಷ್ಟ್ರೀಯ ಗಡಿ ನಗರ ಮೋರೆ ಬಳಿ ಭಾರತದಿಂದ ಸಂಪರ್ಕ ಪ್ರಾರಂಭ ಆಗುತ್ತದೆ. ಇಲ್ಲಿಂದ ನೇರ ಮ್ಯಾನ್ಮಾರ್ ಗಡಿ ದಾಟಿದ ಬಳಿಕ ಬರುವ ಥೈಲ್ಯಾಂಡ್‌ನ ಮೇಸೂಟ್​ ನಗರದ ಬಳಿ ಕೊನೆಯಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1,400 ಕಿ.ಮೀ​ ಉದ್ದ, 3 ದೇಶಗಳ ಸಂಪರ್ಕ; ಅಟಲ್ ಕನಸಿನ ಈ ಬೃಹತ್ ಹೆದ್ದಾರಿ ಆರಂಭವಾಗೋದು ಯಾವಾಗ?

https://newsfirstlive.com/wp-content/uploads/2023/07/NITIN_GADKARI_MINISTER.jpg

Load More