newsfirstkannada.com

×

ಟ್ಯಾಂಕ್​ನಲ್ಲಿ ಮೀನು ಬಿಡಿ ಎಂದಿದ್ದೇ ತಪ್ಪಾಯ್ತು; ಸಿಎಂ ಹೋದ ನಂತರ ನಡೆದಿದ್ದು ಅಕ್ಷರಶಃ ಲೂಟಿ

Share :

Published September 21, 2024 at 6:16am

    ಬಿಹಾರದ ಸಹರ್ಸಾದಲ್ಲಿ ಎಕ್ಸಿಬ್ಯೂಷನ್​ನಲ್ಲಿ ಅತ್ಯಂತ ನಾಚಿಗೇಡಿನ ಕೆಲಸ

    ಸಿಎಂ ಇರುವರೆಗೂ ಸುಮ್ಮನಿದ್ದು, ಹೋದ ಬಳಿಕ ನಡೆಯಿತು ಮೀನಗಳ ಲೂಟಿ

    ಮೀನು ಸಾಕಾಣಿಕೆ ತಿಳಿಸಲು ತಂದಿದ್ದಂತ ಟ್ಯಾಂಕ್​ನಲ್ಲಿದ್ದ ಮೀನುಗಳೇ ಲೂಟಿ

ಬಿಹಾರದ ಮುಖ್ಯಮಂತ್ರಿ ಸಹರ್ಸಾ ಜಿಲ್ಲೆಗೆ ಭೇಟಿ ಕೊಟ್ಟು ವಾಪಸ್ ತೆರಳಿದ ಬಳಿಕ ದೊಡ್ಡ ಕೋಲಾಹಲವೇ ನಡೆದು ಹೋಗಿದೆ. ಸಿಎಂ ನಿತಿಶ್ ಕುಮಾರ್ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆಂದು ಸಹರ್ಸಾ ಜಿಲ್ಲೆಗೆ ಬಂದಿದ್ದರು ದೇವಿ ವಿಶಾರಿ ಮಂದಿರಕ್ಕೆ ಭೇಟಿ ನೀಡಿದ ನಿತೀಶ್ ಕುಮಾರ್ ಕೊನೆಗೆ ಸಹರ್ಸಾದಲ್ಲಿ ಹಲವು ಕಾರ್ಯಕ್ರಮಗಳ ಉದ್ಘಾಟನೆಯನ್ನು ಕೈಗೊಂಡರು. ಈ ವೇಳೆ ಅಲ್ಲಿ ಅನೇಕ ವಸ್ತು ಪ್ರದರ್ಶನವನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಒಂದು ಬಯೋಫ್ಲಾಕ್ ಟ್ಯಾಂಕ್ ಅಂದ್ರೆ ಮೀನು ಸಾಕಾಣಿಕೆ ಬಗ್ಗೆ ತಿಳುವಳಿಕೆ ನೀಡುವ  ಟ್ಯಾಂಕ್ ಕೂಡ ಇತ್ತು. ಆದ್ರೆ ಆ ಟ್ಯಾಂಕ್​ನಲ್ಲಿ ನೀರು ಮಾತ್ರವಿದ್ದು ಮೀನು ಇರಲಿಲ್ಲ. ಇದನ್ನು ನೋಡಿದ ಸಿಎಂ ನಿತೀಶ್ ಕುಮಾರ್ ಟ್ಯಾಂಕ್​ನಲ್ಲಿ ಮೀನು ಹಾಕಿದರೆ ಮಾತ್ರ ಇದರ ಬಗ್ಗೆ ಪೂರ್ತಿ ಅರ್ಥವಾಗಲು ಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು.. ತುಪ್ಪದಲ್ಲಿ ಕಲಬೆರಕೆ ಬೆರೆಸಿದ್ದು ಯಾರು? ಇಲ್ಲಿದೆ ಅಸಲಿ ವಿಷ್ಯ!

ಅದಕ್ಕೆ ಸಮ್ಮತಿಸಿದ ಪ್ರದರ್ಶನಕಾರರು ಟ್ಯಾಂಕ್​ನಲ್ಲಿ ಮೀನುಗಳನ್ನು ತುಂಬಿಸಿದ್ದಾರೆ. ಸಿಎಂ ಹೋಗುವುದನ್ನೇ ಕಾಯುತ್ತಿದ್ದರೋ ಏನೋ ಜನರು. ಅತ್ತ ಸಿಎಂ ಹೆಲಿಕಾಪ್ಟರ್ ಮೇಲೆ ಹಾರುತ್ತಿದ್ದಂತೆ, ಅಲ್ಲಿ ಬಂದಿದ್ದ ಮಕ್ಕಳು ಹದಿವಯಸ್ಸಿನವರೆಲ್ಲಾ ಆ ಮೀನು ಸಾಕಾಣಿಕೆಯ ಟ್ಯಾಂಕಿಗೆ ಹಾರಿದ್ದಾರೆ. ಒಬ್ಬರ ಮೇಲೋಬ್ಬರು ಬಿದ್ದು ಮೀನುಗಳನ್ನು ಲೂಟಿ ಮಾಡಿದ್ದಾರೆ. ಸಿಕ್ಕ ಮೀನುಗಳನ್ನು ಆಕಾಶದತ್ತ ಹಿಡಿದು ಗೆದ್ದು ಬೀಗಿದ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: tirupati laddu: ತುಪ್ಪದಲ್ಲಿ ದನದ ಕೊಬ್ಬಿನ ತಪ್ಪು ಒಪ್ಪಿಕೊಂಡ TTD; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಸ್ಥಳೀಯರ ಅಧಿಕಾರಿಗಳು, ಪೊಲೀಸರು ತಡೆಯಲು ಎಷ್ಟೇ ಪ್ರಯತ್ನ ಮಾಡಿದರು ಕೂಡ ಮೀನಿನ ಟ್ಯಾಂಕ್​ಗೆ ಇಳಿದ ಪಡೆ ಯಾರಿಗೂ ಕ್ಯಾರೆ ಅಂದಿಲ್ಲ. ಕೈಗೆ ಸಿಕ್ಕಷ್ಟು ಮೀನಗಳನ್ನು ಹಿಡಿದುಕೊಂಡು ಹುರೇಽ ಅಂತಂದುಕೊಂಡು ಮನೆಯ ಕಡೆಗೆ ಓಡಿದ್ದಾರೆ. ಸದ್ಯ ಮೀನುಗಳ ಲೂಟಿಗೆ ಇಳಿದ ಯುವಕರ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು. ಒಬ್ಬರ ಮೇಲೋಬ್ಬರು ಬಿದ್ದು ಹೊರಳಾಡಿ ಮೀನು ಹಿಡಿದುಕೊಂಡು ಓಡಿ ಹೋಗಿರುವ ದೃಶ್ಯ ಇದು ನಿಜಕ್ಕೂ ನಾಗರಿಕ ಸಮಾಜವಾ ಎಂದು ಪ್ರಶ್ನೆ ಮಾಡುವಂತಿದೆ.

ಇನ್ನು ಅವರಲ್ಲಿ ದಿವ್ಯಾಂಶು ಕುಮಾರ್ ಎಂಬುವನನ್ನು ಮಾತನಾಡಿಸಿದಾಗ ಅವನು ಹೇಳಿದ್ದು ನಾವೇನು ಸಿಎಂ ಅವರನ್ನು ನೋಡಲು ಬಂದಿರಲಿಲ್ಲ. ಮನೆಗೆ ಮೀನು ತೆಗೆದುಕೊಂಡು ಹೋಗಲು ಬಂದಿದ್ದು ಎಂದು ಹೇಳಿದ್ದಾನೆ. ಅಷ್ಟು ಮಾತ್ರವಲ್ಲ ನಮ್ಮೆಲ್ಲರ ಕಣ್ಣು ಮೀನಿನ ಮೇಲೆ ಇದ್ದವು. ನಾವು ಸಿಎಂ ಹೋಗುವುದನ್ನೇ ಕಾಯುತ್ತಿದ್ದೇವು. ಅವರು ಹೋದ ಕೂಡಲೇ ನಾವು ನಮಗೆ ಸಿಕ್ಕಷ್ಟು ಮೀನುಗಳನ್ನು ತೆಗೆದುಕೊಂಡು ಹೊರಟಿದ್ದೇವೆ ಎಂದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ಯಾಂಕ್​ನಲ್ಲಿ ಮೀನು ಬಿಡಿ ಎಂದಿದ್ದೇ ತಪ್ಪಾಯ್ತು; ಸಿಎಂ ಹೋದ ನಂತರ ನಡೆದಿದ್ದು ಅಕ್ಷರಶಃ ಲೂಟಿ

https://newsfirstlive.com/wp-content/uploads/2024/09/FISH-LOOTED.jpg

Load More