newsfirstkannada.com

Video- ವಿಧಾನಸಭೆಯಲ್ಲೇ ಮಹಿಳೆಯರ ಲೈಂಗಿಕ ಶಿಕ್ಷಣದ ಬಗ್ಗೆ ಕೆಟ್ಟದಾಗಿ ಮಾತಾಡಿದ ಸಿಎಂ​​; ಭಾರೀ ವಿರೋಧ

Share :

08-11-2023

    ಹೊಸದಾಗಿ ಮದುವೆ ಆದವ್ರು ಕೊನೆಯಲ್ಲಿ ಜಾಗ್ರತೆ ವಹಿಸಬೇಕು

    ನವ ದಂಪತಿಯ ಏಕಾಂತ ಸಮಯದ ಬಗ್ಗೆ ಮಾತನಾಡಿದ ಸಿಎಂ

    ನಿತೀಶ್ ಕುಮಾರ್ ವಿರುದ್ಧ ಟೀಕೆ ಮಾಡುತ್ತಿರುವ ಮಹಿಳಾ ಶಾಸಕರು

ಪಾಟ್ನಾ: ವಿಧಾನಸಭೆ ಕಲಾಪದ ವೇಳೆ ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವ ಕುರಿತು ಮಾತನಾಡುವಾಗ ಸಿಎಂ ನಿತೀಶ್ ಕುಮಾರ್ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಸದ್ಯ ಸಿಎಂ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಎಂ ನಿತೀಶ್ ಕುಮಾರ್ ಅವರು ಬಳಕೆ ಮಾಡಿರುವ ಪದ ಕುರಿತು ಮಹಿಳಾ ಶಾಸಕರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ಮಾತನಾಡಿದ ಸಿಎಂ ನಿತೀಶ್ ಕುಮಾರ್, ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆ ಪಾತ್ರ ಮುಖ್ಯವಾಗಿದೆ. ಹೊಸದಾಗಿ ಮದುವೆಯಾದ ದಂಪತಿ ಏಕಾಂತವಾಗಿ ಸೇರುವಾಗ ಏನೇನು ಮಾಡಬೇಕು ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ. ದಂಪತಿ ಏಕಾಂತವಾಗಿ ಸೇರಿದ್ದಾಗ ಕೊನೆಯಲ್ಲಿ ಮಹಿಳೆಯು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡುತ್ತಿವೆ.

ಸಿಎಂ ಮಾತನಾಡಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಡಿಸಿಎಂ ತೇಜಸ್ವಿ ಯಾದವ್ ಮಾತನಾಡಿ, ಇದನ್ನು ತಪ್ಪಾಗಿ ಅರ್ಥೈಸಬಾರದು. ಲೈಂಗಿಕ ಶಿಕ್ಷಣದ ಬಗ್ಗೆ ಜನರು ಹಿಂಜರಿಯುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳು ವಿಜ್ಞಾನ, ಜೀವಶಾಸ್ತ್ರವನ್ನು ಕಲಿಯುತ್ತಿದ್ದಾರೆ. ಅದನ್ನು ಪ್ರಾಯೋಗಿಕವಾಗಿ ಮಾಡಬೇಕು. ಇದರಿಂದ ದೇಶದ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದು ಹೇಳಿ, ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- ವಿಧಾನಸಭೆಯಲ್ಲೇ ಮಹಿಳೆಯರ ಲೈಂಗಿಕ ಶಿಕ್ಷಣದ ಬಗ್ಗೆ ಕೆಟ್ಟದಾಗಿ ಮಾತಾಡಿದ ಸಿಎಂ​​; ಭಾರೀ ವಿರೋಧ

https://newsfirstlive.com/wp-content/uploads/2023/11/CM_NITISH_KUMAR.jpg

Load More