ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ
ವಿಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ
ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯಂಗ್ಸ್ಟರ್ ನಿತೀಶ್ ರಾಣಾ
ಟೆಸ್ಟ್, ಒನ್ ಡೇ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರೋ ಈ ಟಿ20 ಸರಣಿಗೆ ಈಗಾಗಲೇ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ರೆಸ್ಟ್ ನೀಡಿದ್ದು, ಹೊಸಬರಿಗೆ ಟೀಂ ಬಿಸಿಸಿಐ ಮಣೆ ಹಾಕಿದೆ.
ಇನ್ನು, ಟೀಂ ಇಂಡಿಯಾದ ಟಿ20 ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ವೈಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಇಬ್ಬರಿಗೂ ವಿಕೆಟ್ ಕೀಪಿಂಗ್ ಕೋಟಾದಲ್ಲಿ ಅವಕಾಶ ನೀಡಲಾಗಿದೆ.
ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾಗೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ T20 ಸರಣಿಗೆ ಅವಕಾಶ ನೀಡಿರೋ ಸೆಲೆಕ್ಷನ್ ಕಮಿಟಿ ನಿತೀಶ್ ರಾಣಾ, ರಿಂಕು ಸಿಂಗ್‌ಗೆ ಅವಕಾಶ ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಕೆಕೆಆರ್ ತಂಡದ ಕ್ಯಾಪ್ಟನ್ ನಿತೀಶ್ ರಾಣಾ ಪೋಸ್ಟ್ವೊಂದು ಹಾಕಿದ್ದು, ಭಾರೀ ವೈರಲ್ ಆಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ನಿತೀಶ್ ರಾಣಾ, ಕೆಟ್ಟ ದಿನಗಳು ಒಳ್ಳೆಯ ದಿನಗಳನ್ನು ತರಲಿವೆ ಎಂದು ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
— Nitish Rana (@NitishRana_27) July 5, 2023
ನಿತೀಶ್ ರಾಣಾ, ರಿಂಕು ಸಿಂಗ್ ಇಬ್ಬರು ಕೆಕೆಆರ್ ತಂಡದ ಪಿಲ್ಲರ್ಸ್. ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ನಿತೀಶ್ ಆಡಿದ 14 ಪಂದ್ಯಗಳಲ್ಲಿ 413 ರನ್ ಸಿಡಿಸಿದ್ರೆ, ರಿಂಕು ಮಾತ್ರ 14 ಪಂದ್ಯಗಳಲ್ಲಿ 149 ಸ್ಟ್ರೈಕ್ ರೇಟ್ನೊಂದಿಗೆ 474 ರನ್ ಕಲೆ ಹಾಕಿದ್ರು.
ಟೀಂ ಇಂಡಿಯಾ ಟಿ20 ಟೀಂ ಹೀಗಿದೆ..!
ಇಶಾನ್ ಕಿಶನ್ ( ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ ( ಉಪ ನಾಯಕ ), ಸಂಜು ಸ್ಯಾಮ್ಸನ್ ( ವಿಕೆಟ್ ಕಿಪರ್), ಹಾರ್ದಿಕ್ ಪಾಂಡ್ಯ ( ನಾಯಕ ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ