newsfirstkannada.com

ಮೋದಿ ಮಣಿಸಲು ವಿಪಕ್ಷಗಳ ಒಗ್ಗೂಡಿಸಲು ನಿತೀಶ್ ಕುಮಾರ್ ಪ್ಲಾನ್.. ಇವತ್ತಿನ ಸಭೆಯಲ್ಲಿ ಆ 2 ಪಕ್ಷಗಳ ನಡೆ ತೀವ್ರ ಕುತೂಹಲ..!

Share :

23-06-2023

    ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ

    NDA ಒಕ್ಕೂಟ ಮಣಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ಲಾನ್

    ರಾಹುಲ್, ಖರ್ಗೆ ಸೇರಿ ಯಾರೆಲ್ಲ ನಿತೀಶ್ ಜೊತೆ ಕೈಜೋಡಿಸ್ತಾರೆ?

ದೇಶದ ಬಹುತೇಕ ರಾಜಕೀಯ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯತ್ತ ತಮ್ಮ ಚಿತ್ತ ಹರಿಸಲು ಶುರುಮಾಡಿವೆ. ಅಧಿಕಾರದಲ್ಲಿರುವ ಎನ್​ಡಿಎ ಸರ್ಕಾರವನ್ನು ಕಿತ್ತೊಗೆಯಲು ವಿಪಕ್ಷಗಳು ಚಿಂತನೆ ನಡೆಸಿದ್ರೆ, ಮತ್ತೆ ಹೇಗೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಲೆಕ್ಕಾಚಾರದಲ್ಲಿ ಮೋದಿ ನೇತೃತ್ವದ ಟೀಂ ಇದೆ.

ಒಗ್ಗಟ್ಟಿನ ಮಂತ್ರ ಜಪಿಸಿದ ನಿತೀಶ್

ಹಿನ್ನೆಲೆಯಲ್ಲಿ ಇವತ್ತು ಬಿಹಾರದ ಪಾಟ್ನಾದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ವಿಪಕ್ಷಗಳ ಒಗ್ಗಟ್ಟಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕರ ಜತೆ ಸಮಾಲೋಚನೆ ನಡೆಸುತ್ತಿದ್ದು, ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವ ಚರ್ಚೆ ನಡೆಸಲಿದ್ದಾರೆ.

ನಿತೀಶ್ ಕುಮಾರ್ ಸಲಹೆ ಏನು..?

ನಿತೀಶ್ ಕುಮಾರ್ ನೇತೃತ್ವದ ಇವತ್ತಿನ ಸಭೆ ರಾಜಕೀಯವಾಗಿ ತುಂಬಾನೇ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಸೋಲಿಸಬೇಕೆಂದರೆ ವಿಪಕ್ಷಗಳು ಒಟ್ಟಾಗಬೇಕು. ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಲಾಭ ಆಗಲಿದೆ. ಒಂದು ಕ್ಷೇತ್ರದಲ್ಲಿ ವಿಪಕ್ಷದಿಂದ ಒಬ್ಬ ಅಭ್ಯರ್ಥಿ ನಿಲ್ಲಬೇಕು. ಹೀಗೆ ಮಾಡಿದರೆ ಮಾತ್ರ ಬಿಜೆಪಿಯನ್ನು ಸೋಲಿಸಬಹುದು. ಅಭ್ಯರ್ಥಿಗಳು ಹೆಚ್ಚಾದಷ್ಟು ಮತಗಳ ವಿಭಜನೆ ಆಗಲಿದೆ. ಹೀಗಾಗಿ ವಿಪಕ್ಷಗಳೆಲ್ಲ ಒಟ್ಟಾಗಿ ಸ್ಪರ್ಧೆ ಮಾಡಬೇಕಿದೆ. ಈ ವಿಚಾರವನ್ನು ನಿತೀಶ್ ಕುಮಾರ್ ಅವರು ವಿಪಕ್ಷಗಳ ಮುಂದೆ ಇಡಲಿದ್ದಾರೆ.

2 ಪಕ್ಷಗಳ ನಡೆ ಕುತೂಹಲ

ಈಗಾಗಲೇ ಈ ವಿಚಾರವನ್ನು ನಿತೀಶ್ ಕುಮಾರ್ ವಿಪಕ್ಷಗಳ ಮುಂದೆ ಇಟ್ಟಿದ್ದಾರೆ. ಇವತ್ತಿನ ಸಭೆಯಲ್ಲಿ ಇದು ಚರ್ಚೆಯಾಗುವ ಸಾಧ್ಯತೆ ಇದೆ. ಆದರೆ, ವಿಪಕ್ಷಗಳು ಒಗ್ಗೂಡುವುದು ಅಷ್ಟು ಸುಲಭವಿಲ್ಲ. ಕಾಂಗ್ರೆಸ್ ನಾಯಕತ್ವಕ್ಕೆ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ, ಮಮತಾ ಬ್ಯಾನರ್ಜಿಯ ಟಿಎಂಸಿ ಒಪ್ಪುತ್ತಿಲ್ಲ. ನಿತೀಶ್ ಕುಮಾರ್ ಯೋಚನೆ ಬಗ್ಗೆ ಕೇಜ್ರಿವಾಲ್, ಮಮತಾ ನಿಲುವು ಏನು ಅನ್ನೋದು ಕುತೂಹಲ ಮೂಡಿಸಿದೆ.

ಬಂಗಾಳದಲ್ಲಿ ಕಾಂಗ್ರೆಸ್-ಎಡಪಕ್ಷಗಳ ನಡುವಿನ ಸ್ನೇಹದ ಬಗ್ಗೆ ಮಮತಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಎಡಪಕ್ಷಗಳೆಂದರೆ ಮಮತಾ ಬ್ಯಾನರ್ಜಿ ಕೆಂಡ ಕಾರುತ್ತಿರುತ್ತಾರೆ. ‘ರಾಷ್ಟ್ರೀಯ ಮೈತ್ರಿ’ ಈ ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುತ್ತೆ ಎನ್ನುವ ಕುತೂಹಲ ಕೂಡ ಇದೆ.

ಇತ್ತ ಪಂಜಾಬ್​ನಲ್ಲಿ ‘ಆಮ್ ಆದ್ಮಿ’ಗೆ ಕಾಂಗ್ರೆಸ್ ಬಲಿಷ್ಠ ಎದುರಾಳಿ. ಇತರೆ ಕೆಲವು ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಎದುರಾಳಿಯಾಗಿದೆ. ಇನ್ನು ಸಭೆಯಿಂದ ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಒಡಿಶಾದ ಬಿಜು ಜನತಾ ದಳ (ಬಿಜೆಡಿ) ದೂರ ಉಳಿದಿವೆ. ಮತ್ತೊಂದು ಕಡೆ ಮಾಯಾವತಿ ಅವರ ಬಿಎಸ್ಪಿ ಪಕ್ಷಕ್ಕೆ ಇವತ್ತಿನ ಸಭೆಗೆ ಆಹ್ವಾನ ಇಲ್ಲ.

ಸಭೆಯಲ್ಲಿ ಯಾರೆಲ್ಲ ಭಾಗಿ..?

ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅರವಿಂದ ಕೇಜ್ರಿವಾಲ್‌, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್‌, ಹೇಮಂತ್‌ ಸೊರೆನ್‌, ಅಖಿಲೇಶ್‌ ಯಾದವ್‌, ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಫರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಮ್‌ ಯೆಚೂರಿ, ಡಿ ರಾಜಾ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಮಣಿಸಲು ವಿಪಕ್ಷಗಳ ಒಗ್ಗೂಡಿಸಲು ನಿತೀಶ್ ಕುಮಾರ್ ಪ್ಲಾನ್.. ಇವತ್ತಿನ ಸಭೆಯಲ್ಲಿ ಆ 2 ಪಕ್ಷಗಳ ನಡೆ ತೀವ್ರ ಕುತೂಹಲ..!

https://newsfirstlive.com/wp-content/uploads/2023/06/NITISHKUMAR-1.jpg

Load More